Home ಜಿಲ್ಲೆ ಕಲಬುರಗಿ ಜೂ. 21 ಸುದೀರ್ಘವಾಗಿರುವ ಯೋಗದ ದಿನ

ಜೂ. 21 ಸುದೀರ್ಘವಾಗಿರುವ ಯೋಗದ ದಿನ

ಕಲಬುರಗಿ:ಜೂ.22: ನಗರದ ಕೋಟನೂರ ಡಿ ಅಟಲ್ ಬಿಹಾರಿ ವಾಜಪೇಯಿ ಕುಡಾ ಬಡಾವಣೆ ಹತ್ತಿರದ ಸಮಾಧಾನದಲ್ಲಿ ಮೌನಯೋಗಿ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ವಿಶ್ವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಸಮಾಧಾನದ ಶ್ರೀಗುರುದೇವ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸಮಾಧಾನದ ಭಕ್ತರು ಹಾಗೂ ವಿವಿಧ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಯೋಗ ಶಿಕ್ಷಕರಾದ ನಿತ್ಯಾ ಬಂಡಿ, ರಾಜು ಕೊಳ್ಳಿ, ಶಿವನಗೌಡ ಪಾಟೀಲ್ ಭೈರಾಮಡಗಿ, ಸಪ್ನಾ ಗಂಧಿ, ಡಾ.ಸಂಗಮೇಶ ಹತ್ತಿ ವಿವಿಧ ಯೋಗ ಪ್ರದರ್ಶನ ನಡೆಸಿಕೊಟ್ಟರು. ಸಾನ್ನಿಧ್ಯ ವಹಿಸಿದ್ದ ಜಡೆ ಹಿರೇಮಠದ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು ಯೋಗದ ಮಹತ್ವ ತಿಳಿಸಿಕೊಟ್ಟರು.
ಅರ್ಧಗಂಟೆ ಯೋಗ ಧ್ಯಾನ ಅಳವಡಿಸಿದರೆ ಉತ್ತಮ ಆರೋಗ್ಯ ಜತೆಗೆ ಸಂಸ್ಕಾರವೂ ವೃದ್ದಿಯಾಗುತ್ತದೆ.ಯೋಗ ಅಂತರ ರಾಷ್ಟ್ರೀಯ ದಿನದ ಒಂದು ದಿನ ಮಾಡದೇ ನಿತ್ಯ ಅರ್ಧ ಗಂಟೆ ಯೋಗ ಹಾಗೂ ಇನ್ನರ್ಧಗಂಟೆ ಧ್ಯಾನ ಮೈಗೂಡಿಸಿಕೊಂಡರೆ ಆರೋಗ್ಯ ವೃದ್ಧಿ ಜತೆಗೆ ಸಂಸ್ಕಾರ ಬಲವರ್ಧನೆ ಗೊಳ್ಳುತ್ತದೆ ಎಂದು ಹೇಳಿದರು.
ಜೂನ್ 21 ಅಂತ್ಯದ ದೊಡ್ಡ ದಿನ. ಹಗಲು ಹೆಚ್ಚು ಇರುತ್ತದೆ. ಯೋಗ ಶರೀರದ ಸದೃಢಗೊಳಿಸಿದರೆ ಧ್ಯಾನ ಮನಸ್ಸನ್ನು ಬಲಿಷ್ಠಗೊಳಿಸುತ್ತದೆ. ಹೀಗಾಗಿ ನಾವು ಯೋಗ ಧ್ಯಾನ ಕಡ್ಡಾಯವಾಗಿ ಅಳವಡಿಸಬೇಕು. ಪೂಜ್ಯರು, ಮೌನಯೋಗಿಗಳವರು 84 ವರ್ಷವಾದರೂ ದಿನಾಲು ಬೆಳಗಿನ ಜಾವ ಯೋಗ ಶಿರಶಾಸನ ಮಾಡುತ್ತಾರೆ. ಸಮಾಧಾನದಲ್ಲಿ ಸಂಸ್ಕಾರ ಶಿಬಿರ ನಡೆಯುತ್ತದೆ. ಎಲ್ಲರೂ ಭಾಗವಹಿಸಬೇಕು ಎಂದು ಘನಬಸವ ಅಮರೇಶ್ವರ ಶಿವಾಚಾರ್ಯರು ಹೇಳಿದರು.
ಯೋಗ ಶಿಕ್ಷಕ ನಿತ್ಯಾ ಬಂಡಿ ಅವರು ಮಾತನಾಡಿ, ಮನಸ್ಸು ಮತ್ತು ದೇಹವನ್ನು ಸರಿಯಾದ ನಿಟ್ಟಿನಲ್ಲಿ ಇಡುವ ಸಾಧನೆ ಯೋಗವಾಗಿದೆ. ಇಂದು ಎಲ್ಲರ ತಲೆ ಚುರುಕಾಗಿದೆ. ಆದರೆ ಕೈ ಕಾಲುಗಳಲ್ಲಿ ಶಕ್ತಿ ಇಲ್ಲ ಎನ್ನುವಂತಾಗಿದೆ. ಶರೀರ ಸದೃಢವಾಗಿದ್ದಲ್ಲಿ ಎಲ್ಲವೂ ಪಡೆಯಲು ಹಾಗೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಜಪಾನ ದೇಶದಲ್ಲಿ ಜನರ ಸರಾಸರಿ ವಯಸ್ಸು 80 ವರ್ಷ ಇದೆ. ಹೊಟ್ಟೆ ಮುಂದೆ ಬರಬಾರದು ಎಂಬ ನಿಯಮವಿದೆ. ಊಟ ಸಹ ಒಂದು ಯೋಗವಾಗಿದೆ. ದಿನಾಲು ಮೂರು ಲೀಟರ್ ಕುಡಿಯಬೇಕು. ಊಟ, ಯೋಗ ನಿಯಮಿತವಾಗಿ ರೂಢಿಸಿಕೊಂಡಿದ್ದರೆ ಬದುಕು ಸಹ ಸುಂದರವಾಗುತ್ತದೆ. ಯೋಗ ರೋಗ ಬಂದರೆ ನಿವಾರಣೆಯಾಗಲು ಹಾಗೂ ಬಾರದಂತೆ ನೋಡಿಕೊಳ್ಳಬೇಕಾದರೆ ಯೋಗ ಅಗತ್ಯವಾಗಿದೆ. ಮನಸ್ಸು ಹಾಗೂ ಬುದ್ದಿ ಎರಡೂ ಕೈಯಲ್ಲಿಡಬೇಕಾದರೆ ಯೋಗ ಅವಶ್ಯಕ ಎಂದು ಹೇಳಿದರು.
ಶ್ರೀ ಗುರು ವಿದ್ಯಾ ಪೀಠ, ಸರ್ವಜ್ಞ ಶಾಲೆ, ಮದರ ತೆರೆಸಾ ಶಾಲೆ ಹಾಗೂ ರೇಷ್ಮೀ ಶಾಲೆಯ ಮಕ್ಕಳು ಯೋಗದಲ್ಲಿ ಪಾಲ್ಗೊಂಡಿದ್ದರು. ಸಮಾಧಾನದ ಹಿರಿಯ ಭಕ್ತರಾದ ಎ.ಬಿ. ಪಾಟೀಲ್ ಬಮ್ಮನಳ್ಳಿ, ಖ್ಯಾತ ವಾಸ್ತು ಶಿಲ್ಪಿ ಬಸವರಾಜ ಖಂಡೇರಾವ, ಜಿ.ಎಸ್. ಪಾಟೀಲ್, ಗುರುರಾಜ ಮಾಳಗೆ ಸೇರಿದಂತೆ ಮುಂತಾದವರಿದ್ದರು.
…………….
ಶರೀರ ಜತೆಗೆ ಮನಸ್ಸು ಸರಿಯಾಗಿರಬೇಕಾದರೆ ಯೋಗ ಜತೆಗೆ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದ ಬಯಕೆಯ ಯುವ ಶಕ್ತಿ ಬೇಕಾಗಿದೆ. ಆದರೆ ಇಂದು ಯುವ ಶಕ್ತಿ ಯಾವ ಮಟ್ಟಕ್ಕೆ ತಲುಪುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಯೋಗ ಒಂದು ದಿನಕ್ಕೆ ಸಿಮೀತವಾಗದಿರಲಿ. ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ ಅರ್ಧ ಗಂಟೆ ಯೋಗ ಅಳವಡಿಸಬೇಕು. ಅರ್ಧಗಂಟೆ ಯೋಗ ಇನ್ನರ್ಧ ಗಂಟೆ ಧ್ಯಾನ ಅಳವಡಿಸಿದರೆ ಉತ್ತಮ ಆರೋಗ್ಯ ಜತೆಗೆ ಸಂಸ್ಕಾರವೂ ವೃದ್ದಿಯಾಗುತ್ತದೆ.

          ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯರು