
ಬೀದರ್: ಬೀದರ್ನ ಲಿಂಗರಾಜ ಅಪ್ಪ ಎಂಜಿನಿಯರಿAಗ್ ಕಾಲೇಜಿನಲ್ಲಿ ಅಕ್ಟೋಬರ್ ೧೩, ೨೦೨೬ರಂದು ನಡೆದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು ೮೨ ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ಕಾರ್ಯಕ್ರಮವು ವಿದ್ಯಾ ಭಂಡಾರಿ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪ, ೮ನೇ ಮಹಾದಾಸೋಹ ಪೀಠಾಧಿಪತಿ, ಶರಣಬಸವೇಶ್ವರ ಸಂಸ್ಥಾನ, ಕಲಬುರಗಿ ಹಾಗೂ *ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ, ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ ಮತ್ತು ಗೌರವಾನ್ವಿತ ಕುಲಾಧಿಪತಿಗಳು, ಶರಣಬಸವ ವಿಶ್ವವಿದ್ಯಾಲಯ ,ಕಲಬುರಗಿ.ಪೂಜ್ಯ ದೊಡ್ಡಪ್ಪ ಎಸ್. ಅಪ್ಪ ೯ನೇ ಮಹಾದಾಸೋಹ ಪೀಠಾಧಿಪತಿ, ಶರಣಬಸವೇಶ್ವರ ಸಂಸ್ಥಾನ, ಕಲಬುರಗಿ ಅವರ ಆಶೀರ್ವಾದದೊಂದಿಗೆ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಎಸ್. ದೇಶಮುಖ್ ಅವರ ಮಾರ್ಗದರ್ಶನದಲ್ಲಿ ಜರುಗಿತು.
ಕಾಲೇಜಿನ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಆಯೋಜಿಸಲಾದ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಫಾಕ್ಸ್ಕಾನ್ (ಈoxಛಿoಟಿಟಿ), ಶ್ನೈಡರ್ ಎಲೆಕ್ಟ್ರಿಕ್ (Sಛಿhಟಿeiಜeಡಿ ಇಟeಛಿಣಡಿiಛಿ), ಕಿಯಾ ಮೋಟಾರ್ಸ್ (ಏiಚಿ ಒoಣoಡಿs) ಹಾಗೂ ಗ್ಲೋ ಲಾಜಿಕ್ಸ್ (ಉಟoತಿ ಐogiಛಿs) ಕಂಪನಿಗಳು ಭಾಗವಹಿಸಿದ್ದವು.
ಗ್ಲೋ ಲಾಜಿಕ್ಸ್ ಕಂಪನಿಯಲ್ಲಿ ಒಃಂ ವಿಭಾಗದ ೭ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ ಗರಿಷ್ಠ ವೇತನ ಪ್ಯಾಕೇಜ್ ?೬.೨೦ ಲಕ್ಷವಾಗಿದೆ. ಕಿಯಾ ಮೋಟಾರ್ಸ್ನಲ್ಲಿ ಇಇಇ, ಅSಇ, ಇಅಇ ಮತ್ತು ಮೆಕ್ಯಾನಿಕಲ್ ವಿಭಾಗಗಳ ಒಟ್ಟು ೨೬ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ ?೨.೪೦ ಲಕ್ಷದ ವೇತನ ಪ್ಯಾಕೇಜ್ ಲಭ್ಯವಾಗಿದೆ.
ಫಾಕ್ಸ್ಕಾನ್ ಕಂಪನಿಯಲ್ಲಿ ಇಅಇ, ಇಇಇ, ಃಅಂ ಮತ್ತು ಅSಇ ವಿಭಾಗಗಳ ಒಟ್ಟು ೪೬ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ ?೨.೨೮ ಲಕ್ಷದ ವೇತನ ಪ್ಯಾಕೇಜ್ ನೀಡಲಾಗಿದೆ. ಶ್ನೈಡರ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಅSಇ ವಿಭಾಗದ ೩ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ ?೨.೧೦ ಲಕ್ಷದ ವೇತನ ಪ್ಯಾಕೇಜ್ ಲಭ್ಯವಾಗಿದೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳ ನಿಯಮಾನುಸಾರ ಉಚಿತ ಸಾರಿಗೆ, ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಎಸ್. ದೇಶಮುಖ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಿತಾ ಪಾಟೀಲ್ ಹಾಗೂ ತರಬೇತಿ ಮತ್ತು ಉದ್ಯೋಗ ನಿಯೋಜನಾಧಿಕಾರಿ ಶ್ರೀ ವಿವೇಕಾನಂದ ಬಿರಾದಾರ ,ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದ ಹಾಗೂ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ಸಂಯೋಜಕರು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ ನಾಲ್ಕೂ ಕಂಪನಿಗಳಿಗೆ ಕಾಲೇಜಿನ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ವೃತ್ತಿಪರ ಬೆಳವಣಿಗೆಗೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಾಲೇಜು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಲಾಯಿತು.


















