
ಚನ್ನಮ್ಮನ ಕಿತ್ತೂರು,ಜೂ೨೪: ತಾಲೂಕಿನ ಖೋದಾನಪೂರ ಗ್ರಾಮದ ಖ್ಯಾತ ಉದ್ಯಮಿ ಹಾಗೂ ಕಾಂಗ್ರೇಸ್ ಮುಖಂಡ ರಾಜೇಂದ್ರ ನಾನಾಸಾಹೇಬ ಇನಾಮದಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಂದೀಪ ದೇಶಪಾಂಡೆ, ಮಾಜಿ ಜಿಪಂ ಉಪಾಧ್ಯಕ್ಷ ಚನ್ನಬಸಪ್ಪ ಮೊಕಾಶಿ, ಮುಖಂಡೆ ಲಕ್ಷಿ÷್ಮÃ ಇನಾಮದಾರ, ಉದ್ಯಮಿ ವಿಕ್ರಮ ಇನಾಮದಾರ, ರಾಜೇಂದ್ರ ಇನಾಮದಾರ, ಮಹಾಂತೇಶ ಗೌಡ, ಸಿದ್ದಪ್ಪ ಗಡ್ಡಿಗಾಲ, ಷಣ್ಮೂಖಪ್ಪ ತಿಗಡಿ, ಪ್ರಕಾಶ ಮೇಟ್ಯಾಲ, ರಿಯಾಜ್ ಸೈಯದ, ಕುತುಬ್ಬುದ್ದೀನ್ ಕಿಲ್ಲೇದಾರ, ಕಲ್ಲಪ್ಪ ಕಿವುಡಿ, ಫಕ್ಕೀರಪ್ಪ ಉಡಕೇರಿ,ವೀರಭದ್ರಪ್ಪ ಹೊಸಮನಿ, ಸರಸ್ವತಿ ಹೈಬತ್ತಿ, ಅಪ್ಪಣ್ಣಾ ಪಾಗಾದ, ರಮೇಶ ಉಗರಖೋಡ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.




























