Home ಜಿಲ್ಲೆ ಕಲಬುರಗಿ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ

ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫ

ಕಲಬುರಗಿ :ಮಾ.7: ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಡುವೆ ಸಮನ್ವಯತೆ ತರಲು ಶ್ರಮಿಸಿದ, ಎಲ್ಲರನ್ನು ಸಮದೃಷ್ಟಿಯಿಂದ ನೋಡಿದ ತತ್ವಜ್ಞಾನಿ ಸಂತ ಶಿಶುನಾಳ ಶರೀಫ ಅವರು ಕರ್ನಾಟಕದ ಕಬೀರ್ ರಾಗಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿನ ‘ಶ್ರಿ ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸಂತ ಶಿಶುನಾಳ ಶರೀಫ್ ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಶರೀಫ್ ಅವರು ‘ಸಮಾನತೆಯ ಹರಿಕಾರ. ವಿಚಾರವಾದಿಗಳು, ವಿಮರ್ಶಕರು, ಸಮಾಜ ಸುಧಾರಕರು, ನೀತಿ ಬೋಧಕರು ಹಾಗೂ ಮೇರು ಜ್ಞಾನಿಗಳಾಗಿದ್ದರು. ಪರಿಸ್ಥಿತಿಗೆ ಅನುಗುಣವಾಗಿ ಕವಿತೆಗಳನ್ನು ರಚಿಸಿ ಸಂದೇಶವನ್ನು ಹರಡಲು ಶರೀಫ್ ಹಾಡುತ್ತಿದ್ದರು. ಅವರು ತಮ್ಮ ಸಂಯೋಜನೆಗಳನ್ನು ಎಂದಿಗೂ ಬರೆದಿಲ್ಲದಿದ್ದರೂ, ಅವುಗಳಲ್ಲಿ ಹಲವು ಬಾಯಿ ಮಾತಿನ ಮೂಲಕ ಭವಿಷ್ಯದ ಪೀಳಿಗೆಗೆ ರವಾನಿಸಲ್ಪಟ್ಟಿವೆ ಎಂದರು. ಸಂತ ಶಿಶುನಾಳ ಶರೀಫ ಅವರು “ಸೊರುಟಿಹುಡು ಮನೆಯ ಮಾಳಿಗಿ”, “ಗುಡಿಯಾ ನೋಡಿರಣ್ಣ ದೇಹದ”, “ಅಳಬೇಡ ತಂಗಿ ಅಳಬೇಡ”, “ತರವಲ್ಲ ತಗಿ ನಿನ್ನ”,”
“ಬಿದ್ದಿಯಬ್ಬೆ ಮುದುಕಿ”, “ಎಲ್ಲಾರಂಥವನಲ್ಲ ನನ್ನ ಗಂಡ”, “ಮೋಹದ ಹೆಂಡತಿ ತೀರಿದ ಬಾಲಿಕಾ”, “ಸ್ನೇಹಾ ಮಾಡಬೇಕಿಂಥವಾಲ”,
“ಗುಡುಗುಡಿಯ ಸೇದು ನೋಡೋ”,
“ಲೋಕದ ಕಲಾಜಿ”,
“ದುಡ್ಡು ಕೆಟ್ಟದು ನೋಡಣ್ಣ”,
“ಕೆಲ ಜಾನ ಶಿವ ಧ್ಯಾನ ಮದನ್ನಾ” ಅಂತಹ ಪ್ರಸಿದ್ಧವಾದ ಅನೇಕ ತತ್ವಪದಗಳನ್ನು ಹಾಡುತ್ತಾ, ಎಲ್ಲೆಡೆ ಜನಜಾಗೃತಿಯನ್ನು ಮೂಡಿಸಿದರು ಎಂದು ನುಡಿದರು. ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.