
ಔರಾದ್ : ಮಾ.೩: ತಾಲ್ಲೂಕಿನ ಜಿರ್ಗಾ(ಬಿ) ಗ್ರಾಮದಲ್ಲಿ ಜಲ ಜೀವನ ಮೀಷನ (ಜೆಜೆಎಂ) ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಅಧಿಕಾರಿಗಳು ಅನುದಾನ ತಡೆಹಿಡಿದು ತನಿಖೆ ಕೈಗೊಳ್ಳುವಂತೆ ಗ್ರಾಮಸ್ಥರು ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಸಹಾಯಕ ಕಾರ್ಯಾನಿರ್ವಾಹಕ ಇಂಜಿನಿಯರ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಿ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಈ ಕುರಿತು ಸುಮಾರು ಸಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಮತ್ತು ಪೈಪ್ ಗಳಿಗೆ ತೋಡಿರುವ ಗುಂಡಿ ಕೇವಲ ಒಂದು ಅಡಿ ಆಳ ತೇಗೆದು ಪೈಪ್‌ಗಳನ್ನು ಹಾಕಿರುತ್ತಾರೆ. ಸದರಿ ಕಾಮಗಾರಿಯ ಹಣವನ್ನು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಲೂಟಿ ಮಾಡುತ್ತಿದ್ದಾರೆ. ಯಾವುದೆ ಬೃಹತ ಗಾತ್ರದ ವಾಹನಗಳು ಓಡಾಡಿದರೆ ಪೈಪ್ ಸಂಪೂರ್ಣ ರೀತಿಯಲ್ಲಿ ಓಡೆದು ಹೊಗುತ್ತವೆ. ಬೋರವೇಲ್ ಇನ್ನು ಹಾಕಿರುವುದಿಲ್ಲಾ. ಮತ್ತು ಟ್ಯಾಂಕ್ಗವನ್ನು ನಿರ್ಮಾಣ ಮಾಡಿರುವುದಿಲ್ಲ.
ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡಿದ ನಂತರ ಅನುದಾನವನ್ನು ಬೀಡುಗಡೆ ಮಾಡಬೇಕು ಅಲ್ಲಿಯ ವರೆಗೆ ಅನುದಾವನ್ನು ತಾವುಗಳು ತಡೆಹಿಡಿಯಬೇಕು ಇಲ್ಲದಿದ್ದರೆ ನಾವು ಮಾನ್ಯ ತಹಶೀಲ್ದಾರ ರವರ ಕಛೇರಿ ಎದುರಗಡೆ ಧರಣಿ ಹೋರಾಟ ಮಾಡುತ್ತೇವೆಂದು ತಮ್ಮಲ್ಲಿ ಈ ಮೂಲಕ ತಿಳಿಸುತ್ತೇವೆ.
ಈ ಸಂಧರ್ಭದಲ್ಲಿ ಬಸವರಾಜ ಕೋಟೆ, ಸಿದ್ದಪ್ಪಾ ಬಂಬುಳಗೆ, ಭರತ ಕೋಟೆ, ಗುರುನಾಥ ಬಂಬುಳಗೆ, ಶಂಕರ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






















