
ಬೀದರ್:ಜ.೧೦: ಪತ್ರಕರ್ತರು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಮಭ ಎಂಬುದು ಜಗಜ್ಜಾಹೀರ. ಗಡಿ ಕಾಯುವ ಸೈನಿಕರು, ಅಂತರಿಕ ಭದ್ರತೆ ಒದಗಿಸುವ ಪೋಲಿಸರು, ಆರೋಗ್ಯ ಕಾಪಡುವ ವೈದ್ಯ ಸಮೂಹದ ಸರದಿಯಲ್ಲಿ ಬರುವವರು ಪತ್ರಕರ್ತರು. ಮೇಲಿನ ನಾಲ್ಕು ಸಮೂಹದವರ ಕಾರ್ಯ ಒತ್ತಡಯುಕ್ತ ಕೆಲಸ. ಅಂಥ ಒತ್ತಡದಲ್ಲಿ ಬದುಕುತ್ತ ನಮ್ಮ ಆರೋಗ್ಯದ ಕಡೆ ಗಮನ ವಹಿಸದೇ ನಮ್ಮ ಉಸಿರಿಗೆ ಸಂಚಕಾರ ನಾವೆ ತಂದು ಕೊಳ್ಳುತ್ತೇವೆ ಎಂದು ಜಿಲ್ಲೆಯ ಪ್ರಸಿದ್ಧ ಹೃದಯ ಸಂಬAಧಿ ಕಾಯಿಲೆಗಳಿಗೆ ನುರಿತ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಗುದಗೆ ಸೂಪರ್ ಸ್ಪೇಷಾಲಿಟಿ ಹಾಗೂ ಮಲ್ಟಿ ಆಸ್ಪತ್ರೆಯ ಖ್ಯಾತ ಹೃದಯರೋಗ ತಜ್ಞರಾದ ಡಾ.ನಿತೀನ ಗುದಗೆ ಹೇಳುತ್ತಾರೆ.
ಪ್ರಕಟಣೆಗೆ ವಿವರಣೆ ನೀಡಿರುವ ಅವರು, ಇತ್ತಿಚೀಗೆ ಬೀದರ್ ಜಿಲ್ಲೆಯಲ್ಲಿ ಇಬ್ಬರು ಯುವ ಪತ್ರಕರ್ತರ ಸಾವು ಸಮಭವಿಸಿರುವುದು ಹೃದಯಘಾತದಿಂದ ಎಂಬುದು ಮೇಲ್ನೋಟಕ್ಕೆ ಸಾಬಿತಾಗಿದೆ. ಪದೆ ಪದೆ ಆರೋಗ್ಯ ತಪಾಸಣೆಗೆ ಒಳಗಾಗಿ ಎಂದು ನಮ್ಮ ಆಸ್ಪತ್ರೆಯಿಂದ ಉಚಿತ ಶಿಬಿರಗಳು, ಹೃದಯರೋಗ ದಿನಾಚರಣೆ ಸಂದರ್ಭದಲ್ಲಿ ಪತ್ರಕರ್ತರಿಗೆ ಉಚಿತ ಹೃದಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಆದರೂ ಕೆಲವರು ಪತ್ರಕರ್ತರು ತಮಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಿದ್ದರೂ ಮಾತ್ರೆಗಳನ್ನು ಸೇವಿಸದೆ ನಿಸ್ಕಾಳಜಿ ವಹಿಸುವುದು, ಜಿಂಕ್ ಫುಡ್‌ಗಳ ಬಳಕೆ, ಹೆಚ್ಚಿನ ಕರಿದ ಪಾದಾರ್ಥಗಳ ಉಪಯೋಗ, ಪಾನಿಪುರಿ, ಸಮೊಸಾ, ಕಚುರಿ, ಭೇಲ್ ಇತ್ಯಾದಿ ಬೀದಿಯಲ್ಲಿ ತಯ್ಯಾರಿಸುವ ಆಹಾರ ಪದಾರ್ಥಗಳ ಸೇವನೆಯಿಂದ ಕೆಟ್ಟ ಕೊಬ್ಬು ಹೆಚ್ಚಾಗಿ ಅದು ಹೃದಯ ಸಂಬAಧಿ ಕಾಯಿಲೆಗಳಿಗೆ ಉತ್ತೇಜಿಸುತ್ತದೆ. ಸಮಯಕ್ಕೆ ಊಟ ಸೇವನೆ ಮಾಡದೆ ಇರುವುದು, ನಿದ್ದೆ ಸರಿಯಾಗಿ ಮಾಡದೇ ಇರುವಿಕೆ, ಇದೆಲ್ಲಕ್ಕೂ ಮಿಗಿಲಾಗಿ ಮೊಬೈಲ್‌ನಲ್ಲಿ ಫೇಸ್ ಬುಕ್ ರೀಲ್ಸ್ ನೋಡುತ್ತ ಹೆಚ್ಚು ಕಾಲ ಕಳೆಯುವುದು. ತಡರಾತ್ರಿ ವರೆಗೆ ಎಚ್ಚರಿಕೆ ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬಿದ್ದು, ಹೃದಯ ಸಂಬAಧಿ ಕಾಯಿಲೆಗಳಿಗೆ ಅವ್ಹಾನ ನೀಡಿದಂತಾಗುತ್ತದೆ. ಇತ್ತಿಚೀಗೆ ಜರುಗಿದ ಈ ಇಬ್ಬರು ಪತ್ರಕರ್ತರ ಸಾವು ಅವರ ಆರೋಗ್ಯದ ನಿಸ್ಕಾಳಜಿ ಎದ್ದು ತೋರುತ್ತಿದ್ದು, ಮಾಧ್ಯಮ ವೃತ್ತಿಯಲ್ಲಿರುವವರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೊಳಪಡಬೇಕು. ಬೀಪಿ, ಶುಗರ್ ಮಾತ್ರೆಗಳಿದ್ದರೆ ಅವನ್ನು ಬಿಡದೆ ಮುಂದುವರೆಸಬೇಕು. ಸಕ್ಕರೆ ಕಾಯಿಲೆ ಇದ್ದವರಿಗಂತೂ ಹೃದಯಘಾತದ ಹೆಚ್ಚಿನ ಲಕ್ಷಣಗಳು ಮೇಲ್ನೋಟಕ್ಕೆ ಗೊತ್ತಾಗದಿದ್ದರೂ ಒಳಗೊಳಗೆ ಸಾವಕಾಶ ರೀತಿಯಲ್ಲಿ ಗೊತ್ತು ಮಾಡುತ್ತದೆ. ಹಾಗಾಗಿ ಸ್ವಲ್ಪ ಡೌಟ್ ಇದ್ದಾಗಲೇ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ನೀವು ಸುರಕ್ಷಿತವಾಗಿರಿ, ನಿಮ್ಮ ಕುಟುಂಬಕ್ಕೂ ಭದ್ರತೆ ಮುಂದುವರೆಸಿ, ಮಾಧ್ಯಮ ಲೋಕವನ್ನು ಸುಸ್ಥಿರವಾಗಿಡಿ ಎಂಬುದು ನಮ್ಮ ಸದಾಶಯವಾಗಿದೆ ಎಂದು ಡಾ.ನಿತೀನ ಗುದಗೆ ತಿಳಿಸಿದ್ದಾರೆ.

























