ಕೊಲ್ಹಾರ: ಅ.೫:ಉತ್ತಮ ಶಿಕ್ಷಕ ಪಾಠದ ಜೊತೆಗೆ ರಾಷ್ಟ್ರ ಪ್ರೇಮವನ್ನು ಮಕ್ಕಳಲ್ಲಿ ಸಮಾಜದಲ್ಲಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ತಾಲ್ಲೂಕಿನ ಚಿಕ್ಕ ಗರಸಂಗಿ ಗ್ರಾಮದಲ್ಲಿ ಶನಿವಾರ ನಿವೃತ್ತ ಶಿಕ್ಷಕ ಆರ್ ಬಿ ಕಂಬಾರ ರವರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ಎಂದರೆ ಕೇವಲ ಅಕ್ಷರ ಜ್ಞಾನ ನೀಡಿದರೆ ಸಾಲದು ಉತ್ತಮ ರಾಷ್ಟ್ರ ಕಟ್ಟಲು ಮಕ್ಕಳಲ್ಲಿ ಹಾಗೂ ಸಮಾಜದಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಉಪನ್ಯಾಸದಲ್ಲಿ ಅಶೋಕ ಹಂಚಲಿ ಮಾತನಾಡಿ ಶಿಕ್ಷಕ ಎಂದರೆ ಕೇವಲ ಗುರು ಮಾತ್ರವಲ್ಲದೆ ಗುರಿ ತೋರಿಸುವ ಮತ್ತು ಗುರಿ ಮುಟ್ಟುವತನಕ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಿಗೆ ಗುರುಭಕ್ತಿ ಬೆಳೆಸುವವರೆ ಉತ್ತಮ ಗುರುಗಳು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಸಂಗಮೇಶ ಜಂಗಮಶೆಟ್ಟಿ ಹಾಗೂ ಸಾನಿಧ್ಯ ವಹಿಸಿ ಶ್ರೀ ಕಲ್ಲಿನಾಥ ದೇವರು ಆರ್ಶಿವಚನ ನೀಡಿದರು ಅತಿಥಿಗಳಾಗಿ ಟಿ ಟಿ ಹಗೇದಾಳ, ಎಚ್ ಬಿ ಬಾರಿಕಾಯಿ, ಸುನೀಲ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಲ್ಲಯ್ಯ ಹಿರೇಮಠ, ಕಲ್ಲು ಸೊನ್ನದ, ವ್ಹಿ ಎಚ್ ಪುರೋಹಿತ,ಅಖಲಗೌಡ ಪಾಟೀಲ, ಪುಂಡಲೀಕ ಕಂಬಾರ, ರಾಜಶೇಖರ ಶೀಲವಂತ, ರಮೇಶ ಮಾದರ,ಮಂಜುನಾಥ ಗದಗ, ಎಚ್ ಎಸ್ ಗೊಳಸಂಗಿ, ಅಶೋಕ ಗಿಡ್ಡಪ್ಪಗೋಳ, ಎಲ್ ಆರ್ ಕೆಲವಡಿ, ಅಶೋಕ ಆಸಂಗಿ, ಟಿ ಪಿ ದಳವಾಯಿ,ಕೃಷ್ಣಾ ರಜಪೂತ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆ ಗಂಗಾಧರ ಗುಡ್ಯಾಳ, ಸ್ವಾಗತ ಶ್ರೀಕಾಂತ ಪಾರಗೊಂಡ, ವಂದನಾರ್ಪಣೆ ಬಸವರಾಜ ಮಮದಾಪೂರ ನಡೆಸಿಕೊಟ್ಟರು.























