ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗುತ್ತಿರುವದು ಆತಂಕಕಾರಿ:ಗುಂಡಕನಾಳಶ್ರೀ

ತಾಳಿಕೋಟೆ:ಡಿ.23: ನಾಟಕ ಹಾಗೂ ದೊಡ್ಡಾಟ ಬೈಲಾಟ ಇವೆಲ್ಲವೂ ಕೂಡ ಭಾರತ ದೇಶದ ಸಂಸ್ಕೃತಿಯ ಕನ್ನಡಿಯಾಗಿದೆ ಅದು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸುಗ್ಗಿ ಕಾಲ ಮುಗಿದ ನಂತರ ಎಲ್ಲಾ ರೈತರು ಒಂದುಗೂಡಿ ನಾಟಕ ಬಯಲಾಟವನ್ನು ಮಾಡುವಂತಹ ಪದ್ಧತಿ ಪ್ರಾಚೀನ ಕಾಲದಿಂದಲೂ ಕೂಡ ಇರುವಂತದ್ದಾಗಿದೆ ಎಂದು ಗುಂಡಕನಾಳ ಬೃಹನ್ ಮಠದ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನುಡಿದರು.
ಗುಂಡಕನಾಳ ಗ್ರಾಮದ ಶ್ರೀ ಗ್ರಾಮದೇವತೆ(ದ್ಯಾಮವ್ವದೇವಿ) ಜಾತ್ರಾ ಮಹೋತ್ಸವ ಅಂಗವಾಗಿ ರಂಗಭೂಮಿ ಕಲಾವಿದರಾದ ಹಾಸ್ಯ ಕಲಾವಿದ ಸಿದ್ದು ನಾಲತವಾಡ ಇವರ ನೇತೃತ್ವದಲ್ಲಿ ಶೆಟ್ಟಿಯ ಚೆಲ್ಲಾಟ ಸಂಗವ್ವನ ಹಾರಾಟ ಎಂಬ ಸಾಮಾಜಿಕ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಈ ಹಿಂದೆ ನಾಟಕ ಮತ್ತು ಬೈಲಾಟಗಳಿಂದ ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯನ್ನು ಹೋಗಲಾಡಿಸಿ ಎಲ್ಲರೂ ಒಂದೇ ಕುಟುಂಬದವರು ಅನ್ನುವ ಭಾವನೆ ಬರುವಂತವುಗಳು ನಡೆಯುತ್ತಿದ್ದವು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ನಾಟಕಗಳು ಮಾಯವಾಗಿ ಸಿನಿಮಾದಂತಹ ಪಾಶ್ಚಾತ್ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ಆತಂಕ ಕಾರ್ಯ ಆಗಿದ್ದರೂ ಕೂಡ ಗುಂಡಕನಾಳ ಚಿಕ್ಕ ಗ್ರಾಮದಲ್ಲಿ ಜಾತ್ರೋತ್ಸವ ನಿಮಿತ್ಯ ನಾಟಕ ಬಯಲಾಟ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದರೊಂದಿಗೆ ತನ್ನದೇ ಆದಂತ ಕೊಡುಗೆಯನ್ನು ಈ ದೇಶಕ್ಕೆ ನೀಡುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನೋರ್ವ ನಾಟಕವನ್ನು ಉದ್ಘಾಟಿಸಿದ ಡಾ.ಪ್ರಭುಗೌಡ ಲಿಂಗದÀಳ್ಳಿ ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ನಾಟಕಗಳ ಬಹಳ ಮಹತ್ವಪೂರ್ಣ ಪಡೆದುಕೊಂಡಿದ್ದವು ಚಲನಚಿತ್ರ ಹಾಗೂ ಮೊಬೈಲ್ ಜನರ ಜೀವನದಲ್ಲಿ ಹೊಕ್ಕಿರುವುದರಿಂದ ನಾಟಕಗಳು ಗ್ರಾಮೀಣ ಕ್ರೀಡೆಗಳು ಇಳಿಮುಖವಾಗಿವೆ ಜೊತೆಗೆ ಗ್ರಾಮೀಣ ಭಾಗದ ಜನರು ಆರೋಗ್ಯದ ಕಡೆ ಗಮನ ಕೊಟ್ಟು ಸರಾಯಿ ಮುಕ್ತ ಹಾಗೂ ಗುಟ್ಕಾ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಸಲಹೆ ನೀಡಿದ ಅವರು ಬಬ್ರುವಾಹನ ಸಿನಿಮಾದ ಡೈಲಾಗ್ ಮೂಲಕ ಜನರನ್ನು ನಗೆಗಡಲೆ ತೇಲಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ಪ್ರಭುಗೌಡ ಬಿರಾದಾರ್ ಅಸ್ಕಿ ಅವರು ಮಾತನಾಡಿ ನಾಟಕಗಳು ಇವತ್ತು ಯುವಕರಿಗೆ ಹಾಗೂ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವಂತ ನಾಟಕಗಳಾಗಿರಬೇಕು ಯುವಕರನ್ನು ಸನ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವುದು ಆಗುತ್ತಿರುವುದರಿಂದ ಗ್ರಾಮಗಳಲ್ಲಿ ಸಂಸ್ಕಾರವಂತ ಬಧುಕು ಕಾಣಲು ಸಾದ್ಯವಾಗಿದೆ ಎಂದರು.
ಗ್ರಾಮ ದೇವತೆ(ದ್ಯಾಮವ್ವದೇವಿ) ಜಾತ್ರೋತ್ಸವ ನಿಮಿತ್ಯ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್ ಅವರು ಬೆಟ್ಟಿ ನೀಡಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಪಿ ಕೆ.ಪಿ.ಎಸ್ ಅಧ್ಯಕ್ಷರಾದ ಮಲ್ಲನಗೌಡ ಬಿರಾದಾರ್ ಕೊಡಗಾನೂರ, ಗುಂಡುಕನಾಳ ಗ್ರಾಮದ ಹಿರಿಯರಾದ ಸಿದ್ದನಗೌಡ ಬಿರಾದ, ಶಿವಪುತ್ರಪ್ಪ ಸಾವರದ, ಶಶಿಧರ ಸ್ವಾಮಿ ಹಿರೇಮಠ, ವೆಂಕನಗೌಡ ಬಿರಾದಾರ್, ಸುಬ್ಬನಗೌಡ ಬಿರಾದಾರ, ಬಾಪುಗೌಡ ಸಾವರದ, ಬಾಪುಗೌಡ ಬಿರಾದಾರ, ಶರಣಗೌಡ ಶಂ ಪಾಟೀಲ್, ಶಾಂತಗೌಡ ಪಾಟೀಲ್, ಮಲ್ಲಣ್ಣಗೌಡ ಲಕ್ಕುಂಡಿ, ನಾನಾಗೌಡ ಮೇಟಿ, ಮಧು ಗೌಡ ವಂದಗನೂರ, ವಿಜಯಕುಮಾರ್ ಗಬಸಾವಳಗಿ, ಹನುಮಂತರಾಯ ಗಸ್ತಿಗಾರ, ಮಲ್ಲನಗೌಡ ಹೊಸಮನಿ, ಬಸವರಾಜ ಗುಜ್ಜಲ್, ಹನುಮಂತರಾಯ ಸಂ ದೊಡ್ಡಮನಿ, ಸುನಿಲ್ ಬ ಬಡಿಗೇರ, ಯುವಕ ಮಂಡಳಿಯ ಬಸವಂತರಾಯ ಲಕ್ಕುಂಡಿ, ಗೆಳೆಯರ ಬಳಗ ಮೊದಲಾದವರು ಉಪಸ್ಥಿತರಿದ್ದರು.
ಗುರುಪ್ರಕಾಶ್ ಹಿರೇಮಠ ನಿರೂಪಿಸಿದರು.