Home ಜಿಲ್ಲೆ ಕಲಬುರಗಿ ಎಂ.ಜಿ ರಸ್ತೆ ಕಾಮಗಾರಿ ವಿಳಂಬ: ನಗರ ಆಡಳಿತ ಸಂಪೂರ್ಣ ವಿಫಲ

ಎಂ.ಜಿ ರಸ್ತೆ ಕಾಮಗಾರಿ ವಿಳಂಬ: ನಗರ ಆಡಳಿತ ಸಂಪೂರ್ಣ ವಿಫಲ

ಕಲಬುರಗಿ,ಫೆ.೧೮-ನಗರದ ಎಂ.ಜಿ ರಸ್ತೆಯ ಉದ್ಘಾಟನೆ ಫೆಬ್ರವರಿ ೧ ರಂದು ನಡೆದಿದ್ದರೂ ಇಂದಿನವರೆಗೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಇದು ಜನತೆಗೆ ಮಾಡಿದ ವಂಚನೆ. ಉದ್ಘಾಟನೆ ಮಾಡಿ ಕೆಲಸ ಆರಂಭಿಸದೇ ಇರುವುದು ಜವಾಬ್ದಾರಿಯಿಲ್ಲದ ಆಡಳಿತದ ಸ್ಪಷ್ಟ ಉದಾಹರಣೆಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ತಿಳಿಸಿದ್ದಾರೆ.
ಇದಕ್ಕಿಂತ ಗಂಭೀರ ವಿಷಯವೆಂದರೆ, ಮಹಾನಗರ ಪಾಲಿಕೆಯ ಎಲ್ಲಾ ಕಂಪ್ಯೂಟರ್‌ಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಸೀಜ್ ಮಾಡಲಾಗಿದೆ. ಸುಮಾರು ೩೦೦ ಕೋಟಿ ರೂ. ಪರಿಹಾರ (ಕಾಂಪೆನ್ಸೇಶನ್) ನೀಡಬೇಕಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ.
೩೦೦ ಕೋಟಿ ಪರಿಹಾರ ನೀಡುವ ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು? ಇದಕ್ಕೆ ನೇರ ಜವಾಬ್ದಾರರು ಯಾರು? ಜನರ ತೆರಿಗೆ ಹಣದ ದುರುಪಯೋಗಕ್ಕೆ ಉತ್ತರ ಯಾರಿಂದ? ಇಂದು ಕಂಪ್ಯೂಟರ್‌ಗಳನ್ನು ಸೀಜ್ ಮಾಡಲಾಗಿದೆ. ನಾಳೆ ಪರಿಹಾರ ಮೊತ್ತವನ್ನು ಪಾವತಿಸದಿದ್ದರೆ, ನ್ಯಾಯಾಲಯವೇ ಕಾರ್ಪೊರೇಷನ್ ಕಚೇರಿಯನ್ನು ಸೀಜ್ ಮಾಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಇದರ ಸಂಪೂರ್ಣ ಜವಾಬ್ದಾರಿ ಕಲಬುರಗಿಯ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮೇಲಿದೆ. ಇದರ ಪರಿಣಾಮವಾಗಿ ನಗರದಲ್ಲಿ ಯಾವುದೇ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿಲ್ಲ. ಜನರು ಜನನ-ಮರಣ ಪ್ರಮಾಣ ಪತ್ರ, ತೆರಿಗೆ, ನೀರು, ಒಳಚರಂಡಿ ಸೇರಿದಂತೆ ಅನೇಕ ಸೇವೆಗಳಿಗಾಗಿ ಪರದಾಡುತ್ತಿದ್ದಾರೆ. ಇದಕ್ಕೂ ಮೇಲೆ ನಗರದಲ್ಲಿ ಮಲಿನ ನೀರಿನ ತೀವ್ರ ಸಮಸ್ಯೆ ŠÊýವಿ¼ನಲ್ಲಿ ಡ್ರೈನೇಜ್ ನೀರಿನ ಸಮರ್ಪಕ ಸಂಸ್ಕರಣೆಯ ಕೊರತೆ, ಮೆಹಬೂಸ್ ಮಸೀದಿ ಸಮೀಪದ ಒಳಚರಂಡಿ ಸಮಸ್ಯೆ, ಗುಂಡಿಗಳಿAದ ತುಂಬಿದ ರಸ್ತೆಗಳು, ಶಾಸಕರು ಮತ್ತು ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಸ್ವಪ್ರಚಾರದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳ ಕಡೆ ಸಂಪೂರ್ಣ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಂ.ಜಿ ರಸ್ತೆ ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು, ೩೦೦ ಕೋಟಿ ಪರಿಹಾರ ಪ್ರಕರಣದ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು, ಪಾಲಿಕೆಯ ಕಂಪ್ಯೂಟರ್‌ಗಳನ್ನು ತಕ್ಷಣ ಮರುಸ್ಥಾಪಿಸಿ ಸೇವೆಗಳನ್ನು ಆರಂಭಿಸಬೇಕು, ಎಸ್‌ಟಿಪಿ ಹಾಗೂ ಡ್ರೈನೇಜ್ ಸಮಸ್ಯೆಗಳಿಗೆ ತುರ್ತು ಪರಿಹಾರ ಒದಗಿಸಬೇಕು, ನಗರ ರಸ್ತೆಗಳ ದುರಸ್ಥಿ ಕಾರ್ಯವನ್ನು ಯುದ್ಧಮಟ್ಟದಲ್ಲಿ ಕೈಗೊಳ್ಳಬೇಕು, ಜನರ ಸಹನೆಗೆ ಮಿತಿ ಇದೆ. ಆಡಳಿತ ವೈಫಲ್ಯ ಮುಂದುವರಿದಲ್ಲಿ ಜನಾಂದೋಲನ ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.