
ಕಲಬುರಗಿ,ಜೂ.೩೦-ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು, ಬೆಳವಣಿಗೆಗಳು ಆಗುತ್ತಿವೆ. ಆದರೆ, ತಳವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬೆಳವಣಿಗೆ ನೋಡಲು ಸಿಗುತ್ತಿಲ್ಲ. ಆದ್ದರಿಂದ ಆ ಶಿಕ್ಷಣ ಸಂಸ್ಥೆಗಳಿಗೆ ಜನರು ಬೆಂಬಲ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣಾ ಸಮಿತಿ ಸದಸ್ಯರು, ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ. ನಾಗಾಬಾಯಿ ಬುಳ್ಳಾ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿಚೌಕ್ ಬಳಿ ಇರುವ ಅಖಿಲ ಕರ್ನಾಟಕ ಸ್ನೇಹಗಾಂಗಾವಾಹಿನಿಯಯ ಕಸ್ತೂರಿಬಾಯಿ ಬುಳ್ಳಾ ಸಾಂಸ್ಕೃತಿಕ ಭವನದಲ್ಲಿ ರವಿವಾರ ನಡೆದ ಅಖಿಲ ಕರ್ನಾಟಕ ಸ್ನೇಹಗಾಂಗಾವಾಹಿನಿಸAಸ್ಥೆಯ ಸಂಸ್ಥಾಪನ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತ ಸೂರ್ಯಕಾಂತ ಜಮಾದಾರಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಳವರ್ಗ, ಸಮುದಾಯಗಳ ಮತ್ತು ನಮ್ಮ ಕೋಲಿ ಸಮಾಜದ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾದರೆ ಅವು ಬೆಳೆದು ಮಕ್ಕಳಿಗೆ ಶಿಕ್ಷಣ ನೀಡುವ ಹೆಮ್ಮರವಾಗಲು ಎಲ್ಲರ ಸಹಕಾರ ಬೇಕು. ಅದನ್ನು ನಾವು ಅರ್ಥಮಾಡಿಕೊಂಡು ಮುನ್ನಡೆಯಬೇಕು. ತಳವರ್ಗದ ಶಿಕ್ಷಣ ಸಂಸ್ಥೆಗಳು ಬೆಳೆದಾಗ ಎಲ್ಲ ವರ್ಗದ ಜನರಿಗೆ ಶಿಕ್ಷಣ ಸಿಗುತ್ತದೆ. ಆದರೆ, ಕೆಲವೇ ಶಿಕ್ಷಣ ಸಂಸ್ಥೆಗಳು ಬೆಳೆದಾಗ ನಿರೀಕ್ಷಿತ ಶೈಕ್ಷಣಿಕ ಸಹಕಾರ ಅಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಬುರಗಿ ಉತ್ತರ ವಲಯ ಬಿಇಓ ಸೋಮಶೇಖರ ಹಂಚಿನಾಳ ಮಾತನಾಡಿ, ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ ಅದನ್ನು ಎಲ್ಲರೂ ಕುಡಿದಾಗಲೇ ನಮ್ಮ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಸಮಾಜಗಳು ಘರ್ಜಿಸಲು ಸಾಧ್ಯ ಎಂದ ಅವರು, ಸ್ನೇಹಗಂಗಾವಾಹಿನಿ ಶಿಕ್ಷಣ ಸಂಸ್ಥೆಯಿAದ ಪ್ರೌಢ ಶಾಲೆ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷಡಾ. ಬಿ.ಪಿ. ಬುಳ್ಳಾ ಮಾತನಾಡಿ, ಅಂಬೇಡ್ಕರ್ ಅವರು, ಸಾಧನೆಯ, ಭಾರತದ ಇತಿಹಾಸದ ರಥವನ್ನು ನಾನು ಇಲ್ಲಿಯವರೆಗೆ ಎಳೆ ತಂದಿದ್ದೇನೆ. ನಿಮ್ಮ ಕೈಯಲ್ಲಿ ಆದರೆ, ಮುಂದೆ ಎಳೆದೋಯ್ದಿರಿ.. ಆದರೆ, ಹಿಂದಕ್ಕೆ ತಳ್ಳಬೇಡಿ ಎಂದು ಹೇಳಿದ್ದರು. ಆದರಂತೆ ಸಂಸ್ಥೆಗಳ ಬೆಳವಣಿಗೆಯಲ್ಲಿ ನಮ್ಮ ಕೈ ಜೋಡಿಸಿ ಸಹಕಾರ ನೀಡುವ ಮನಸ್ಸಿದ್ದರೆ ಕೈ ಹಚ್ಚಿ, ಇಲ್ಲವೇ ಅದನ್ನು ಹಿಂದಕ್ಕೆ ಎಳೆಯುವ ಪ್ರಯತ್ನ ಬೇಡ ಎಂದು ಸಂಸ್ಥೆಯ ಬೆಳವಣಿಗೆಗೆ ಸಹಕಾರ ಕೊಡದ ಮನಸ್ಸುಗಳಿಗೆ ಸ್ವಾಗತಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉದಯವಾಣಿ ವರದಿಗಾರ ಸೂರ್ಯಕಾಂತ್ ಎಂ.ಜಮಾದಾರ, ಪ್ರಶಸ್ತಿಗಳು ಸಮಾಜದ ಪ್ರತಿ ಇನ್ನಷ್ಟು ಜವಾಬ್ದಾರಿಗಳನ್ನು ಹೆಚ್ಚು ಮಾಡುತ್ತವೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನವನ್ನು ಮಾಡುತ್ತೇನೆ. ಪ್ರತಿಯೊಬ್ಬ ಪತ್ರಕರ್ತ ಒಂದು ಸಮಾಜದನಾಗಿರುವುದು ಸಾಮಾನ್ಯ. ಆದರೆ, ವೃತ್ತಿಯ ಜವಾಬ್ದಾರಿ ನಿಭಾಯಿಸುವಾಗ ಆತ ನಿಷ್ಟುರವಾಗುತ್ತಾನೆ. ಅದನ್ನು ಸಮಾಜದ ಜನರು ಅರ್ಥ ಮಾಡಿಕೊಂಡಾಗ ಒಳ್ಳೆಯ ಸಂಬAಧ ನಿಭಾಯಿಸಬಹುದು ಎಂದರು.
ಮುAದಿನ ವರ್ಷದಿಂದ ಸಂಸ್ಥೆಯಲ್ಲಿ ಓದಿ ಉತ್ತಮ ಅಂಕ ಪಡೆಯುವ ವಿದ್ಯಾರ್ಥಿಗೆ ನನ್ನ ತಂದೆ ದಿ.ಮಲಕಪ್ಪ ಹಣಮಂತಪ್ಪ ಜಮಾದಾರ ಸ್ಮರಣಾರ್ಥ ಬಹುಮಾನ ನೀಡುತ್ತೇನೆ. ಅದರಿಂದ ವಿದ್ಯಾರ್ಥಿಗಳ ಮುಂದಿನ ಓದಿಗೆ ತುಸು ಸಹಕಾರ ಸಿಗಲಿದೆ ಎಂದರು.
ಈ ವೇಳೆಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಸೈಬಣ್ಣ ಕೆ. ವಡಗೇರಿ, ಉಪಾಧ್ಯಕ್ಷರಾಮಲಿಂಗ ನಾಟೀಕಾರ, ಧರ್ಮರಾಜ್ ಜವಳಿ ಸೇರಿದಂತೆ ಅನೇಕರು ಇದ್ದರು.
ಪ್ರಾಸ್ತಾವಿಕವಾಗಿ ಡಾ. ರಾಘವೇಂದ್ರ ಗುಡಗುಂಟಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ಕುರಿತು ಹೇಳಿದರು. ಯಲ್ಲಾಲಿಂಗ ಕೋಬಾಳ ಸ್ವಾಗತಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು.
ಚAದ್ರಕಾAತ ತಳವಾರ ನಿರೂಪಿಸಿದರು. ಸಮಾಜದ ಬಂಧುಗಳು ಹಾಗೂ ಇತರರು ಇದ್ದರು.