Home ಜಿಲ್ಲೆ ತುಮಕೂರು ಜ್ಞಾನಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜ್ಞಾನಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 34;

ಕುಣಿಗಲ್, ಸೆ. ೨೬- ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆ, ವಿದ್ಯೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಪ್ರತಿಭಾವಂತರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಬಿ. ರಾಮಸ್ವಾಮಿಗೌಡ ಹೇಳಿದರು.


ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲ್ಲೂಕು ೧೪ ರಿಂದ ೧೭ ವರ್ಷದ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಜ್ಞಾನಭಾರತಿ ವಿದ್ಯಾ ಸಂಸ್ಥೆಯ ೬೪ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಿವಿಧ ಕ್ರೀಡೆಗೆ ಆಯ್ಕೆಯಾಗಿದ್ದು, ನಮ್ಮ ವಿದ್ಯಾ ಸಂಸ್ಥೆಯಲ್ಲಿ ಕ್ರೀಡೆ, ವಿದ್ಯೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾದರಿಯಾಗಿರುವುದರ ಜತೆಗೆ ೮ನೇ ತರಗತಿ ವಿದ್ಯಾರ್ಥಿ ಸುಹಾಸ್‌ಗೌಡ ಖೋಖೋ ಪಂದ್ಯದಲ್ಲಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಎಂದರು.


೬೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾನೆ ಎಂದು ಅವರು ತಿಳಿಸಿದರು.


ಅಥ್ಲೆಟಿಕ್ಸ್‌ನಲ್ಲಿ ಮನೋಜ್ ಬಿ. ೧೦೦ ಮೀಟರ್ ಓಟ ದ್ವಿತೀಯ ಸ್ಥಾನ, ೪೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತ ಹೇಮಂತ್ ಎನ್. ಎಲ್. ದ್ವಿತೀಯ ಸ್ಥಾನ, ೬೦೦ ಮೀಟರ್ ಓಟದಲ್ಲಿ ಸುಹಾನ್ ಡಿ. ಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಗುಂಪು ಆಟಗಳಲ್ಲಿ ಖೋಖೋ ಬಾಲಕರು ಪ್ರಥಮ, ಸುಭಾನ್ ಸುಹಾನ್ ಡಿ. ಗೌಡ ಮತ್ತು ತಂಡ, ಕಬ್ಬಡಿ ಬಾಲಕರು ದ್ವಿತೀಯ ಸ್ಥಾನ ಭರತ್ ಸಿ. ಮತ್ತು ತಂಡ, ಕಬಡ್ಡಿ ಬಾಲಕಿಯರು ಪ್ರಥಮ ಸ್ಥಾನ ಖಾನಿಕಾ, ಪ್ರಿಯಾ ಮತ್ತು ತಂಡದವರು.