Home ಜಿಲ್ಲೆ ಕಲಬುರಗಿ ಪದ್ಮಶ್ರೀ ಅನುಪ ಜಲೋಟಾ ಭಜನ್‍ಗೆ ಕಲಬುರಗಿ ಪ್ರೇಕ್ಷಕರು ಮಂತ್ರಮುಗ್ಧ

ಪದ್ಮಶ್ರೀ ಅನುಪ ಜಲೋಟಾ ಭಜನ್‍ಗೆ ಕಲಬುರಗಿ ಪ್ರೇಕ್ಷಕರು ಮಂತ್ರಮುಗ್ಧ

ಕಲಬುರಗಿ: ನಗರದ ಶ್ರೀನಿವಾಸ ಸರಡಗಿ ರಸ್ತೆಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಅರುಜೀವ ಆಯುರ್ವೇದ ಆಸ್ಪತ್ರೆಯಲ್ಲಿ ‘ಇವನಿಂಗ್ ವಿಥ್ ಪದ್ಮಶ್ರೀ ಅನುಪ ಜಲೋಟಾ’ ಎಂಬ ವಿನೂತನ ಭಜನ್ ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.
ದೇಶದ ಹೆಮ್ಮೆಯ ಪದ್ಮಶ್ರೀ ಪುರಸ್ಕøತ ಖ್ಯಾತ ಭಜನ್ ಗಾಯಕ ಅನುಪ ಜಲೋಟಾ ಅವರು ತಮ್ಮ ಸುಮಧುರ ಕಂಠದಿಂದ ವಿವಿಧ ಭಜನ್‍ಗಳನ್ನು ಪ್ರಸ್ತುತಪಡಿಸಿ ಸಂಗೀತ ರಸಿಕರನ್ನು ಮಂತ್ರಮುಗ್ಧಗೊಳಿಸಿದರು. ಅವರ ಗಾಯನಕ್ಕೆ ಕಲಬುರಗಿಯ ಪ್ರೇಕ್ಷಕರು ಭಾವಪರವಶರಾಗಿ, ಸಂಗೀತದ ಸಂಮೋಹನದಲ್ಲಿ ತೇಲಿದ ದೃಶ್ಯ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಅನುಪ ಜಲೋಟಾ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಜನ್ ಸಂಗೀತದ ಮೂಲಕ ಆಧ್ಯಾತ್ಮಿಕತೆ ಹಾಗೂ ಸಂಗೀತದ ಸೊಬಗನ್ನು ಪರಿಚಯಿಸಿದ ಈ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಸರೋಜಿನಿ ಎಸ್. ಪಾಟೀಲ್ ಕಡಗಂಚಿ, ಸಂಪತ್ ಗಿಲ್ದಾ, ನೀಲಕಂಠರಾವ್ ಮುಲಗೆ, ಕೌಸ್ತುಬ್ ದುಮಲ್, ಡಾ. ಶಲಿನಿ ಭಾರತಿ, ಡಾ. ಸಂದೀಪ್ ಬಿ. ಮಾಳಗಿ ಸೇರಿದಂತೆ ಹಲವು ಗಣ್ಯರು ಹಾಗೂ ಸಂಗೀತಾಸಕ್ತರು ಪಾಲ್ಗೊಂಡಿದ್ದರು.
ಅನುಪ ಜಲೋಟಾ ಅವರ ಭಜನ್ ಗಾಯನದೊಂದಿಗೆ ಕಲಬುರಗಿಯಲ್ಲಿ ನಡೆದ ಈ ಸಂಗೀತ ಸಂಜೆ, ಸಂಗೀತ ಪ್ರೇಮಿಗಳ ಪಾಲಿಗೆ ಅವಿಸ್ಮರಣೀಯ ಅನುಭವವಾಗಿ ಮೂಡಿಬಂದಿತು.