ಸಹಾಯಕ ಸಂರಕ್ಷಣಾಧಿಕಾರಿ ಅಮಾನತಿಗೆ ಕ.ದ.ಸಂ.ಸ ಒತ್ತಾಯ

ಕೋಲಾರ,ಸೆ,೨೦- ಸಾಮಾಜಿಕ ಅರಣ್ಯ ಉಪವಿಭಾಗದಲ್ಲಿ ನಡೆದಿರುವ ಭ್ರಷ್ಟಚಾರದ ಸಮಗ್ರ ತನಿಖೆ ಮಾಡಬೇಕಾಗಿ ಮತ್ತು ಸಹಾಯಕ ಸಂರಕ್ಷಣಾಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂರ್ಘ ಸಮಿತಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿಯ ಮುಂದೆ ಘೋಷಣೆಗಳು ಕೊಗಿ ಧರಣಿ ನಡೆಸಿದರು.


ಈ ಸಂದರ್ಭದಲ್ಲಿ ಮೇಡಿಹಾಳ ಚಂದ್ರ ಶೇಖರ್ ಮಾತನಾಡಿ ಸಾಮಾಜಿಕ ಅರಣ್ಯ ಉಪವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಸಂರಕ್ಷಣಾಧಿಕಾರಿ ಕೆ.ಪಿ.ಧನಲಕ್ಷ್ಮೀ ಅವಧಿಯ ಎಲ್ಲಾ ಕಾಮಗಾರಿಗಳಲ್ಲಿ ಭ್ರಷ್ಟಚಾರ ನಡೆದಿದ್ದು ಕೊಡಲೇ ತನಿಖೆ ಮಾಡಿ ಈ ಸರ್ವಾಧಿಕಾರಿಯನ್ನು ಕರ್ತವ್ಯದಿಂದ ಅಮಾನತ್ತುಗೊಳಿಸ ಬೇಕೆಂದು ಆಗ್ರಹಿಸಿದರು.


ಶ್ರೀನಿವಾಸಪುರ ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಬದಿ ನಾಟಿ ಮಾಡಿರುವ ಸಸ್ಯಗಳ ಕಾಮಗಾರಿಯ ೨೦೧೯-೨೦೨೩ ವರೆಗಿನ ಆಯ್ಯವ್ಯಗಳ ಸಂಪೂರ್ಣ ವಿವರಗಳ ಮಾಹಿತಿ ಕೊಡಲೇ ನೀಡ ಬೇಕು. ಸಾಮಾಜಿಕ ಅರಣ್ಯ ಉಪವಿಭ ಆಗ ಕಚೇರಿಯ ೨೦೨೫-೨೬ನೇ ಸಾಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೇ ೧೯ ರಂದು ನಡೆದ ಗುತ್ತಿಗೆದಾರರ ಸಮಾಲೋಚನ ಸಭಿಯಲ್ಲಿ ನಿಗಧಿ ಪಡೆಸಿರುವ ಕಾಮಗಾರಿಗಳ ವಿತರಣೆಯಲ್ಲಿ ಜಾತಿ ವಿರೋಧಿ ತಾರತಮ್ಯ ನಡೆದಿರುವುದನ್ನು ತನಿಖೆ ನಡೆಸಿ ಲೋಪ ದೋಷಗಳನ್ನು ಸರಿ ಪಡೆಸಿ ಬೇಕೆಂದು ಒತ್ತಾಯಿಸಿದರು.


ಇಪ್ರಕ್ಯಾರ್‌ಮೆಂಟ್ ಟೆಂಡರ್ ಪ್ರಕಟಣೆಯ ಆರ್.ಕೆ.ವಿ.ವೈ ಯೋಜನೆಯಡಿ ಕ್ರಮ ಸಂಖ್ಯೆ ೨ರ ರೈಸಿಂಗ್ ಅಫ್ ೧೦*೧೬ ಸೈಜ್ ಪಿಬಿ ಸೀಡ್ ಲಿಂಕ್ಸ್ ಡೂರಿಂಗ್ ೨೦೨೫-೨೬ರಂತೆ ಬಿಡ್‌ದಾರ ಎಂ.ವಿ.ನಾರಾಯಣಸ್ವಾಮಿಗೆ ವಂಚಿಸಿ ಕಾನೂನು ಬಾಹಿರವಾಗಿ ಬೇರೆಯವರಿಗೆ ಟೆಂಡರ್ ನೀಡಿರುವುದನ್ನು ಕೊಡಲೇ ರದ್ದು ಪಡೆಸ ಬೇಕು. ಶ್ರೀನಿವಾಸಪುರ ತಾಲ್ಲೂಕಿನ ಹೊಸಹಳ್ಳಿ ಗೇಟ್‌ನಿಂದ ತಾಲ್ಲೂಕು ಬಾರ್ಡರ್‌ವರೆಗೂ ರಸ್ತೆ ಬದಿ ನಡುತೋಪು ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆಯಿಂದ ನರೇಗಾರ ಯೋಜನೆಯಡಿ ಹಣ ಮಂಜೂರಾತಿಗೆ ಸಂಬಂಧಿಸಿದಂತೆ ತನಿಖೆ ನಡೆಸ ಬೇಕು ಎಂದರು.


ವಿವಿಧ ವಲಯಗಳಲ್ಲಿ ರಸ್ತೆ ಬದಿ ೧೩೦ ಯೋಜನೆಯಡಿ ೩ನೇ ವರ್ಷದ ರಸ್ತೆ ಬದಿ ನೆಡುತೋಪು ನಿರ್ವಹಣೆ ಕಾಮಗಾರಿಗಳಿಗೆ ಹಾಗೂ ಅರಣ್ಯೀಕರಣ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ೨೦೨೦ ರಿಂದ ೨೦೨೫ ರವರೆಗೆ ಅನುಮೋದನೆ ಗೊಂಡಿರುವ ಕ್ರಿಯಾ ಯೋಜನೆ ಪಟ್ಟಿ ಮತ್ತು ಅಂದಾಜು ಪಟ್ಟಿ ಮಾಹಿತಿ ನೀಡ ಬೇಕು. ತಾಲ್ಲೂಕಿನ ನಾಗನಾಳ ಗೋಮಾಳ ಸರ್ವೆ ನಂ-೪೨ ಮತ್ತು ಉರಿಗಿಲಿ ಗೋಮಾಳ ಸರ್ವೆ ನಂ-೫೪ರಲ್ಲಿರುವ ಸಾಮಾಜಿ ಅರಣ್ಯ ಪ್ರದೇಶಗಳಲ್ಲಿನ ಮರಗಳ ಮರಣ ಹೋಮ ನಡೆಯುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗ ಬೇಕೆಂದು ಆಗ್ರಹಿಸಿದರು.


ರಸ್ತೆ ಬದಿ ವಿದ್ಯುತ್ ತಂತಿಗಳು ಹಾದು ಹೋಗುವ ಸ್ಥಳಗಳಲ್ಲಿ ಸಸ್ಯಗಳನ್ನು ನೆಟ್ಟು ಹಣ ಮಂಜೂರು ಮಾಡಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಹಾಗೂ ನರೇಗಾ ಯೋಜನೆಗಳಲ್ಲಿ ಜೆ.ಸಿ.ಬಿ.ಬಳಸುವುದನ್ನು ತಕ್ಷಣ ತಡೆಹಿಡಿಯ ಬೇಕೆಂದು ಒತ್ತಾಯಿಸಿ ಕಚೇರಿಯ ಅಧಿಕಾರಿಗಳ ಮೂಲಕ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ಈ ಸಂದರ್ಭಧಲ್ಲಿ ಜಿಲ್ಲಾ ಸಂಚಾಲಕ ವಿ.ಎಂ.ರಮೇಸ್. ರಾಜ್ಯ ಸಮಿತಿ ಸದಸ್ಯ ಕೆ.ಬೈರಪ್ಪ. ಜಿಲ್ಲಾ ಸಂಚಾಲಕೆ ಕಾಮಾಕ್ಷಮ್ಮ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಾಸ್ತೇನಹಳ್ಳಿ ಕೃಷ್ಣಪ್ಪ, ತೊರಡಿ ಶಿವಣ್ಣ, ರಾಮಾಪುರ ವೆಂಕಟೇಶ್, ಕೊಳಗಂಜನಹಳ್ಳಿ ಅಂಬರೀಷ್, ಸೂಲಿಕುಂಟೆ ಸಂಜಯ್ ಕುಮಾರ್,ಚಿರುವನಹಳ್ಳಿ ಶ್ರೀರಾಮ್, ಕರಡುಗೊರು ಜಯರಾಮ್ ಚಿಕ್ಕಬಂಡಪಲ್ಲಿ ರಾಮರೆಡ್ಡಿ ಮುಂತಾದವರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.