10 ಲಕ್ಷ ಮೌಲ್ಯದ 22 ಬೈಕ್ ಕದ್ದಿದ್ದ ಕಳ್ಳನ ಬಂಧಿಸಿದ ಜಮಖಂಡಿ ಪೊಲೀಸರು

ಜಮಖಂಡಿ:ಸೆ.5: ತಾಲೂಕಿನ ಸುತ್ತಮುತ್ತಲಿನ ಕಳ್ಳತನ ವಾಗಿದ್ದ 22 ಬೈಕ್ ಗಳನ್ನ ಪತ್ತೆ ಮಾಡುವಲ್ಲಿ ಜಮಖಂಡಿ ಪೆÇಲೀಸರು ಯಶಸ್ವಿಯಾಗಿದ್ದಾರೆ.

ಜಮಖಂಡಿ ಶಹರ್ ಹಾಗೂ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವಾಗಿದ್ದ ಅಂದಾಜು ಹತ್ತು ಲಕ್ಷ ಮೌಲ್ಯದ ವಿವಿಧ ಕಂಪನಿಗಳ 22 ಬೈಕಗಳನ್ನ ಪತ್ತೆ ಮಾಡಿದ್ದಾರೆ.ಇನ್ನು ಕಳ್ಳತನ ಮಾಡಿದ್ದ ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ಕಳ್ಳ ಸಿದ್ದಪ್ಪ ಉಪ್ಪಲದಿನ್ನಿಯನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕಳೆದ ಜೂನ್ 9.ರಂದು ಜಮಖಂಡಿ ನಗರದ ಕೋಷ್ಠಿ ಗಲ್ಲಿಯಲ್ಲಿ ಅಪ್ಪಾಸಾಹೇಬ್ ಬಿರಾದಾರ ಎನ್ನುವವರ ಬೈಕ್ ಕಳ್ಳತನವಾಗಿತ್ತು.ಅವರು ಈ ಕುರಿತು ಶಹರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಬೆನ್ನತ್ತಿದ ಪೆÇಲೀಸರು ಜಮಖಂಡಿ ಶಹರ್ ಹಾಗೂ ಗ್ರಾಮೀಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 22 ಬೈಕಗಳನ್ನ ಪತ್ತೆ ಮಾಡಿ ಆರೋಪಿಯನ್ನ ಬಂಧಿಸಿದ್ದಾರೆ.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಮಹಾಂತೆಶ್ವರ ಜಿದ್ದಿ ಡಿ.ವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ್,ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಪ್ಪ ಡಿ ಮಡ್ಡಿ,ನೇತೃತ್ವದಲ್ಲಿ ಪಿ.ಎಸ್.ಐ ಅನಿಲ್ ಕುಂಬಾರ.ಅಪರಾದ ವಿಭಾಗದ ಪಿ.ಎಸ್.ಐ ಎನ್. ಕೆ. ಕಾಜಗಾರ, ಪಿ.ಎಸ್.ಐ,ಸಿಬ್ಬಂದಿಗಳಾದ ಸಿದ್ದು ಕಲಾಠೆ,ಮುತ್ತಪ್ಪ ಮಾಂಗ,ಪ್ರಕಾಶ ಹೊಸಮನಿ,ಸಂಗಪ್ಪ ಕೋಟಿ. ಪರಶುರಾಮ ಘಾಟಗೆ.ಮಲ್ಲಿಕಾರ್ಜುನ ತಂಬಾಕದ,ನಾಗರಾಜ ಬಿಸಲದಿನ್ನಿ,ಶಂಕರ ಆಸಂಗಿ,ಆಯ್.ಎಮ್. ಪೆಂಡಾರಿ, ರಾಜಶೇಖರ ಮನಗೂಳಿರವರನ್ನೊಳ್ಳಗೊಂಡ ತಂಡ ರಚನೆ ಮಾಡಿ,ಕಾರ್ಯಾಚರಣೆ ಕೈಗೊಂಡು
ಜಮಖಂಡಿ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದರು.