ಜು. ೭: ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಮಧುಗಿರಿ, ಜು. ೫- ಪ್ರಾಚೀನ ಕಾಲದ ಐತಿಹಾಸಿಕ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಜು ೫ರಿಂದ ೯ರವರೆಗೆ ೫ ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ತಾಲ್ಲೂಕಿನ ಕೊಡುಗೇನಹಳ್ಳಿ ತಾಲ್ಲೂಕಿನ ಐ.ಡಿ ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಗ್ರಾಮದಲ್ಲಿ ೧೩ನೇ ಶತಮಾನದ ಪುರಾತನ ಇತಿಹಾಸ ಸಾರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಜು. ೫ ರಂದು ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದ್ದು ಜು. ೭ ರಂದು ೧೨ ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದೆ. ೮ರಂದು ವಸಂತೋತ್ಸವ ನಡೆಯಲಿದ್ದು, ೯ರಂದು ದ್ವಜಾರೋಹಣ ನಡೆಯಲಿದೆ.


ಪ್ರತಿ ಅಶಾಢ ಶುದ್ಧ ದಶಮಿಯಂದು ೫ ದಿನಗಳ ಕಾಲ ಜಾತ್ರೋತ್ಸವ ಜರುಗಲಿದೆ. ಜೇಷ್ಟ ಮಾಸದಲ್ಲಿ ನವ ದಂಪತಿಗಳು ಬಿಳಿ ವಸ್ತ್ರ ಧರಿಸಿ ತೇರಿನ ಮೇಲೆ ದವಳ ಮತ್ತು ಬಾಳೆ ಹಣ್ಣು ಎಸೆದು ಹರಕೆ ಮಾಡಿಕೊಂಡರೆ ಸಂತಾನ ಭಾಗ್ಯ ದೊರೆಯುವ ಅಪಾರ ನಂಬಿಕೆಯಿಂದ ಭಕ್ತಸಾಗರ ಹರಿದು ಬರುತ್ತದೆ. ರಥೋತ್ಸವದ ಸಮಯದಲ್ಲಿ ಗರುಡ ದರ್ಶನವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರಲಿದ್ದು ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ಸಮಿತಿ ಪ್ರಸಾದ ವಿನಿಯೋಗ ನಡೆಯಲಿದೆ. ಇನ್ನೂ ಸುತ್ತಮುತ್ತಲಿನ ರೈತರಿಂದ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.


ಕಾರ್ಯಕ್ರಮಕ್ಕೆ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಕೇಂದ್ರ ಸಚಿವ ವಿ ಸೋಮಣ್ಣ, ವಿ.ಪ ಸದಸ್ಯ ಆರ್ ರಾಜೇಂದ್ರ ಸೇರಿದಂತೆ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ, ತಹಶಿಲ್ದಾರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.


ನೆರವು ನೀಡಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ (ಮೊ:೯೪೪೯೧೧೧೧೮೦) ಎಸ್.ಬಿ.ಐ ಖಾತೆ ಸಂ ೫೪೦೫೩೬೭೨೬೨೮, ಐಎಫ್‌ಎಸ್‌ಐ ಎಸ್‌ಬಿಐಎನ್೦೦೪೦೩೮೭ ಐ.ಡಿ ಶಾಖೆ, ಬರುವ ಭಕ್ತರು ತಮ್ಮ ಕೈಲಾದಷ್ಟು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೆರವು ನೀಡುವಂತೆ ದೇವಸ್ಥಾನದ ಪ್ರಧಾನ ಅರ್ಚಕ ಮಧು ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.