
ಕಲಬುರಗಿ:ಜ.11:ಕೆಕೆಆರ್‍ಟಿಸಿಯಿಂದ ಜೇವರ್ಗಿ ಡೀಪೆÇೀಗೆ ಒದಗಿಸಲಾಗಿರುವ ಬಸ್ಸುಗಳನ್ನು ಶುಕ್ರವಾರ ಕೆಕೆಆರ್‍ಡಿಬಿ ಅದ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಅವರು ಸೇಡಂನಲ್ಲಿ ತಾವೇ ಸ್ವತಃ ಬಸ್ ಚಲಾಯಿಸಿ ಉದ್ಘಾಟಿಸಿ ಗಮನ ಸೆಳೆದರು.
ಜೇವರ್ಗಿ ಬಸ್ ಡೀಪೆÇೀದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ. ಅಜಯ್ ಸಿಂಗ್ ಅವರು ತೆಂಗು ಒಡೆದು ಪೂಜೆ ಸಲ್ಲಿಸಿದವರೇ ತಾವೇ ಬಸ್ ಹತ್ತಿ ಚಾಲಕರ ಸೀಟ್‍ನಲ್ಲಿ ಕುಳಿತು ನಿಧಾನಕ್ಕೆ ಬಸ್ ಚಲಾಯಿಸಿದರು. ಕಾರ್ಯಕರ್ತರು ಬಸ್‍ನಲ್ಲಿದ್ದು ಹೊಸ ಬಸ್ಸುಗಳ ಶುಭಾರಂಭಕ್ಕೆ ಸಂತಸಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಜಯ್ ಸಿಂಗ್ ಅವರು ಜೇವರ್ಗಿಗೆ ಇನ್ನೂ ಹೆಚ್ಚಿನ ಬಸ್ಸುಗಳ ಅಗತ್ಯತೆ ಇದ್ದಲ್ಲಿ ತಕ್ಷಣ ಪ್ರಸ್ತಾವನೆ ತಮಗೆ ಕೊಡಬೇಕು. ಅದನ್ನು ತಾವು ಸಾರಿಗೆ ಸಚಿವರು ಹಾಗೂ ಕೆಕೆಆರ್‍ಟಿಸಿ ಅದ್ಯಕ್ಷರ ಗಮನಕ್ಕೆ ತಂದು ಹೆಚ್ಚಿನ ಬಸ್ಸುಗಳ ಮಂಜೂರಾತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಡೀಪೆÇೀ ಮೆನೆಜರ್ ಕೃಷ್ಣ ಪವಾರ್, ಶಂಕರ ಕಟ್ಟಿ ಸಂಗಾವಿ ಸೇರಿದಂತೆ ಸಾರಿಗೆ ಇಲಾಖೆಯ ಅದಿಕಾರಿಗಳು, ಪ್ರಮುಖ ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭದಲ್ಲಿ ಡೀಪೆÇೀದಲ್ಲಿರು ಕೆಲಸದಲ್ಲಿರುವ ಮಹಿಳಾ ಸಿಬ್ಬಂದಿ ಡಾ. ಅಜಯ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.
ಹೊಸ ಬಸ್ಸುಗಳು ಜೇವರ್ಗಿಯಿಂದ ಯಡ್ರಾಮಿಗೆ ನಿತ್ಯ ಸಂಚರಿಸಲಿದ್ದು ಇಜೇರ ಮಾರ್ಗದಲ್ಲಿ ಸಾಗಲಿವೆ. ಇನ್ನೂ ಹೆಚ್ಚಿನ ಬಸ್ಸುಗಳ ಅಗತ್ಯವನ್ನು ಈ ಸಂದರ್ಭದಲ್ಲಿ ಡೀಪೆÇೀ ಮೆನೆಜರ್ ಪವಾರ್ ಶಾಸಕರ ಗಮನಕ್ಕೆ ತಂದಿದ್ದು ಶೀಘ್ರವೇ ತಚಾವು ಹೊಸ ಬಸ್ಸುಗಳನ್ನು ಒದಗಿಸುವ ಭರವಸೆ ಡಾ. ಅಜಯ್ ಸಿಂಗ್ ನೀಡಿದ್ದಾರೆ.























