ಸನತನಾ ಹಿಂದು ಧರ್ಮ ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ

ಕೋಲಾರ,ಜ,೨೭- ಸನಾತನ ಹಿಂದು ಧರ್ಮ ಉಳಿಸಿ ಬೆಳೆಸುವುದು ನಾಡಿನ ಪ್ರತಿಯೊಬ್ಬ ಪ್ರಜೆಯ ಅದ್ಯ ಕರ್ತವ್ಯವಾಗಿದೆ ಎಂದು ನಾಗಲಾಪುರದ ಮಠದ ಪೀಠಾಧ್ಯಕ್ಷರಾದ ಶ್ರೀ ತೇಜೇಶ ಲಿಂಗ ಶಿವಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.


ತಾಲ್ಲೂಕಿನ ವೇಮಗಲ್ ಪಟ್ಟಣದ ಶ್ರೀರಾಮ ಶೆಟ್ಟಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀಗಳು ಜ್ಯೋತಿ ಬೆಳಗುವ ಮೂಲಕ ಆಶೀರ್ವಚನ ನುಡಿಗಳಾಡಿ ಹಿಂದೂ ಧರ್ಮ ನಾಡು,ನುಡಿ, ನೆಲ ಜಲದ ರಕ್ಷಣೆ ಆಗಬೇಕಾಗಿದೆ. ಪ್ರತಿಯೊಬ್ಬ ಹಿಂದೂಗಳ ಸಕ್ರಿಯರಾಗಬೇಕೆಂದರು.


ಭಾರತವು ಹಿಂದು ರಾಷ್ಟ್ರವಾಗಿದ್ದು ಇದನ್ನು ಉಳಿಸಿ ಬೆಳೆಸುವಂತ ಪರಿಕಲ್ಪನೆಯನ್ನು ಇಂದಿನ ಯುವಕರು ತಮ್ಮ ಜೀವನದ ಭಾಗವಾಗಿ ಆಳವಡಿಸಿ ಕೊಳ್ಳುವಂತಾಗ ಬೇಕು. ಹಿಂದು ಸಂಸ್ಕೃತಿ ಪರಂಪರೆಗಳನ್ನು ಎಲ್ಲೆಡೆ ಪಸರಿಸುವ ಮೂಲ ಹಿಂದೂ ಸಮಾಜದ ಹಿತಕ್ಕಾಗಿ ಹಿಂದೂ ಧರ್ಮದ ಉಳಿವಿಗಾಗಿ ಹಿಂದು ಧರ್ಮದ ರಕ್ಷಣೆ ಮಾಡುವ ಮೂಲಕ ಸನಾತನ ಹಿಂದು ಧರ್ಮವನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರೂ ಸಂಕಲ್ಪತೊಡ ಬೇಕೆಂದು ಕರೆ ನೀಡಿದರು.


ಜಗತ್ತಿನಲ್ಲಿ ಪ್ರಕೃತಿ ವಿಕಸನವಾದಗಲೇ ಸನತನಾ ಧರ್ಮವು ಉದಯವಾಯಿತು. ಧರ್ಮವು ಸಕಲ ಜೀವರಾಶಿಗಳನ್ನು ಒಳಿತನ್ನು ಬಯಸುತ್ತದೆ. ಸಂತರು ಧರ್ಮ ಸೂಚಿಯಂತೆ ಜೋಡಿಸುವ ಕಾಯಕವನ್ನು ಮಾಡುತ್ತಾರೆ. ವೃತ್ತಿದ ಧರ್ಮದ ಜೂತೆಗೆ ತಮ್ಮ ಸಮಾಜಿಕ ಕಾಳಜಿಯನ್ನು ಮಾನವೀಯತೆಯ ನೆಲೆಯಲ್ಲಿ ಹೊಸ ಬದಲಾವಣೆಗೆ ಪ್ರೇರಣೆಯಾಗಿದ್ದಾರೆ. ಧರ್ಮದಲ್ಲಿ ರಾಜಕೀಯ ಬೇಡ,ರಾಜಕೀಯದಲ್ಲಿ ಧರ್ಮವಿರಲಿ, ರಾಜಕೀಯ ಕಾರಣಗಳಿಂದ ಧರ್ಮದಲ್ಲೂ ವಿಭಜಿಸುವ ಕೆಲಸವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಧರ್ಮವು ಕೇವಲ ಅಧ್ಯಾತ್ಮಿಕತೆ ಮೀಸಲಾಗಿಲ್ಲ. ಧರ್ಮ ಎಂಬುವುದು ಪ್ರತಿಯೊರ್ವ ಮಾನವನಿಗೂ ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ನಾನು ಎಂಬುವುದ ಅಧರ್ಮವಾದರೆ,ನಾವು ಎಂಬುವುದು ಧರ್ಮವಾಗಿದೆ.ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುವುದು ಎಂಬುವುದನ್ನು ತಮ್ಮ ಜೀವನದಲ್ಲಿ ಆಳವಡಿಸಿ ಕೊಳ್ಳಬೇಕೆಂದರು.


ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ, ಹಿಂದೂ ಜಾಗರಣ ವೇದಿಕೆ ಕರ್ನಾಟಕ ಧಕ್ಷಿಣ ಪ್ರಾಂತ ಸಹ ಸಂಚಾಲಕ ಮಹೇಶ್ ಕಡದಾಳು, ಚಿನ್ಮಯ ಮಿಷನ್ ಶ್ರೀ ದತ್ತಪಾದಾನಂದ ಸ್ವಾಮೀಜಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸಿದರು.


ಇದಕ್ಕೂ ಮುನ್ನ ಪಟ್ಟಣದ ಕುರುಬರಹಳ್ಳಿ ಗೇಟ್ ನಿಂದ ಪ್ರಾರಂಭವಾದ ಶೋಭಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಶೆಟ್ಟಿ ಬಯಲು ರಂಗಮಂದಿರ ಬಹಿರಂಗ ಸಮಾವೇಶಕ್ಕೆ ಅಗಮಿಸಿತು. ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಎಲ್.ಜಿ.ಫೌಂಡೇಷನ್ ಲಕ್ಷಣಗೌಡ, ಎ,ಪಿ.ಎಂ.ಸಿ. ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಬಿಜೆಪಿ ಮಂಡಲ ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ ಮುಂತಾದವರು ಉಪಸ್ಥಿತರಿದ್ದರು.