ಹುಬ್ಬಳ್ಳಿ,ಅ14: ಜೈನ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿಟೋ) ಹುಬ್ಬಳ್ಳಿ ಚಾಪ್ಟರ್ ತನ್ನ ಮೆಗಾ ಫ್ಲ್ಯಾಗ್‍ಶಿಪ್ ಕಾರ್ಯಕ್ರಮ `ಉದ್ಭವ್ 2.0′ ಅನ್ನು ಎರಡು ದಿನಗಳ ಕಾಲ ಅದ್ದೂರಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮವು ಪ್ರೇರಣೆ, ಅಧ್ಯಯನ, ಅವಕಾಶ ಮತ್ತು ಮನರಂಜನೆಗಳಿಂದ ಕೂಡಿತ್ತು.
ಕಾರ್ಯಕ್ರಮದಲ್ಲಿ ಪ್ರೇರಣಾದಾಯಕ, ವ್ಯವಹಾರ ಮತ್ತು ಶೈಕ್ಷಣಿಕ ಸೆಷನ್‍ಗಳು, ಮನಮೋಹಕ ಭಕ್ತಿ ಸಂಗೀತ ಕಾರ್ಯಕ್ರಮ, ಬಾಲಿವುಡ್ ಸಂಗೀತ ಸಂಜೆ, ಉದ್ಯೋಗ ಮೇಳ ಮತ್ತು 140 ಕ್ಕೂ ಹೆಚ್ಚು ಸ್ಟಾಲ್‍ಗಳುಳ್ಳ ಮೆಗಾ ಟ್ರೇಡ್ ಫೇರ್ ನಡೆಯಿತು. ಈ ಮೇಳದಲ್ಲಿ ವಿವಿಧ ಉದ್ಯಮಿಗಳು ಮತ್ತು ಸಂಸ್ಥೆಗಳು ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಿದರು.
ಮುಖ್ಯ ಕಾರ್ಯದರ್ಶಿ ಪ್ರವೀಣ ಚೌಧರಿ, ಸಂಜಯ ಘೋಡಾವಟ್ , ಅಮನ ಸಿಂಗ್ ಭದೋರಿಯಾ, ಸುಷ್ಮಿತಾ ಸೇಠಿಯಾ (ಸೋಶಿಯಲ್ ಮೀಡಿಯಾ ಇನ್‍ಫ್ಲುವೆನ್ಸರ್), ಪೆÇ್ರ. ಸಮೀಶ ದಲಾಲ್ , ವಿಧಾಯಕ ಅರವಿಂದ ಬೆಳ್ಳಾಡ ಮತ್ತು ಮಹಾವೀರ್ ಗುಗಲಿಯಾ ಸೇರಿದಂತೆ ಇತರ ಗಣ್ಯರು ಹಾಜರಾಗಿದ್ದರು.
ಈ ಕಾರ್ಯಕ್ರಮದ ಅನಿಲ್ ಕುಮಾರ್ ಜೈನ್ (ಅಧ್ಯಕ್ಷ), ಭವರ್ಲಾಲ್ ಸಿ. ಜೈನ್ (ಹಿಂದಿನ ಅಧ್ಯಕ್ಷ), ಗೌತಮ್ ಒಸ್ತ್ವಾಲ್, ಭರತ್ ಪಟ್ಟಾವರಿ (ಕನ್ವೀನರ್), ರಾಜನ್ ಜೈನ್, ಧರ್ಮೇಂದ್ರ ಟೇಟೆಡ್, ನವೀನ್ ಖೀವೇಸ್ರಾ, ಗೀತಾ ಚೇಡಾ, ಕವಿತಾ ಬಾಫ್ನಾ, ಸಂಗೀತಾ ಸಾಂಘವಿ, ವಣಿತಾ ಸುರಾಣಾ, ರಕ್ಷಿತಾ ತಲೇಡಾ, ಆಕಾಶ್ ಬಾಗ್ರೆಚಾ, ನಿರವ್ ಮೋಮಯಾ, ಭರತ್ ಗುಲೇಚಾ ಮತ್ತು ರೋಷನ್ ಟೇಟೆಡ್ ಇದ್ದರು.























