Home ಜಿಲ್ಲೆ ಕಲಬುರಗಿ ಕಲಬುರಗಿ ಕೆ.ಜಿ.ಟಿ.ಟಿ.ಐ. ದಲ್ಲಿಯಶಸ್ವಿಯಾಗಿ ಜರುಗಿದ ಇನ್ಕುö್ಯಬೇಷನ್ ಕಾರ್ಯಾಗಾರ

ಕಲಬುರಗಿ ಕೆ.ಜಿ.ಟಿ.ಟಿ.ಐ. ದಲ್ಲಿಯಶಸ್ವಿಯಾಗಿ ಜರುಗಿದ ಇನ್ಕುö್ಯಬೇಷನ್ ಕಾರ್ಯಾಗಾರ

ಕಲಬುರಗಿ,ಫೆ.೨೪: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ವತಿಯಿಂದ ವಿಶ್ವ ಬ್ಯಾಂಕ್ ನೆರವಿನ ಕೇಂದ್ರ ಪುರಸ್ಕೃತ ಮಹತ್ವಾಕಾಂಕ್ಷಿ ಆರ್.ಎ.ಎಮ್.ಪಿ. (ಖಂಒP) ಯೋಜನೆಯಡಿ ಅಂತಿಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳಿಗೆ ಸೋಮವಾರ ಕಲಬುರಗಿ (ಕೆ.ಜಿ.ಟಿ.ಟಿ.ಐ) ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಇನ್ಕುö್ಯಬೇಷನ್ (Iಟಿಛಿubಚಿಣioಟಿ) ಕಾರ್ಯಾಗಾರವು ಯಶಸ್ವಿಯಾಗಿ ಜರುಗಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು, ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು ಇನ್ಕುö್ಯಬೇಷನ್ (Iಟಿಛಿubಚಿಣioಟಿ) ಕಾರ್ಯಾಗಾರದ ಸದುಪಯೋಗ ಪಡೆಯಬೇಕು. ಜಿಲ್ಲೆಯ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಇನ್ಕುö್ಯಬೇಷನ್ (Iಟಿಛಿubಚಿಣioಟಿ) ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯು ಇನ್ಕುö್ಯಬೇಷನ್ ಹಬ್ (Iಟಿಛಿubಚಿಣioಟಿ ಊub) ಆಗಿ ಹೊರಹೊಮ್ಮಲಿದೆವೆಂದು ಆಶಯ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್ ಅವರು ಆರ್.ಎ.ಎಮ್.ಪಿ. (ಖಂಒP) ಯೋಜನೆ ಹಾಗೂ ಇನ್ಕುö್ಯಬೇಷನ್ (Iಟಿಛಿubಚಿಣioಟಿ) ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲಬುರಗಿ ಕೆ.ಜಿ.ಟಿ.ಟಿ.ಐ. ನಿರ್ದೇಶಕ ಶ್ರೀ ರಾಜೇಶ ಬಾವಗಿ ಅವರು, ಇನ್ಕುö್ಯಬೇಷನ್ (Iಟಿಛಿubಚಿಣioಟಿ) ದಿಂದ ತಾಂತ್ರಿಕ ವಿದ್ಯಾರ್ಥಿಗಳಿಗೆ ಅವರ ನವೋದ್ಯಮ (Sಣಚಿಡಿಣ-uಠಿ) ಪ್ರಾರಂಭಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ರಾಘವೇಂದ್ರ ಆರ್.ಪಿ., ಕೆ.ಎಸ್.ಎಫ್.ಸಿ. ಶಾಖಾ ವ್ಯವಸ್ಥಾಪಕ ಡಾ|| ಚಂದ್ರಕಾAತ ಚಂದಾಪೂರ, ಸಿಡಾಕ್ ಹಿರಿಯ ತರಬೇತಿದಾರ ಸಯ್ಯದ್ ಅಶ್ಫಾಕ್ ಅಹ್ಮದ್, ಸಹಾಯಕ ನಿರ್ದೇಶಕರುಗಳಾದ ಕು.ರುಪಾಲಿ ಶೇರಖಾನೆ, ಜಾಫರ್ ಖಾಸಿಮ್ ಅನ್ಸಾರಿ ಮತ್ತು ಇನ್ನಿತರ ಹಾಗೂ ಸುಮಾರು ೧೩೦ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ನವೋದ್ಯಮದಾರರಾದ ಪ್ರವೀಣ್ ಕುಮಾರ ಡಿಗ್ಗೆ ಅವರು ತಮ್ಮ ಅನುಭವವನ್ನು ಹಂಚಿಕೊAಡರು.