
ಬೀದರ್: ನ.27:ಈ ತಿಂಗಳ 29 ಹಾಗೂ 30ರಂದು ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತರು, ಸಂಗೀತ ಕಲಾ ಮಂಡಲ ಬೀದರ್ ಹಾಗೂ ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿ ಕಲ್ಕತ್ತಾ ಇವರ ಸಹಯೋಗದಲ್ಲಿ ಬೀದರ್ ನಲ್ಲಿ ಇದು ಮೂರನೇ ಐಟಿಸಿ ಮಿನಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಮಂಡಲದ ವಕ್ತಾರರಾದ ಪೆÇ್ರ.ಎಸ್.ವಿ ಕಲ್ಮಠ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 1962ರಲ್ಲಿ ಬೀದರನ ಖ್ಯಾತ ಉದ್ಯಮಿ ಹಾಗೂ ಸಂಗೀತ ಪ್ರೇಮಿ ದಿ. ಜಗಪಾಲಸಿಂಗ ಪವಾರ ಅವರು ಸಂಗೀತ ಕಲಾ ಮಂಡಲವನ್ನು ಸ್ಥಾಪಿಸಿದರು. ದಿ. ಮಾಣಿಕರಾವ ಫುಲೇಕರ ಶಾಸಕರು, ದಿ. ನಾಗಣ್ಣ ಜಾಬಶೆಟ್ಟಿ, ದಿ. ಮಡಿವಾಳಪ್ಪ ಮುದ್ದಾ, ದಿ.ಶಂಕರರಾವ ಜಾಗೀರದಾರ ಸೇರಿದಂತೆ ಬೀದರನ ಖ್ಯಾತ ಗಣ್ಯರು ಜಗಪಾಲಸಿಂಗ ಪವಾರ ಅವರಿಗೆ ಸಕಲ ಸಹಕಾರ ನೀಡಿ ಸಂಗೀತ ಕಲಾ ಮಂಡಲವನ್ನು ಬೆಳೆಸಿದರು. ದಿ. ಜಗಪಾಲಸಿಂಗ ಪವಾರ ಸಂಸ್ಥಾಪಕ ಅಧ್ಯಕ್ಷರಾಗಿ ಸಂಗೀತ ಕಲಾ ಮಂಡಲದ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಂಗೀತ, ನೃತ್ಯ ಕಲಾವಿದರನ್ನೋಳಗೊಂಡ ಸಂಗೀತ ಸಮ್ಮೇಳನವನ್ನು ಬೀದರ್‍ನಲ್ಲಿ ಆಯೋಜಿಸಿದ್ದರು. ರಾಷ್ಟ್ರ ಮಟ್ಟದ ಸಂಗೀತಗಾರರಾದ ಡಾ. ಪಂ. ಪುಟ್ಟರಾಜ ಕವಿಗವಾಯಿ ಗದಗ, ಭಾರತ ರತ್ನ ಭೀಮಸೇನ ಜೋಶಿ, ಪಂ. ಬಸವರಾಜ ಗುರು, ಪಂ. ಶಿವಕುಮಾರ ಶರ್ಮಾ(ಸಂತೂರ ವಾದಕರು) ಉಸ್ತಾದ ಝಾಕೀರ ಹುಸೇನ (ತಬಲಾ ವಾದಕರು), ವಿದುಷಿ ಪರದೀನ ಸುಲ್ತಾನಾ, ವಿದುಷಿ ಮಾಲಿನಿ ರಾಜುರಕರ್, ಪಂ. ಅಜಯ ಚಕ್ರವರ್ತಿ ಮುಂತಾದವರು ಸಮ್ಮೇಳನದಲ್ಲಿ ಭಾಗವಹಿಸಿ ಬೀದರಿನ ಹೆಸರು ಪ್ರಸಿದ್ದಿಪಡಿಸಿದ್ದರು.
ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಲಾವಿದರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು, ಹೈದ್ರಾಬಾದ ಕರ್ನಾಟಕ ಸಂಗೀತ ಸಮ್ಮೇಳನಗಳು 1983, 1984 ರಲ್ಲಿ ಪ್ರಥಮ Iಖಿಅ ಸಂಗೀತ ಸಮ್ಮೇಳನ, 1990ರಲ್ಲಿ ದ್ವಿತೀಯ Iಖಿಅ ಸಂಗೀತ ಸಮ್ಮೇಳನ, 1995ರಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿ ಅವರ 155ನೇ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮ, ಹಾರ್ಮೋನಿಯಂ ವಾದಕರೆಂದು ಜಗಪಾಲಸಿಂಗ ಪವಾರ ಅವರ ನಿಧನದ ನಂತರ ಅವರ ಜೈಷ್ಠ ಸುಪುತ್ರ ರಾಜೇಂದ್ರಸಿಂಗ ಪವಾರ ಅವರು ಕಲಾಮಂಡಲದ ಅಧ್ಯಕ್ಷರಾದರು. ಪ್ರಖ್ಯಾತ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. 2017ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುತ್ತಾರೆ. ಸುಮಾರು 25 ವರ್ಷಗಳಿಂದ ನಿರಂತರವಗಿ ಇವರು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ ಎಂದವರು ತಿಳಿಸಿದರು.
ದಿ. ಜಗಪಾಲಸಿಂಗ ಪವಾರ ಅವರ ಪುಣ್ಯತಿಥಿ ಅಂಗವಾಗಿ ಜೆಎಸ್‍ಪಿ ಪ್ರಶಸ್ತಿ ಪ್ರದಾನ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮ, ಬಸಂತ ಪಂಚಮಿ, ಸರಸ್ವತಿ ದೇವಿ ಉತ್ಸವಗಳ ಆಚರಣೆಯ ಅಂಗವಾಗಿ ಸಂಗೀತ ಕಾರ್ಯಕ್ರಮಗಳು, ರಾಷ್ಟ್ರ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶಕರ್ ಅವರ ಜನ್ಮದಿನ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದಾರೆ. ಇತರ ಸ್ಥಳೀಯ ಕಲಾವಿದರ ಸಂಗೀತ ಕಾರ್ಯಕ್ರಮಗಳು, ಸಂಗೀತ ಕಲಾ ಮಂಡಲದ ವತಿಯಿಂದ ಸಂಗೀತ ಕಲಾ ಮಂಡಲ ಭವನದ ಕಟ್ಟಡ ನಿರ್ಮಾಣ ಮಾಡಿರುತ್ತಾರೆ. ಸಂಗೀತ ಪಾಠಶಾಲೆ ನಡೆಸಿಕೊಂಡು ಬಂದಿರುತ್ತಾರೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ: 2003, 2003ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಸಂಗೀತ ಕಲಾಮಂಡಲ ಬೀದರಕ್ಕೆ ‘ಕಲಾಶ್ರೀ’ ಪ್ರಶಸ್ತಿ ನಿಡಲಾಯಿತು ಎಂದು ತಿಳಿಸಿದರು.
ದಿನಾಂಕ 29 ಮತ್ತು 30ನೇ ನವೆಂಬರ್ 2025ರಂದು ಬೀದರನ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ Iಖಿಅ ಸಂಗೀತ ಕಲಾವಿದರ ಎರಡು ದಿನಗಳ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದಿನಾಂಕ 29.11.2025 ರಂದು ಸಾಯಂಕಾಲ 5 ಗಂಟೆಗೆ ಜರುಗುವ ಸಂಗೀತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು . ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು ವಹಿಸಲಿರುವರು. ಪೂಜ್ಯ ಆನಂದರಾಜ ಮಹಾರಾಜರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶಿವಶರಣಪ್ಪಾ ವಾಲಿ, ಸದಾನಂದ ಜೋಶಿ, ಪಂ. ರಾಮುಲು ಗಾದಗೆಯವರು ಭಾಗವಹಿಸಲಿರುವರು. ಡಿ.. ಎಸ್ ಜೋಶಿ ಹಾಗೂ ಶ್ರೀಮತಿ ವಿದ್ಯಾ ಲದ್ದೆ ಅವರು ಸಂಚಾಲನೆ ಮಾಡಲಿರುವರು.
ನ.29ರಂದು ಜರುಗುವ ಸಂಗೀತ ಕಾರ್ಯಕ್ರಮದಲ್ಲಿ ಕು. ಶ್ರೇಯಾ ಬಿಟರ್ಜಿ ಅವರ ಗಾಯನಕ್ಕೆ ಅಶೋಕ ಮುಖರ್ಜಿಯವರು ತಬಲಾ ಸಾಥ ಹಾಗೂ ಕೃಷ್ಣ ಮುಖೇಡಿಕರ್ ಹಾರ್ಮೋನಿಯಂ ಸಾಥ ನೀಡುವರು. ನಂತರ ಜರುಗುವ ಅಬೀರ ಹುಸೇನ್ ಅವರ ಸರೋದ ವಾದ್ಯ ಸಂಗೀತಕ್ಕೆ ವೆಂಕಟೇಶ ಡಿ.ಸಿ. ಅವರು ತಬಲಾ ಸಾಥ ನೀಡುವರು.
ನ.30 ರಂದು 5.00 ಗಂಟೆಗೆ ಆಯನಸೇನ್ ಗುಪ್ತಾ ಅವರ ಸಿತಾರವಾದನಕ್ಕೆ ಯಶವಂತ ವೈಷ್ಣವ ಅವರು ತಬಲಾ ಸಾಥ ನೀಡಲಿದ್ದಾರೆ. ನಂತರ ಪದ್ಮಶ್ರೀ ಪಂ. ಉಲ್ದಾಸ ಕುಶಾಲಕರ ಅವರ ಗಾಯನಕ್ಕೆ ಪದ್ಮಶ್ರೀ ತಾಲಯೋಗಿ ಪಂ. ಸುರೇಶ ತಲವಲಕರ್ ತಬಲಾ ಸಾಥ ಹಾಗೂ ಕೃಷ್ಣ ಮುಬೇಡಕರ ಹಾರ್ಮೋನಿಯಂ ಸಾಥ ನೀಡುವರು.
ಈ ಎರಡು ದಿವಸಗಳ ಕಾರ್ಯಕ್ರಮದಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪೆÇ್ರ.ಕಲ್ಮಠ ಕೋರಿದರು.
ಸಂಗೀತ ಕಲಾಮಂಡಲದ ಅಧ್ಯಕ್ಷ ಪಂಡಿತ್ ರಾಜೇಂದ್ರ ಸಿಂಗ್ ಪವಾರ್, ಶಿವರಾಜ ಕಲಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು






















