Home ಜಿಲ್ಲೆ ಕಲಬುರಗಿ ರೈತರ ಹಿತ ಕಾಪಾಡುವುದು ನಮ್ಮೇಲ್ಲರ ಕರ್ತವ್ಯ : ಅಭಿಷೇಕ

ರೈತರ ಹಿತ ಕಾಪಾಡುವುದು ನಮ್ಮೇಲ್ಲರ ಕರ್ತವ್ಯ : ಅಭಿಷೇಕ

ಜೇವರ್ಗಿ : ರೈತರ ಹಿತ ಕಾಪಾಡುವುದು ನಮ್ಮೇಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ದೇಶದ ಬೆನ್ನಲುಬಾಗಿರುವ ರೈತರು ನಮಗೆ ಅನ್ನ ನೀಡುವ ಮೂಲಕ ಇಡೀ ಸಮಾಜವನ್ನು ಸಲಹುತ್ತಿದ್ದಾರೆ. ಅಂತಹವರ ಹಿತ ಕಾಪಾಡುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಬಿಪಿಸಿಎಲ್ ರಿಜಿನಲ್ ಸೇಲ್ಸ್ ಆಫಿಸರ್ ಅಭಿಷೇಕ ಕುಮಾರ ಹೇಳಿದರು.
ಅವರು ಬುಧವಾರ ಪಟ್ಟಣದ ಶಹಾಪುರ ರಸ್ತೆಯಲ್ಲಿರುವ ಬಸವ ಪೆಟ್ರೋಲಿಂಮ್ಸ್‍ನಲ್ಲಿ ಬಿಪಿಸಿಎಲ್ ಕಂಪೆನಿ ವತಿಯಿಂದ ಆಯೋಜಿಸಿದ್ದ ರೈತರಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ರೈತರು ತಮ್ಮ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕದ ಜೊತೆಗೆ ಮ್ಯಾಕ್ಸ್ ಯಾರ್ಡಜಲ್ ಕೂಡಾ ಸೇರಿಸಿ ಸಿಂಪಡಿಸಿದಾಗ ತಮ್ಮ ಬೆಳೆಗಳು ಸಂಪೂರ್ಣ ಗುಣಮಟ್ಟದಿಂದ ಬೆಳೆಯುತ್ತದೆ. ಇದರ ಜೊತೆಗೆ ತಮ್ಮ ಟ್ರಾಕ್ಟರ್‍ಗಳಿಗೆ ಭಾರತೀಯ ಪೆಟ್ರೋಲಿಂಮ್ಸ್ ನಿಂದ ಬರುವ ಮಾಕ್ಸ್ ಆಯಿಲನ್ನು ಬಳಸಿ ತಮ್ಮ ಟ್ರಾಕ್ಟರ್ ಸುರಕ್ಷತೇಯನ್ನಾಗಿ ಇಡಬಹುದು. ಮ್ಯಾಕ್ಸ್ ಯಾರ್ಡಜಲ್ ರೈತರು ಬೆಳೆಯುವ ಬೆಳೆಗಳಾದ ಬಾಳೆ, ಮಾವು, ತೊಗರಿ, ಹತ್ತಿ, ಕಬ್ಬು ಸೇರಿದಂತೆ ತರಕಾರಿ, ಹಣ್ಣುಗಳು ಯಾವುದಾರು ಬೆಳೆ ಯಾಗಿರ ಬಹುದು ಎಲ್ಲದಕ್ಕೂ ಬರುತ್ತದೆ. ಈ ಇಲ್ಲ ಬೆಳೆಗಳಿಗೆ ಅದು ಫಲವತ್ತತ್ತೆ ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ಪೆಟ್ರೋಲ್ ಪಂಪ್ ಮಾಲಿಕರಾದ ಸಂಗನಗೌಡ ಪಾಟೀಲ್, ಅಣ್ಣಾರಾಯಗೌಡ ಪಾಟೀಲ್ ಅವರಾದ, ರೈತ ಮುಖಂಡರಾದ ರಾಜುಗೌಡ ಹೆಗ್ಗಣಿ, ಮಲ್ಲಿಕಾರ್ಜುನ ಕಲ್ಲೂರ, ಮುರಘೇಂದ್ರ ಇನಾಮದಾರ, ಮಹಾದೇವಪ್ಪ ಹರವಾಳ, ಬಸವರಾಜ ಕರಕಿಹಳ್ಳಿ ಇದ್ದರು.