Home ಜಿಲ್ಲೆ ಜೆಇಇ ಮೇನ್ಸ್ ಪರೀಕ್ಷೆ: ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ

ಜೆಇಇ ಮೇನ್ಸ್ ಪರೀಕ್ಷೆ: ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ

ಬೀದರ್:ಫೆ.೨೫: ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಮೊದಲ ಹಂತದ ಪರೀಕ್ಷೆಯಲ್ಲಿ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಕಾಲೇಜಿನ ಸಾಯಿಕುಮಾರ ಎಸ್. ೮೨ ಪರ್ಸೆಂಟೈಲ್, ಶಿವಕುಮಾರ ಜಿ. ೭೪ ಪರ್ಸೆಂಟೈಲ್, ಸುದರ್ಶನ್ ಎಸ್. ೭೨ ಪರ್ಸೆಂಟೈಲ್, ಕೃಷ್ಣ ಎಸ್. ೬೮ ಪರ್ಸೆಂಟೈಲ್, ಅಮೂಲ್ಯ ಪಿ. ೬೭ ಪರ್ಸೆಂಟೈಲ್, ಸಿದ್ಧಾರ್ಥ್ ೬೬ ಪರ್ಸೆಂಟೈಲ್, ಗಿರೀಶ್ ಜಿ. ೫೯ ಪರ್ಸೆಂಟೈಲ್ ಅಂಕ ಗಳಿಸಿದ್ದಾರೆ.
ಪ್ರಜ್ವಲ್ ಎಸ್., ಗಣೇಶ ಪಿ, ಸಂಧ್ಯಾರಾಣಿ ಎಸ್., ಕಿರಣ ಬಿ., ಸ್ನೇಹಾ ಎಸ್, ಭೂಮಿಕಾ ಜೆ., ರೋಹಿತ್ ಆರ್., ಅಮೂಲ್ಯ ಎಂ., ವೇದಾಂತ ಎ., ಸುಮೀತ್ ಎಸ್. ಅರ್ಹತೆ ಗಳಿಸಿದ್ದಾರೆ.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ೧೭ ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ. ಆಡಳಿತ ಮಂಡಳಿ, ಉಪನ್ಯಾಸಕರ ಮಾರ್ಗದರ್ಶನ, ಪಾಲಕರ ಸಹಕಾರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಕಾಲೇಜು ಪ್ರಾಚಾರ್ಯ ಗೋವಿಂದ ತಾಂದಳೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಗೋಪಾಲ್ ಡಿ. ತಾಂದಳೆ ಹಾಗೂ ಕಾಲೇಜು ಪ್ರಾಚಾರ್ಯ ಗೋವಿಂದ ಡಿ. ತಾಂದಳೆ ಸಂತಸ ವ್ಯಕ್ತಪಡಿಸಿದ್ದಾರೆ.