Home ಜಿಲ್ಲೆ ಕಲಬುರಗಿ ಬೆಂಗಳೂರು ಕ್ಲೈಮೇಟ್ ಸಮ್ಮಿಟ್ನಲ್ಲಿ ಕಲಬುರಗಿ ಕಲಾವಿದ ರೆಹಮಾನ್ ಪಟೇಲ್ ಅವರ ಕಲಾ ಅಭಿವ್ಯಕ್ತಿ

ಬೆಂಗಳೂರು ಕ್ಲೈಮೇಟ್ ಸಮ್ಮಿಟ್ನಲ್ಲಿ ಕಲಬುರಗಿ ಕಲಾವಿದ ರೆಹಮಾನ್ ಪಟೇಲ್ ಅವರ ಕಲಾ ಅಭಿವ್ಯಕ್ತಿ

ಕಲಬುರಗಿ:ಜೂ.5: ಕಲಬುರಗಿ ಮೂಲದ ಕಲಾವಿದ ಹಾಗೂ ಸಂಶೋಧಕರಾದ ರೆಹಮಾನ್ ಪಟೇಲ್ ಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಮೋವ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ “ಬೆಂಗಳೂರು ಕ್ಲೈಮೇಟ್ ಸಮ್ಮಿಟ್-ಆಲ್ಟರ್ನೇಟಿವ್ 26” ನಲ್ಲಿ ಭಾಗವಹಿಸಿದರು.
ಬೆಂಗಳೂರು ನಗರದ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜೂನ್ 4 ಮತ್ತು 5 ರಂದು ನಡೆದ ಎರಡು ದಿನಗಳ “ಆರ್ಟ್ ಫಾರ್ ಕ್ಲೈಮೇಟ್ ಲೈವ್ ಆರ್ಟ್ ಕ್ಯಾಂಪ್” ಕಾರ್ಯಕ್ರಮದಲ್ಲಿ ರೆಹಮಾನ್ ಪಟೇಲ್ ಅವರು ತಮ್ಮ ಕಲಾಕೃತಿಯ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ವ್ಯಕ್ತಪಡಿಸಿದರು. ಈ ಶೃಂಗಸಭೆಯಲ್ಲಿ ಪರಿಸರವಾದಿಗಳು, ನವೋದ್ಯಮಿಗಳು, ಕಲಾವಿದರು, ಸಂಶೋಧಕರು, ಚಿಂತಕರು ಹಾಗೂ ಹವಾಮಾನ ಹೋರಾಟಗಾರರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ರೆಹಮಾನ್ ಪಟೇಲ್ ಅವರು ಕ್ಯಾನ್ವಾಸ್ ಮೇಲೆ ಬಣ್ಣಗಳ ಮೂಲಕ ಸಮಕಾಲೀನ ಚಿತ್ರವೊಂದನ್ನು ರಚಿಸಿ, ಭೂಮಿಯ ಸಂರಕ್ಷಣೆಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಮಾಲಿನ್ಯ ಮತ್ತು ಪರಿಸರ ಅಸಮತೋಲನದಿಂದ ಉಂಟಾಗುತ್ತಿರುವ ಸವಾಲುಗಳನ್ನು ತಮ್ಮ ಕಲಾಕೃತಿಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿ, ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಹಿರಿಯ ಕಲಾವಿದ ಸಿ.ಎಸ್. ಕೃಷ್ಣಶೆಟ್ಟಿ ಹಾಗೂ ಗೀತಾ ಶಿಂಧೆ ಅವರು “ಕಲ್ಚರ್ ಫಾರ್ ಕ್ಲೈಮೇಟ್” ಎಂಬ ವಿಶೇಷ ಅಧಿವೇಶನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಪೂರ್ವದಿನ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಸಿಎಸ್ ಕ್ಯುರೇಟರ್ ಹಾಗೂ ವಿಮೋವ್ ಫೌಂಡೇಶನ್ ಸಂಸ್ಥಾಪಕರಾದ ವಿನಯ್ ಶಿಂಧೆ ಅವರೊಂದಿಗೆ “ಬೆಂಗಳೂರು ಕ್ಲೈಮೇಟ್ ಸಮ್ಮಿಟ್” ಪೆÇೀಸ್ಟರ್ ಅನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆರ್ಟ್ ಕ್ಯಾಂಪ್ ನಿರ್ದೇಶಕರಾದ ಎಂ.ಜಿ. ದೊಡ್ಡಮನಿ ಹಾಗೂ ಸಂಚಾಲಕರಾದ ಗಣೇಶ್ ದೊಡ್ಡಮನಿ ಉಪಸ್ಥಿತರಿದ್ದರು.