ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ:ಅರಕೇರಿ

ಯಡ್ರಾಮಿ:ನ.2:ಕನ್ನಡ ನಾಡು ನುಡಿ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಯಡ್ರಾಮಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಅರಕೇರಿ ಹೇಳಿದರು.

ಪಟ್ಟಣದಲ್ಲಿ ತಾಲೂಕ ಆಡಳಿತದವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ ಇದೆ.

ಕನ್ನಡ ಭಾಷೆಯಲ್ಲಿ 7 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ ಎಂದು ಯಡ್ರಾಮಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಅರಕೇರಿ ಹೇಳಿದರು.ಹಲವಾರು ಪ್ರಾಂತ್ಯಗಳಾಗಿ ವಿಂಗಡಿಸಿ ಹೋಗಿದ್ದ ರಾಜ್ಯದಲ್ಲಿ ಎಲ್ಲ ಸಾಮಂತ ರಾಜರನ್ನು ಒಗ್ಗೂಡಿಸುವ ಕಾರ್ಯ ಸ್ವಾತಂತ್ರ್ಯಪೂರ್ವದಲ್ಲೇ ನಡೆದರೂ ಅಖಂಡ ಕರ್ನಾಟಕವಾಗಿ ರೂಪುಗೊಂಡು ಕನ್ನಡಾಂಬೆಯನ್ನು ಆರಾಧಿಸುವ ಅವಕಾಶ ನಮ್ಮದಾಗಿದೆ ಎಂದರು.

ತಾಲೂಕು ದಂಡಾಧಿಕಾರಿ ಯಲ್ಲಪ್ಪ ಸುಬೇದಾರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರದಾರ ಶರಣಗೌಡ ಇನಾಮ್ಹಾರ್ ವೃತ್ತದಿಂದ ಅಂಬೇಡರ್ ವೃತ್ತದವರೆಗೆ ವಿವಿಧ ಕಲಾತಂಡಗಳು ಹಾಗೂ ಶಾಲೆಯ ವಿದ್ಯಾರ್ಥಿಗಳ ಬೃಹತ್ ಕನ್ನಡ ಬಾವುಟದೊಂದಿಗೆ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ತಾ.ಪಂ.ಕಾ.ನಿ.ಅಧಿಕಾರಿ ಶಂಕರ ರಾಠೋಡ್, ಪ.ಪಂ.ಮುಖ್ಯಾಧಿಕಾರಿ ಶ್ಯಾಮ್ ಭಜಂತ್ರಿ, ಪಿಎಸ್‍ಐ ವಿಶ್ವನಾಥ ಮುದರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗಪ್ಪ ಸಜ್ಜನ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಶಿವಕುಮಾರ ಎಸ್. ಡಂಬಳ, ಸಾಹೇಬ್ ಗೌಡ ದೇಸಾಯಿ, ವಿಶ್ವನಾಥ್ ಗೌಡ ಮಾಗಣಗೇರಾ, ಅಫೆÇೀಜ್ ಆತರ್ನೂ, ಸಾಂಬಶಿವ ಹಿರೇಮಠ, ಯಲ್ಲಾಲಿಂಗ ಹರನಾಳ, ಬಸವರಾಜ ಹೂಗಾರ, ಸಿದ್ದು ಹೂಗಾರ ಬಾಲರಾಜ, ಶ್ರೀಧರ, ಸರಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.