Home ಜಿಲ್ಲೆ ಬೆಂಗಳೂರು ಬಂಗಾರಪೇಟೆಗೆ ಬಂತು ಜಗನ್ನಾಥ ರಥಯಾತ್ರೆ

ಬಂಗಾರಪೇಟೆಗೆ ಬಂತು ಜಗನ್ನಾಥ ರಥಯಾತ್ರೆ

ಬಂಗಾರಪೇಟೆ:,ಜು,೨೧- ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದಿಂದ ಜಗನ್ನಾಥ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.


ನಗರದ ಕೃಷ್ಣ ಆಶ್ರಯ[ಇಸ್ಕಾನ್]ವತಿಯಿಂದ ಹಮ್ಮಿಕೊಂಡಿದ್ದ ಜಗನ್ನಾಥರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು,ರಥಯಾತ್ರೆಯಲ್ಲಿ ಜಗನ್ನಾಥ ಎಂದರೆ ಜಗತ್ತಿನ ಒಡೆಯ ಎಂದು ಅರ್ಥ ಆನೇಕ ವೈದಿಕ ಗ್ರಂಥಗಳು ಜಗನ್ನಾಥನು ಶ್ರೀ ಕೃಷ್ಣನೇ ಎಂದು ಸಾರಿ ಹೇಳುತ್ತದೆ.ಅಣ್ಣ ಬಲದೇವನೊಂದಿಗೆ ತಂಗಿ ಸುಭದ್ರೆಯೊಂದಿಗೆ ಪಟ್ಟಣಕ್ಕೆ ಆಗಮಿಸಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೋಹ ಜಗನ್ನಾಥರನ್ನು ಬರೆಮಾಡಿಕೊಳ್ಳುತ್ತ ಹರೇ..ಕೃಷ್ಣ ಹರೇ..ಕೃಷ್ಣ ಕೃಷ್ಣ,ಕೃಷ್ಣ ಹರೇ..ಹರೇ ರಾಮ ಹರೇ ರಾಮ ರಾಮ ರಾಮ ಹರೇ..ಹರೇ.. ಎಂದು ಹಾಡುತ್ತ ಕುಣಿಯುತ್ತ ಭಕ್ತಿಯ ರಥಪಥದ ಮೆರಗನ್ನು ಹೆಚ್ಚಿಸಿದರು.


ರಥ ಸಾಗುವ ಬೀದಿಗಳಲ್ಲಿ ಭಕ್ತರು ನೀರಿನಿಂದ ರಸ್ತೆಯನ್ನ ಸ್ವಚ್ಥಗೊಳಿಸಿ ಪುಷ್ಪಗಳಿಂದ ರಥದ ಮೇಲೆ ಹಾಕುವ ಮೂಲಕ ಭಕ್ತಿಯ ವೈಭವವನ್ನು ಮೆರೆದರು.