
ಬೆಂಗಳೂರು: ಜ. ೨೫– ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆಯ ಅಡಿ ಪೊಲೀಸರು ನೋಟಿಸ್ ನೀಡಿದ್ದು ತಪ್ಪು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ದ್ವೇಷ ಭಾಷಣ ಮಸೂದೆಯ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು ಹೇಳಿದರು.
ಈ ಮಸೂದೆಗೆ ಇನ್ನೂ ರಾಜ್ಯಪಾಲರ ಸಹಿ ಬಿದ್ದಿಲ್ಲ. ಭಾರತೀಯ ನ್ಯಾಯ ಸಂಹಿತೆ ಅಡಿ ವಿವಿಧ ಸೆಕ್ಷನ್‌ಗಳ ಅಡಿ ನೋಟಿಸ್ ನೀಡಬಹುದು. ಇನ್ನೂ ಇದು ಕಾನೂನಾಗದ ಕಾರಣ ಈ ಮಸೂದೆಯ ಅಡಿ ನೋಟಿಸ್ ನೀಡಿದ್ದು ತಪ್ಪು. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು ಎಂದು ಪ್ರತಿಕ್ರಿಯೆಸಿದರು. ಶಿಡ್ಲಘಟ್ಟದ ಪೌರಾಯುಕ್ತ ಗೆ ಧಮಿಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಇನ್ನೂ ಬಂಧನ ವಾಗದ ಬಗ್ಗೆ ಪ್ರತಿಕ್ರಿಸಿದ ಅವರು ಆತ ಎಷ್ಟು ದಿನ ತಪ್ಪಿಸಿಕೊಂಡು ಓಡಾಡುತ್ತಾನೆ ಆತನನ್ನು ಬಂಧಿಸುತ್ತೇವೆ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು ಬೆಳಗಾವಿ ಜಿಲ್ಲೆಯಲ್ಲಿ ೪೦೦ ಕೋಟಿ ರೂಪಾಯಿ ದರೋಡೆ ನಡೆದಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಮಹಾರಾಷ್ಟ್ರ ಪೊಲೀಸರು ನಮಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇದೆ ಈ ಬಗ್ಗೆ ವರದಿ ನೀಡುವಂತೆ ಪೊಲೀಸರಿಗೆ ತಿಳಿಸಿದ್ದೇನೆ ಪೊಲೀಸರ ವರದಿ ಬಂದ ನಂತರ ನಮ್ಮ ಪೊಲೀಸರು ಏನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು



























