ಬೀದರ್: ಅ.೭:ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಆದ ಹಾನಿಯ ಪರಿಹಾರ ಕಾರ್ಯಕ್ಕಾಗಿ ಧಾರಾಶಿವ(ಉಸ್ಮಾನಾಬಾದ್)ದ ಜನತಾ ಸಹಕಾರಿ ಬ್ಯಾಂಕ್ ನಿಯಮಿತವು ಜಿಲ್ಲಾಡಳಿತಕ್ಕೆ ರೂ. ೫ ಲಕ್ಷ ದೇಣಿಗೆ ನೀಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷ ವಸಂತರಾವ್ ನಾಗದೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ಬೀದರ್ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಬೆಳೆ, ಮನೆ, ಜನ, ಜಾನುವಾರಿಗೆ ಹಾನಿ ಉಂಟಾಗಿದೆ. ಹೀಗಾಗಿ ಸಾಮಾಜಿಕ ಹೊಣೆಗಾರಿಕೆ ಭಾಗವಾಗಿ ಬ್ಯಾಂಕ್‌ನಿAದ ಜಿಲ್ಲಾಡಳಿತಕ್ಕೆ ದೇಣಿಗೆ ಕೊಡಲಾಗಿದೆ ಎಂದು ಅವರು ತಿಳಿಸಿದರು.
ಬ್ಯಾಂಕ್‌ನಿAದ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಧಾರಾಶಿವ ಜಿಲ್ಲೆಗೆ ರೂ. ೧೦ ಲಕ್ಷ, ಲಾತೂರು, ಬೀಡ್ ಹಾಗೂ ಸೋಲಾಪುರ ಜಿಲ್ಲೆಗೆ ತಲಾ ರೂ. ೫ ಲಕ್ಷ ದೇಣಿಗೆ ನೀಡಲಾಗಿದೆ ಎಂದು ಹೇಳಿದರು.
ಬ್ಯಾಂಕ್ ನಿರ್ದೇಶಕರಾದ ನಂದಕುಮಾರ ನಾಗದೆ, ಪ್ರದೀಪ್ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ್ ಕಾರಬಾರಿ, ಮರಾಠಾ ಕ್ರಾಂತಿ ಮುಖ ಮೋರ್ಚಾ ಜಿಲ್ಲಾ ಸಂಯೋಜಕ ವೆಂಕಟರಾವ್ ಮಾಯಿಂದೆ, ಸುಶಾಂತ್ ಪವಾರ್, ಮರಗನೆ ಗುರೂಜಿ, ರೋಹಿತ್ ಮಾಯಿಂದೆ, ಅಶೋಕ್ ಜಾಧವ್ ಮತ್ತಿತರರು ಇದ್ದರು.























