
ಕಲಬುರಗಿ :ಮೇ.27:ಜಿಲ್ಲೆಯ ಕಲಾವಿದರು ಮೇ 24 ಮತ್ತು 25ರಂದು ಪ್ರತಿಷ್ಠಿತ ಜಿ.ಎಚ್. ರೈಸೋನಿ ಇಂಟರ್‍ನ್ಯಾಷನಲ್ ಸ್ಕಿಲ್ ಟೆಕ್ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಗ್ರೀಷ್ಮಕಾಲ ಕಲಾ ಪ್ರದರ್ಶನ ಮತ್ತು ಭಾರತೀಯ ಕಲಾ ಶಿಬಿರದಲ್ಲಿ ಭಾಗವಹಿಸಿದರು. ಸಮ್ವೇದ್ ಸ್ಕೂಲ್ ಆಫ್ ಆರ್ಟ್, ಮ್ಯೂಸಿಕ್, ವಿಸ್ಯುಅಲೈಸೇಶನ್, ಎಂಟರ್‍ಟೈನ್‍ಮೆಂಟ್ ಅಂಡ್ ಡಿಸೈನ್ ವತಿಯಿಂದ ಸಮ್ವೇದ್ ಆರ್ಟ್ ಗ್ಯಾಲರಿಯಲ್ಲಿ ಸೊಗಸಾಗಿ ಆಯೋಜಿಸಲಾದ ಈ ಸಾಂಸ್ಕøತಿಕ ಕಾರ್ಯಕ್ರಮವು ವಿಶ್ವವಿದ್ಯಾಲಯ ಆವರಣವನ್ನು ಸೃಜನಶೀಲತೆ, ಬಣ್ಣಗಳು ಮತ್ತು ಕಲಾತ್ಮಕ ಸಂವಾದಗಳ ಸಂಗಮವನ್ನಾಗಿ ರೂಪಿಸಿತು.
ಈ ಕಾರ್ಯಕ್ರಮವನ್ನು ಜಿ.ಎಚ್. ರೈಸೋನಿ ವಿಶ್ವವಿದ್ಯಾಲಯ, ಪುಣೆಯ ಕುಲಪತಿ ಡಾ. ಆರ್. ಡಿ. ಖರಾಡೇಕರ್, ಪೆÇ್ರೀ-ಕುಲಪತಿ ಡಾ. ಹೆಂದ್ರೆ, ಸಂವೇದ್ ಶಾಲೆಯ ಡೀನ್ ಡಾ. ಅವಿನಾಶ್ ಡಿ. ಕಾಟೆ, ಪ್ರವೇಶ ವಿಭಾಗದ ಮುಖ್ಯಸ್ಥರು, ರಿಜಿಸ್ಟ್ರಾರ್ ಡಾ. ಅಮೋಲ್ ಪೆÇೀತೆ, ಕರ್ನಲ್ ಅಜಿತ್ ಸಿಂಘ್ವಿ ಹಾಗೂ ಇತರರು ಉದ್ಘಾಟಿಸಿದರು.
ರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಹದಿನಾರು ಖ್ಯಾತ “ಬ್ರಾವಿಸಿಮೊ” ಕಲಾವಿದರು ಭಾಗವಹಿಸಿ ತಮ್ಮದೇ ಆದ ವಿಶಿಷ್ಟ ಕಲಾ ದೃಷ್ಟಿಕೋನ ಮತ್ತು ಸೃಜನಾತ್ಮಕ ಸಂವೇದನೆಯನ್ನು ಪ್ರದರ್ಶನದಲ್ಲಿ ಅನಾವರಣಗೊಳಿಸಿದರು. ಕಲಬುರಗಿಯಿಂದ ಭಾಗವಹಿಸಿದ ಕಲಾವಿದರಲ್ಲಿ ರಾಜಶೇಖರ ಶಾಮಣ್ಣ, ರೆಹಮಾನ್ ಪಟೇಲ್, ದಾದಾ ಚಿತ್ರದುರ್ಗ, ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರಾಜಶೇಖರ ಚಿಂಚೊಳ್ಳಿ, ರೇವಣಸಿದ್ದಪ್ಪ ಹೊಟ್ಟಿ ಮತ್ತು ಸಯ್ಯದ್ ಮುಸ್ತಫಾ ಸೇರಿದ್ದಾರೆ. ಇತರೆ ಪ್ರದೇಶಗಳಿಂದ ಸುರೇಂದ್ರ ಕುಡಪಣೆ ಪಾಟೀಲ್, ಮುಂಜಾ ನರ್ವಾಡೆ, ಪೂರ್ಣಿಮಾ ವಾಲುಂಜ್, ವೈಶಾಲಿ ಸಿತ್ರೆ, ದೇವೇಂದ್ರ ಪೆÇಟ್ಧುಖೆ, ಮಧುಕರ್ ಚಂದನಶಿವ ಹಾಗೂ ಆರತಿ ನಾಗ್ಲೆ ಭಾಗವಹಿಸಿದ್ದರು.
ಈ ಕಲಾವಿದರ ಕಲಾಕೃತಿಗಳು ಆಧುನಿಕ ಕಲ್ಪನೆ ಮತ್ತು ಭಾರತೀಯ ಸಾಂಪ್ರದಾಯಿಕ ಕಲಾ ಪರಂಪರೆಯ ಸಮನ್ವಯವನ್ನು ಪ್ರತಿಬಿಂಬಿಸಿತು. ಭಾರತೀಯ ಸಂಸ್ಕೃತಿ, ಗ್ರಾಮೀಣ ಜೀವನ, ಆಧ್ಯಾತ್ಮ ಹಾಗೂ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ ವಿಷಯಗಳನ್ನು ಕಲಾಕೃತಿಗಳ ಮೂಲಕ ಮನೋಜ್ಞವಾಗಿ ಅಭಿವ್ಯಕ್ತಿಪಡಿಸಲಾಯಿತು.
ಸಂವೇದ್ ಡೀನ್ ಮತ್ತು ಪ್ರಾಧ್ಯಾಪಕ ಡಾ. ಅವಿನಾಶ್ ಡಿ. ಕಟೇ ಈ ಕಾರ್ಯಕ್ರಮದ ನಿರ್ದೇಶಕರಾಗಿದ್ದರು.






















