
ಇAಡಿ :ಹಳ್ಳಿಗಳಲ್ಲಿ ಚಹಾ ಹೋಟೆಲ್ಗಳು ಗ್ರಾಮೀಣ ಜನಜೀವನದ ಅವಿಭಾಜ್ಯ ಅಂಗ ಬೆಳಗ್ಗಿನಿಂದಲೇ ರೈತರು, ಕೂಲಿ ಕಾರ್ಮಿಕರು, ಈ ಚಿಕ್ಕ ಹೋಟೆಲ್ಗಳಿಗೆ ಭೇಟಿ ನೀಡುತ್ತ ಅಂದಿನ ದಿನಚರಿಯನ್ನು ಚಹಾ ಕುಡಿಯುವುದರಿಂದಲೇ ಆರಂಭಿಸುತ್ತಾರೆ ಎಂದು ಕಾಲೇಜಿನ ಪ್ರಚಾರ್ಯರಾದ ಜೆ.ಡಿ ಪೂಜಾರಿ ಭೊದಿಸಿದರು.
ಶುಕ್ರವಾರ ಅಂಜುಮಾನ್ ಸಂಯುಕ್ತ ಪದವಿ ಪೂರ್ವ ಕಾಲೇಜನಲ್ಲಿ ನಡೆದ ದ್ವಿತೀಯ ಪಿಯುಸಿ ಕನ್ನಡ ವಿಷಯದ ಗಧ್ಯಭಾಗದಲ್ಲಿನ “ಹಳ್ಳಿಯ ಚಹಾ ಹೋಟೆಲ್” ಎಂಬ ಅಧ್ಯಾಯವನ್ನು ವಿದ್ಯಾರ್ಥಿಗಳಿಗೆ ನೈಜವಾದ ದೃಶ್ಯವನ್ನು ಏರ್ಪಡಿಸಿ ಮಾತನಾಡಿದ ಅವರು, ಹಳ್ಳಿಯ ಚಹಾ ಅಂಗಡಿಗಳ ವ್ಯಾಪಾರವು ದೊಡ್ಡ ಬಂಡವಾಳವಿಲ್ಲದೇ, ಸರಳ ರೀತಿಯಲ್ಲಿ ನಡೆಯುವುದು ವಿಶೇಷ. ಸ್ಥಳೀಯವಾಗಿ ದೊರೆಯುವ ಹಾಲು, ಸಕ್ಕರೆ ಮತ್ತು ಮಸಾಲೆಗಳನ್ನೇ ಬಳಸಿಕೊಂಡು ತಯಾರಿಸುವ ಚಹಾಗೆ ಹಳ್ಳಿಯ ಜನರಲ್ಲಿ ವಿಶೇಷ ಬೇಡಿಕೆ ಇದೆ ಎಂದು ಹೇಳಿದರು.
ಕೃಷಿ ಗದ್ದೆಗಳಿಗೆ ತೆರಳುವ ಮೊದಲು ರೈತರು ಕಡ್ಡಾಯವಾಗಿ ಚಹಾ ಅಂಗಡಿಗೆ ಭೇಟಿಕೊಡುವುದು ಹಳ್ಳಿಗಳಲ್ಲಿನ ಸಾಮಾನ್ಯ. ಹೋಟೆಲ್ಗಳಿಗೆ ನಿಯಮಿತ ಗ್ರಾಹಕರಿರುವುದರಿಂದ ದಿನನಿತ್ಯದ ವ್ಯಾಪಾರ ಸ್ಥಿರವಾಗಿದೆ. ಜೊತೆಗೆ ಸ್ಥಳೀಯ ಸುದ್ದಿಗಳು, ರಾಜಕೀಯ ಚರ್ಚೆಗಳು, ಹಾಗೂ ಸಮಾಜದ ವಿಚಾರಗಳ ಬಗ್ಗೆ ಮಾತುಕತೆ ನಡೆಯುವ ಕೇಂದ್ರವಾಗಿಯೂ ಸಹಿತ ಎನ್ನಬಹುದು ಎಂದರು.
ಹಳ್ಳಿಗಳು ಹಾಲು, ತರಕಾರಿ, ಧಾನ್ಯ, ಹಣ್ಣು, ಹೂಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ನಗರಗಳಿಗೆ ಒದಗಿಸಲಾಗುತ್ತದೆ ಹೀಗಾಗಿ ಹಳ್ಳಿ ಮತ್ತು ನಗರದ ನಡುವೆ ಪರಸ್ಪರ ಅವಲಂಬನೆ ಸಂಬAಧ ಬೆಳೆಯುತ್ತದೆ. ಒಟ್ಟಿನಲ್ಲಿ ದೇಶದ ಬೆನ್ನೆಲುಬು ಎಂಬ ಹೆಗ್ಗಳಿಕೆಗೆ ಹಳ್ಳಿಗಳು ನಿಜಕ್ಕೂ ಮಹತ್ವವಾಗಿವೆ ಎಂದು ವಿದ್ಯಾರ್ಥಿಗಳಿಗೆ ಹಳ್ಳಿಯ ನಡೆ ನುಡಿ ಹಾಗೂ ಸಂಸ್ಕೃತಿಗಳ ಬಗ್ಗೆ ವಿವರವಾಗಿ ಭೋದನೆ ಮಾಡಿದರು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಜೆ ಡೀ ಪೂಜಾರಿ, ಪದವಿ ಕಾಲೇಜ್ ಪ್ರಾಂಶುಪಾಲ ಬೀ ಎಸ್ ಗುರಕಾರ್, ಉಪಪ್ರಚಾರ್ಯ ಪ್ರಕಾಶ ಕರಗ್ನೂವರ, ಶಿಕ್ಷಕರಾದ ಡಿ.ಕೆ ಬನಸೋಡೆ, ಎಸ್ ಆರ್ ಮುಲ್ಲಾ, ಎಸ್ ಎಂ ಯಾಳವಾರ, ಆರ್ ಹಡಗಲ್,ಅಬ್ದುಲ್ ಪಟೇಲ್, ಶಿಕ್ಷಕ ಸತೀಶ್ ಮೇಲಿನಮನಿ, ಜಾಗಿರ್ದರ್ , ಶ್ರೀಕೃಷ್ಣ ಸಾಗರ, ಮಸ್ಪಿಕ್ ಮೇಸ್ತ್ರಿ,ಪ್ರದೀಪ್ ನಿಂಬಾಳ, ಸಾನಹುಲ್ಲಾ ಮಿರಜಾಕರ,ಜಾಹಿದ ಮುಲ್ಲಾ ಇತರರಿದ್ದರು.

























