
ಸೈದಾಪುರ:ನ.3:ಸÀಮೀಪದ ಕಡೇಚೂರು ಕೈಗಾರಿಕಾ ಪ್ರದೇಶದ ಹತ್ತಿರದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಶನಿವಾರ ರಾತ್ರಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟು, ಮೂರು ಜನರಿಗೆ ಗಂಭೀರ ಗಾಯಗೊಂಡಿರುವ ದುರ್ಘಟನೆ ನಡೆದಿದೆ.
ಇಸ್ಮಾಯಿಲ್ ತಂದೆ ಅಲ್ಲಾವುದ್ದೀನ್ ರೋತೆ ಆಳಂದ (50), ಖಾಸಿಂ ಮಹಿಬೂಬ ಶೇಖ್ ತಂದೆ ಮಹಿಬೂಬ ಶೇಖ್ (43) ಅಕ್ಕಲಕೋಟ ಮೃತಪಟ್ಟ ದುರ್ದೈವಿಗಳು. ಗಾಯಾಳುಗಳನ್ನು ಸೈದಾಪುರ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿ ಕಡೆಯಿಂದ ರಾಯಚೂರು ಮಾರ್ಗವಾಗಿ ಸಾಗುತ್ತಿದ್ದ ಲಾರಿ ಬಹಳ ವೇಗವಾಗಿ ಬಂದು ರಾಯಚೂರು ಕಡೆಯಿಂದ ಯಾದಗಿರಿ ಕಡೆ ಚಲಿಸುತ್ತಿರುವ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಲಾರಿಗಳ ಮುಂಭಾಗ ಸಂಪೂರ್ಣ ಜಖಂಗೊಂಡಿವೆ. ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಪೃಥ್ವಿ ಶಂಕರ ಪರಿಶೀಲನೆ ಮಾಡಿ, ವಾಹನ ಚಾಲಕರು ವಾಹನವನ್ನು ಚಲಾಯಿಸುವಾಗ ಮಿತಿ ವೇಗದಲ್ಲಿ ಚಲಾಯಿಸಬೇಕು ಎಂದು ಸಲಹೆ ನೀಡಿದರು. ಈ ಸಂಬಂಧ ಸೈದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

































