Home ಜಿಲ್ಲೆ ಬೆಂಗಳೂರು ಕೈವಾರ ತಾತಯ್ಯನವರ ಅದ್ದೂರಿ ಜಯಂತ್ಯೋತ್ಸವ

ಕೈವಾರ ತಾತಯ್ಯನವರ ಅದ್ದೂರಿ ಜಯಂತ್ಯೋತ್ಸವ

ಆನೇಕಲ್.ಮಾ.೧೧:ಆನೇಕಲ್ ತಾಲ್ಲೂಕು ಬಲಿಜ ಮಹಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ತಾತಯ್ಯನವರ ಜಯಂತ್ಯೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.


ಇನ್ನು ತಳಿ ರಸ್ತೆಯಲ್ಲಿರುವ ಐತಿಹಾಸಿಕ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯದ ಆವರಣದಿಂದ ಕೈವಾರ ತಾತಯ್ಯನವರ ಭವ್ಯವಾದ ಬೆಳ್ಳಿ ರಥದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇನ್ನು ಆನೇಕಲ್ ಪಟ್ಟಣದ ರಾಜ ಬೀದಿಗಳಲ್ಲಿ ಸಾಗಿದ ಈ ರಥಯಾತ್ರೆಯು ರೋಮಾಂಚನವಾಗಿತ್ತು.


ಜಯಂತ್ಯೋತ್ಸವದ ಅಂಗವಾಗಿ ಸುಮಂಗಲಿಯರಿಂದ ಪೂರ್ಣಕುಂಭ ಕಳಶಗಳೊಂದಿಗೆ ಸ್ವಾಗತ, ಪೂಜಾ ಕುಣಿತ, ನಗಾರಿ, ವೀರಗಾಸೆ, ಡೊಳ್ಳು ಕುಣಿತ ಹಾಗೂ ಗೊರವರ ಕುಣಿತಗಳು ಮೆರವಣಿಗೆಗೆ ಕಳೆ ತಂದವು. ಇದರೊಂದಿಗೆ ಹಾಲಕ್ಕಿ ಸುಗ್ಗಿ ಕುಣಿತ, ಬೇಡರ ವೇಷ, ನಂದಿ ಧ್ವಜ ಕುಣಿತ, ಚಂಡೆ ವಾದ್ಯ ಮತ್ತು ಕಂಗಿಲು ನೃತ್ಯ ತಂಡಗಳು. ಚಿಲಿ ಪಿಲಿ ಗೊಂಬೆಗಳ ನೃತ್ಯವು ಮೆರವಣಿಗೆಯ ಉದ್ದಕ್ಕೂ ವಿಶೇಷ ಆಕರ್ಷಣೆಯಾಗಿತ್ತು.ಹಾಗೆಯೇ ಸ್ವಾಮಿಗೆ ವಿಶೇಷ ಪೂಜೆ. ಅನ್ನದಾಸೋಹ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಶಾಸ್ತೋಸ್ತವಾಗಿ ನೆರವೇರಿತು.


ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣರವರು. ನ್ಯೂ ಬಾಲ್ಡ್ ವಿನ್ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ವೇಣುಗೋಪಾಲ್. ಕರ್ಪೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದಿನ್ನೂರು ರಾಜು. ಬಿ.ನಾಗರಾಜು, ನಾರಾಯಣಸ್ವಾಮಿ, ಶಿವರಾಮ್, ಮುಖಂಡರಾದ ನಂದಕುಮಾರ್, ಎನ್.ಕೆ. ಟಿವಿ ನವೀನ್. ಜೈ ಕುಮಾರ್ ಮತ್ತು ಕುಲಸ್ಥರು ಹಾಜರಿದ್ದರು.