Home ಜಿಲ್ಲೆ ಕಲಬುರಗಿ ಕಲಬುರಗಿ ಕಲಾವಿದ ರೆಹಮಾನ್ ಪಟೇಲ್ ಬೆಂಗಳೂರಿನ ಕ್ಲೈಮೇಟ್ ಸಮ್ಮಿಟ್‍ಗೆ ಆಹ್ವಾನ

ಕಲಬುರಗಿ ಕಲಾವಿದ ರೆಹಮಾನ್ ಪಟೇಲ್ ಬೆಂಗಳೂರಿನ ಕ್ಲೈಮೇಟ್ ಸಮ್ಮಿಟ್‍ಗೆ ಆಹ್ವಾನ

ಕಲಬುರಗಿ :ಮೇ.31:ನಗರದ ಕಲಾವಿದ ರೆಹಮಾನ್ ಪಟೇಲ್ ಅವರಿಗೆ ಪ್ರತಿಷ್ಠಿತ “ಬೆಂಗಳೂರು ಕ್ಲೈಮೇಟ್ ಸಮ್ಮಿಟ್-ಆಲ್ಟರ್ನೇಟಿವ್ 26” ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಲಭಿಸಿದೆ. ವಿಮೋವ್ ಸಂಸ್ಥೆಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶವು ಹವಾಮಾನ ನವೋತ್ಪಾದನೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಿಗೆ ವೇದಿಕೆಯಾಗಲಿದೆ.
ಈ ಸಮಾವೇಶದ ಅಂಗವಾಗಿ ನಡೆಯಲಿರುವ “ಆರ್ಟ್ ಫಾರ್ ಕ್ಲೈಮೇಟ್ ಲೈವ್ ಆರ್ಟ್ ಕ್ಯಾಂಪ್” ಕಾರ್ಯಕ್ರಮದಲ್ಲಿ ರೆಹಮಾನ್ ಪಟೇಲ್ ಭಾಗವಹಿಸಲಿದ್ದು, ಕಲೆ ಮತ್ತು ಸಂಸ್ಕøತಿಯ ಮೂಲಕ ಹವಾಮಾನ ಜಾಗೃತಿ ಮೂಡಿಸುವ ಜೊತೆಗೆ ಸುಸ್ಥಿರ ಭವಿಷ್ಯದ ಪರಿಕಲ್ಪನೆಯನ್ನು ಜನರಲ್ಲಿ ಬೆಳೆಸುವ ಉದ್ದೇಶ ಹೊಂದಿದೆ.
ಈ ಎರಡು ದಿನಗಳ ಕಾರ್ಯಕ್ರಮವು ಜೂನ್ 4 ಮತ್ತು 5 ರಂದು ಬೆಂಗಳೂರಿನ ವೈಟ್‍ಫೀಲ್ಡ್ ಐಟಿ ಕಾರಿಡಾರ್‍ನ ಎಸಿಇಎಸ್ ಲೇಔಟ್‍ನಲ್ಲಿರುವ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಯಲಿದೆ.
ಸಮ್ಮಿಟ್‍ನಲ್ಲಿ ರೆಹಮಾನ್ ಪಟೇಲ್ ಅವರು ಪರಿಸರ ಮಾಲಿನ್ಯ ಮತ್ತು ಪರಿಸರ ಅಸಮತೋಲನದಿಂದ ಸಂಕಷ್ಟಕ್ಕೊಳಗಾಗಿರುವ ಭೂಮಿಯ ರಕ್ಷಣೆಯ ಅಗತ್ಯತೆಯನ್ನು ಪ್ರತಿಬಿಂಬಿಸುವ ಸಮಕಾಲೀನ ಚಿತ್ರಕಲೆಯನ್ನು ಸೃಷ್ಟಿಸಲಿದ್ದಾರೆ.
ಕಾರ್ಯಕ್ರಮದ ಕಲಾ ನಿರ್ದೇಶಕರಾದ ಎಂ. ಜಿ. ದೊಡ್ಡಮನಿ ಅವರು ಮಾತನಾಡಿ, ಹವಾಮಾನ ಮತ್ತು ಪರಿಸರ ವಿಷಯಾಧಾರಿತ ಲೈವ್ ಆರ್ಟ್ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಹತ್ತು ಖ್ಯಾತ ಕಲಾವಿದರ ಪೈಕಿ ರೆಹಮಾನ್ ಪಟೇಲ್ ಒಬ್ಬರಾಗಿದ್ದಾರೆ ಎಂದು ತಿಳಿಸಿದ್ದಾರೆ. ಗಣೇಶ್ ದೊಡ್ಡಮನಿ ಶಿಬಿರದ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.