ವೃತ್ತಿ ಕೌಶಲ್ಯದಿಂದ ಉದ್ಯೋಗ ಸಂಪಾದನೆ ಸಾಧ್ಯ

ಕೆಂಗೇರಿ.ಡಿ೬: ತಮ್ಮ ಪದವಿಗೆ ತಕ್ಕಂತೆ ವೃತ್ತಿ ಕೌಶಲ್ಯವನ್ನು ಕಲಿತರೆ ಮಾತ್ರ ಯಾವುದೇ ಉದ್ಯೋಗ ಅಥವಾ ಉದ್ಯಮವನ್ನು ನಿರ್ವಹಿಸಲು ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಡಾ.ಎಂ.ಜಯಕರ ಶೆಟ್ಟಿ ಸಲಹೆ ನೀಡಿದರು.


ಮೈಸೂರು ಮುಖ್ಯ ರಸ್ತೆಯಲ್ಲಿರುವ ರಾವಿ ತಾಂತ್ರಿಕ ಮಹಾವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೧೫ನೇ ಸ್ವಾಯತ್ತತೆಯಡಿಯಲ್ಲಿ ಸ್ನಾತಕೋತ್ತರ – ಎಂಟೆಕ್ ಮತ್ತು ಎಂಸಿಎ ಪದವಿ ಪಡೆದ ವಿದ್ಯಾರ್ಥಿಗಳ “ಪದವಿ ಪ್ರದಾನ ಸಮಾರಂಭ – ೨೦೨೫” ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.ಆರ್.ವಿ. ಇಂಜಿನಿಯರಿಂಗ್ ಕಾಲೇಜು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರಾಗಿದೆ ಇಲ್ಲಿ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸಾಕಷ್ಟು ಅವಕಾಶಗಳಿವೆ, ಪೋಷಕರು ನಿಮ್ಮ ಮೆಲೆ ನಂಬಿಕೆ ಇಟ್ಟು ವಿದ್ಯಾರ್ಜನೆ ಮಾಡಲು ಕಳಿಸಿದ್ದಾರೆ. ನೀವು ಪದವಿ ಪಡೆದು ಉನ್ನತ ಉದ್ಯೋಗ ಪಡೆಯುವಿರಿ ಎಂಬ ಕನಸು ಕಂಡಿದ್ದಾರೆ. ಅವರ ಕನಸನ್ನು ನನಸು ಮಾಡುವುದು ನಿಮ್ಮಗಳ ಕರ್ತವ್ಯ ಎಂದರು.


ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್ ,ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಮಣ್ಯ, ಉಪ ಪ್ರಾಂಶುಪಾಲೆ ಡಾ.ಕೆ.ಎಸ್.ಗೀತಾ, ಡಾ.ರಾಧಾಕೃಷ್ಣ, ನಿಯೋಜನೆ ನಿರ್ದೇಶಕ ಡಾ.ಡಿ.ರಂಗನಾಥ್, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.