ವೈಭವದಿಂದ ಜರಗಿದ ಕೈಲಾಸನಾಥೇಶ್ವರ ಜಾತ್ರಾ ಮಹೋತ್ಸವ

ಸಂಜೆವಾಣಿ ವಾರ್ತ
ಹುಮನಾಬಾದ್:ಫೆ.೧೮:ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಕೈಲಾಸನಾಥೇಶ್ವರ ಜಾತ್ರೆ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮಗಳ ಮಧ್ಯ ನೆರವೇರಿತು.
ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ಬಳಿಕ ಗ್ರಾಮದ ಮುಖ್ಯ ಬೀದಿಗಳ ಮಾರ್ಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ದಾ-ರಿಯುದ್ದಕ್ಕೂ ದೇವರಿಗೆ ಶಾಲುಹೊದಿಸಿ, ಭಕ್ತಿಸೇವೆ ಸಲ್ಲಿಸುವ ಉದ್ದೇಶದಿಂದ ಪ್ರತೀ ಮನೆಗಳ ಎದುರು ಸಾರಣೆ ಹಾಕಿ, ರಂಗೋಲಿ ಚಿತ್ತಾರ ಬಿಡಿಸಿ, ಹೊಚ್ಚಹೊಸ ಬಟ್ಟೆ ಹಾಸಿ ದೇವರನ್ನು ಸ್ವಾಗತಿಸಲು ಸಜ್ಜಾಗಿ ನಿಂತಿರುವ ದೃಶ್ಯ ಕಂಡು ಬಂದಿತು.
ಶಾಸಕ ಡಾ. ಸಿದ್ದು ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ,ನವೀನ್ ಬತಲಿ ಅವರು ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದ ಕೈಲಾಸನಾಥೇಶ್ವರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ. ಮೋಹನ ವಾರದ, ಸುಭಾಷ್ ವಾರದ, ಸುಭಾಷ ಚಿಲಶೆಟ್ಟಿ, ಅಣ್ಣಾರಾವ್ ರಟಕಲ್, ಉದಯಕುಮಾರ ವಾರದ, ಸಂದೀಪ ವಾರದ, ಇಂದ್ರಕರ್ಣ ಬಿರಾದಾರ, ಭಕ್ತರಾಜ ಚಿತ್ತಾಪುರೆ, ಮಲ್ಲಿಕಾರ್ಜುನ ತಟಪಟ್ಟಿ, ಮಹೇಶ್ ಚಿಲಶೆಟ್ಟಿ, ಪ್ರಕಾಶ್ ಬಾವಗಿ,ವಿವೇಕಾನಂ-ದರ ಕೋರಿ, ಪ್ರಶಾಂತ್ ಹೊನ್ನಳ್ಳಿ, ಸಿದ್ದು ಇಂಡಿ, ಸಾಗರ್ ಭೂರಿ, ಅಂಬರೀಷ್ ಬೇಲೂರೆ, ಅನೀಲ ಭಂಡಿ, ರಾಚಣ್ಣ, ಆನಂದ ಲಕ್ಕಾ, ವೀರೇಶ್ ಗಾದಾ, ಶ್ರೀನಾಥ್ ಕೋರಿ ಸೇರಿದಂತೆ ಅನೇಕರು ಭಕ್ತರು ಇದ್ದರು.