Home ಕ್ರೈಂ ಸುದ್ದಿಗಳು ಸಿಐಆರ್ ಪೋರ್ಟಲ್ ಮೂಲಕ 27 ಮೊಬೈಲ್ ಪತ್ತೆವಾರಸುದಾರರಿಗೆ ಹಸ್ತಾಂತರಿಸಿದ ಜಮಖಂಡಿ ಶಹರ ಪೊಲೀಸರು

ಸಿಐಆರ್ ಪೋರ್ಟಲ್ ಮೂಲಕ 27 ಮೊಬೈಲ್ ಪತ್ತೆವಾರಸುದಾರರಿಗೆ ಹಸ್ತಾಂತರಿಸಿದ ಜಮಖಂಡಿ ಶಹರ ಪೊಲೀಸರು

ಜಮಖಂಡಿ, ಮೇ 10:ನಗರದ ಶಹರ ಪೆÇಲೀಸ್ ಠಾಣೆಯ ಪೆÇಲೀಸರು ಸಾರ್ವಜನಿಕರ ಕಳೆದುಹೋಗಿದ್ದ ಮೊಬೈಲ್ ಫೆÇೀನ್‍ಗಳನ್ನು ಪತ್ತೆಹಚ್ಚುವಲ್ಲಿ ಮಹತ್ವದ ಸಾಧನೆ ಮಾಡಿದ್ದು, ಸಿಐಆರ್ (Central Equipment Identity Register) ಪೆÇೀರ್ಟಲ್ ಸಹಾಯದಿಂದ ಒಟ್ಟು 27 ಮೊಬೈಲ್ ಫೆÇೀನ್‍ಗಳನ್ನು ಪತ್ತೆಹಚ್ಚಿ ಅವುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸಿದರು.
ನಗರದ ಶಹರ ಪೆÇಲೀಸ್ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿಐ ಮಲ್ಲಪ್ಪ ಮಡ್ಡಿ ಹಾಗೂ ಪಿಎಸ್‍ಐ ಅನೀಲ ಕುಂಬಾರ ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಮೊಬೈಲ್‍ಗಳನ್ನು ವಿತರಿಸಲಾಯಿತು.
ವಿವಿಧ ಸ್ಥಳಗಳಲ್ಲಿ ಕಳೆದುಹೋಗಿದ್ದ ಹಾಗೂ ಕಳ್ಳತನವಾಗಿದ್ದ ಮೊಬೈಲ್‍ಗಳ ಕುರಿತು ಸಾರ್ವಜನಿಕರು ನೀಡಿದ್ದ ದೂರುಗಳ ಆಧಾರದ ಮೇಲೆ ಪೆÇಲೀಸರು ಸಿಐಆರ್ ಪೆÇೀರ್ಟಲ್ ಮೂಲಕ ತಾಂತ್ರಿಕ ಮಾಹಿತಿ ಸಂಗ್ರಹಿಸಿ ಮೊಬೈಲ್‍ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
ಮೊಬೈಲ್‍ಗಳನ್ನು ಮರಳಿ ಪಡೆದ ಸಾರ್ವಜನಿಕರು ಪೆÇಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಸಂತಸ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳತನ ಹಾಗೂ ಕಳೆದುಹೋಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ತಕ್ಷಣವೇ ಪೆÇಲೀಸ್ ಠಾಣೆಗೆ ದೂರು ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ ಮಲ್ಲಪ್ಪ ಮಡ್ಡಿ, ಸಿಐಆರ್ ಪೆÇೀರ್ಟಲ್ ಮೂಲಕ ಕಳೆದುಹೋಗಿರುವ ಮೊಬೈಲ್‍ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡುವ ವ್ಯವಸ್ಥೆ ಇರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪೆÇಲೀಸ್ ಇಲಾಖೆ ಸಾರ್ವಜನಿಕರ ಸುರಕ್ಷತೆ ಹಾಗೂ ಸೇವೆಗೆ ಸದಾ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಎಸ್‍ಐ ಬಿ.ಜಿ. ಮದರಖಂಡಿ, ಎಸ್.ಎಸ್. ನಾಯಕ್ ಹಾಗೂ ಪೆÇಲೀಸ್ ಸಿಬ್ಬಂದಿಗಳಾದ ಪ್ರಕಾಶ ಎಂ. ಹೊಸಮನಿ, ಪಿ.ಬಿ. ಕಾಕಂಡಕಿ, ಶಂಕರಾನಂದ ಆಸಂಗಿ, ರಾಜು ಪೂಜಾರಿ, ಎನ್.ಬಿ. ಬಿಸಲದಿನ್ನಿ, ಆರ್.ಆರ್. ಬಸಣ್ಣವರ, ಮುತ್ತು ಮಾಂಗ, ಎನ್.ಪಿ. ನಾಟಿಕಾರ್, ಐ.ಜಿ. ದಾಶಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.