Home ಜಿಲ್ಲೆ ನ್ಯಾಯಾಧೀಶರು, ನ್ಯಾಯವಾದಿಗಳು ಬಂಡಿಯ ಎರಡು ಎರಡು ಚಕ್ರಗಳಿದ್ದಂತೆ

ನ್ಯಾಯಾಧೀಶರು, ನ್ಯಾಯವಾದಿಗಳು ಬಂಡಿಯ ಎರಡು ಎರಡು ಚಕ್ರಗಳಿದ್ದಂತೆ

ಹುಮನಾಬಾದ್:ಮೇ.26: ನ್ಯಾಯಾಧೀಶರು, ನ್ಯಾಯವಾದಿಗಳು ಒಂದು ಬಂಡಿಯ ಎರಡು ಎರಡು ಚಕ್ರಗಳಿದ್ದಂತೆ ಎಂದು ಹಿರಿಸಿ ಸಿವಿಲ್ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಅವರು ಅಭಿಪ್ರಾಯಪಟ್ಟರು.

ಸೇವೆಯಿಂದ ವರ್ಗಗೊಂಡ ತಮಗಾಗಿ ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿ, ಇಬ್ಬರಲ್ಲಿ ಸಾಮ್ಯತೆ ಇದ್ದರೇ ಮಾತ್ರ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವುದರ ಜತೆಗೆ ನ್ಯಾಯಾಲಯದ ಘನತೆ ಹೆಚ್ಚುವದರೊಂದಿಗೆ ಜನರಿಗೆ ನ್ಯಾಯಾಲಯದ ಬಗೆಗಿನ ವಿಶ್ವಾಸ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಪರಸ್ಪರ ಸಹಕಾರ ಮನೋಭಾವದೊಂದ ಕರ್ತವ್ಯ ನಿರ್ವಹಿಸಿ, ನೊಂದ ಕಕ್ಷಿದಾರರಿಗೆ ನ್ಯಾಯದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಣ್ ಹನುಮೇಗೌಡ ಅವರು ಈವರೆಗೆ ಎಲ್ಲೂ ಸಿಗದ ಸಂತೃಪ್ತಿ ಹುಮನಾಬಾದಲ್ಲಿ ಸಿಕ್ಕಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಭವಿಷ್ಯದಲ್ಲಿ ಅವಕಾಶ ಸಿಕ್ಕರೇ ಮತ್ತೊಮ್ಮೆ ಇಲ್ಲಿಗೆ ಬರುವ ಆಶಾಭಾವ ಇದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾತೆ ವಿವಿಧ ಕಾನೂನು ಅರಿವು ಕಾರ್ಯಕ್ರಮಗಳ ಸಂದರ್ಭದಲ್ಲಿ . ಇರ್ವರೂ ನ್ಯಾಯಾಧೀಸರೊಂದಿಗಿದ್ದ ಒಡನಾಟ ಮೆಲುಕು ಹಾಕಿದರು.

ಹಿರಿಯ ವಕೀಲರಾದ ಎಸ್. ಕೆ.ರಾಯ್, ಎಂ.ಡಿ.ಇಸ್ಮಾಯಿಲ್, ಡಿ.ಮಹಾದೇವಪ್ಪ ಇದ್ದರು. ಹಿರಿಯ ಹಾಗೂ ಯುವ ವಕೀಲರು ವರ್ಗಗೊಂಡು ತೆರಳುತ್ತಿರುವ ನ್ಯಾಯಾಧೀಶರನ್ನು ಸನ್ಮಾನಿಸಿದರು.