೨೫ಕೋಟಿ ವೆಚ್ಚದಲ್ಲಿ ಕಳಪೆ ಮಟ್ಟದಿಂದ ನಡೆಯುತ್ತಿರುವಜವಳಗಾ-ಹರನಾಳ ಮುಖ್ಯ ರಸ್ತೆ : ಮಾಲಿ ಪಾಟೀಲ ಆರೋಪ

ಜೇವರ್ಗಿ :ಸೆ.೨೪: ತಾಲೂಕಿನ ಜವಳಗಾ-ಹರನಾಳ ಮುಖ್ಯ ರಸ್ತೆಯು ಪಿಡಬ್ಲೂಡಿ ಇಲಾಖೆಯಿಂದ ಅಂದಾಜು ೨೫ಕೋಟಿ ರೂ ವೇಚ್ಚದಲ್ಲಿ ಡಾಂಬರಿಕರಣ ರಸ್ತೆ ನಡೆಯುತ್ತಿದ್ದು, ಅದರ ಜೊತೆಗೆ ರಸ್ತೆಯ ಎರಡು ದಂಡೆಗೆ ೨.೧/೨ ಮೀಟರ ರಸ್ತೆಯು ಸುಧಾರಣೆ ಮಾಡಿ ಉಳಿದ ೭ ಮೀಟರ ಡಾಂಬರಿಕರಣ ರಸ್ತೆ ಮಾಡಬೇಕೆಂದು ಅಂದಾಜು ಪತ್ರಿಕೆಯಲ್ಲಿದೆ. ಆದರೆ ಇಲ್ಲಿನ ಗುತ್ತಿಗೆದಾರರು ಅಂದಾಜು ಪತ್ರಿಕೆಯ ಪ್ರಕಾರ ಮರಳು, ಕಂಕರ, ಮರಮ ಬಳಸದೆ ಮಣ್ಣು ಮಿಶ್ರಿತ ಮರಳು ಹಾಗೂ ದೊಡ್ಡ ದೊಡ್ಡ ಕಲ್ಲುಗಳು ತುಂಬಿದ ಮುರಮನ್ನು ಬಳಸಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡುತ್ತಿದ್ದಾರೆ.
ಸಣ್ಣ ಪ್ರಮಾಣದ ಮುರಮ ಬಳಸಿದರೆ ರಸ್ತೆಯು ಅಚ್ಚುಕಟ್ಟಾಗಿ ಆಗುತ್ತದೆ. ಆದರೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲ ಎಂಬAತೆ ತಮ್ಮ ಮನಸ್ಸಿಗೆ ಬಂದAತೆ ಕಲ್ಲುಗಳು ಹಾಕಿ ರಸ್ತೆಯನ್ನು ಮಾಡುತ್ತಿರುವದರಿಂದ ರಸ್ತೆ ಮಾಡುವ ಮುನ್ನವೆ ಕಲ್ಲುತುಂಬಿದ ಮುರುಮಿನ ಟಿಪ್ಪರ ಈಗಾಗಲೇ ಆ ರಸ್ತೆಯ ನಡುವೆ ಸಿಕ್ಕಾಕ್ಕಿಕೊಂಡಿದೆ ಎಂದರೆ ಮುಂದೆ ಈ ರಸ್ತೆಯ ಮೇಲೆ ಓಡಾಡುವ ಸಾರ್ವಜನಿಕರ ಪರಸ್ಥಿತಿ ಆ ದೇವರೆಬಲ್ಲ ಎಂಬAತಾಗಿದೆ.
ಈ ಒಂದು ಕಾಮಗಾರಿಯಲ್ಲಿ ಗುತ್ತಿಗೆದಾರ, ಪಿಡಬ್ಲೂಡಿ ಅಧಿಕಾರಿ ಎಇಇ ತಜಮುಲ್ ಹುಸೇನ ಎಲ್ಲರೂ ಶ್ಯಾಮಿಲಾಗಿ ಕಳಪೆ ಮಟ್ಟದ ರಸ್ತೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಕೂಡಲೇ ಉನ್ನತ ಮಟ್ಟದ ಅಧಿಕಾರಿಗಳ ಇಇ ತಂಡವನ್ನು ರಚಿಸಿ, ಕಾಮಗಾರಿ ವಿಕ್ಷಣೆ ಮಾಡಿ, ಈ ಒಂದು ಕಳಪೆ ಕಾಮಗಾರಿಯಲ್ಲಿ ಶ್ಯಾಮಿಲಾಗಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಉನ್ನತ ಮಟ್ಟದ ರಸ್ತೆಯನ್ನು ನಿರ್ಮಿಸಲು ಸೂಚಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂತೋಷಗೌಡ ಜಿ ಮಾಲಿ ಪಾಟೀಲ ಅವರು ಗಂಭೀರವಾಗಿ ಆರೋಪಿಸಿದ್ದಾರೆ.