Home ಜಿಲ್ಲೆ ಕಲಬುರಗಿ ಜಗದ್ಗುರು ರೇಣುಕ ಭಗವತ್ಪಾದರು ಮಾನವ ಜನಾಂಗಕ್ಕೆ ಶಾಶ್ವತ ಮೌಲ್ಯಗಳನ್ನು ನೀಡಿದ್ದಾರೆ: ಮಹಾಂತ ಶ್ರೀ

ಜಗದ್ಗುರು ರೇಣುಕ ಭಗವತ್ಪಾದರು ಮಾನವ ಜನಾಂಗಕ್ಕೆ ಶಾಶ್ವತ ಮೌಲ್ಯಗಳನ್ನು ನೀಡಿದ್ದಾರೆ: ಮಹಾಂತ ಶ್ರೀ

ಆಳಂದ:ಮಾ.೨: ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ದಾರಿದೀಪವಾದಂತೆ, ಜಗದ್ಗುರು ಶ್ರೀ ರೇಣುಕಾ ಭಗವತ್ಪಾದರು ‘ಸಿದ್ಧಾಂತ ಶಿಖಾಮಣಿ’ ಎಂಬ ಗ್ರಂಥವನ್ನು ರಚಿಸಿ ಮಾನವ ಜನಾಂಗಕ್ಕೆ ಶಾಶ್ವತ ಮೌಲ್ಯಗಳನ್ನು ನೀಡಿದ್ದಾರೆ ಎಂದು ಆಳಂದ, ನಂದವಾಡಗಿ ಮತ್ತು ಜಾಲವಾದಿ ಮಠದ ಪೀಠದ ಹಿರಿಯರಾದ ಶ್ರೀ ಮಹಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಸಮಾರಂಭದಲ್ಲಿ ರೇಣುಕರ ಪ್ರತಿಮೆಗೆ ಪೂಜೆ ಮಾಲಾರ್ಪಣೆ ಕೈಗೊಂಡು ಅವರು ಆಶೀರ್ವಚನ ನೀಡಿದರು.
ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿರುವ ತತ್ವಗಳನ್ನು ಪ್ರೀತಿ, ಶ್ರದ್ಧೆ ಮತ್ತು ಭಕ್ತಿಯಿಂದ ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ಮಹಾತ್ಮರನ್ನು ಸ್ಮರಿಸುವುದೇ ಶ್ರೇಷ್ಠ ಸಾಧನೆಯಾಗಿದ್ದು, ಅವರ ಮಾರ್ಗದಲ್ಲಿ ನಡೆಯುವುದರಿಂದ ಬದುಕು ಸಾರ್ಥಕವಾಗುತ್ತದೆ. ಮಹಾಂತೇಶ್ವರನ ಕೃಪೆ ಸದಾ ಭಕ್ತರ ಮೇಲಿರಲಿ ಎಂದು ಅವರು, “ವೀರಶೈವ ಲಿಂಗಾಯತರಿಗೆ ಫಲ್ಗುಣ ಶುದ್ಧ ಏಕಾದಶಿ ಅತ್ಯಂತ ಪವಿತ್ರ ದಿನವಾಗಿದ್ದು, ಜಗದ್ಗುರು ಶ್ರೀ ರೇಣುಕಾಚಾರ್ಯರ ಅವತರಣ ದಿನವೂ ಹೌದು. ವೀರಶೈವ ಧರ್ಮ ಸಂಸ್ಥಾಪನಾಚಾರ್ಯರಾದ ಶ್ರೀ ರೇಣುಕಾ ಭಗವತ್ಪಾದರು ಭೂಮೇಶ್ವರ ಲಿಂಗದಲ್ಲಿ ಅವತರಿಸಿ, ಈ ನಾಡಿನಲ್ಲಿ ವೀರಶೈವ ಧರ್ಮವನ್ನು ಸ್ಥಾಪಿಸಿ ಜಗತ್ತಿನ ಕಲ್ಯಾಣಕ್ಕಾಗಿ ಧರ್ಮ, ನೀತಿ ಮತ್ತು ಆಧ್ಯಾತ್ಮದ ಮಾರ್ಗವನ್ನು ಮಾನವಕುಲಕ್ಕೆ ತೋರಿಸಿದ್ದಾರೆ. ಅವರ ಬೋಧನೆಗಳನ್ನು ಅನುಸರಿಸುವುದರಿಂದ ಪ್ರತಿಯೊಬ್ಬರೂ ಧರ್ಮವಂತರಾಗಿ, ನೀತಿವಂತರಾಗಿ ಹಾಗೂ ಆಧ್ಯಾತ್ಮಿಕವಾಗಿ ಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಮಹಾದೇವ ಹತ್ತಿ, ರಾಜಕುಮಾರ ಅಚಲೇರಿ, ಪತ್ರಕರ್ತ ಮಹೇಶ ಸಾಕರೆ, ಭಕ್ತಾದಿ ವಿವೇಕಾನಂದ ಹತ್ತಿ, ಗುರು ವಣದೆ, ಶಿವುಸ್ವಾಮಿ, ಮಲ್ಲಯ್ಯಾ ಸ್ವಾಮಿ ಚೌಕಿಮಠ, ಗುಂಡಪ್ಪ ಮೇಂತೆ, ಶಿವಕುಮಾರ ಎಸ್. ಪರೆಗೆ, ಮಹಾಂತೇಶ ಡೊಳ್ಳೆ, ಸತೀಶ ಪಾಟೀಲ, ಸಿದ್ರಾಮ ಬುಕ್ಕೆ, ಯಲ್ಲಾಲಿಂಗ ಬಿರಾದಾರ, ಕುಂಬಾರ ಸಮಾಜ ಅಧ್ಯಕ್ಷ ಶರಣು ಟಿ. ಕುಂಬಾರ, ಶರಣು ಬಿ. ಕುಂಬಾರ, ಶಿವಕುಮಾರ ಎಂ. ವಿಭೂತೆ ಪಾಟೀಲ ಸೇರಿದಂತೆ ಅನೇಕ ಶರಣರು ಹಾಗೂ ಶರಣಿಯರು ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು.