
ಕೋಲಾರ,ಏ,೪- ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಜನರು ಗುರುತಿಸಿ ಶ್ಲಾಘಿಸುವಂತೆ ಆದಾಗ ಮಾತ್ರ ಪತ್ರಕರ್ತರಾಗಿರುವುದು ಸಾರ್ಥಕವಾಗುತ್ತದೆ. ಸುದ್ದಿಗಳು ಕಾಪಿ ರೈಟ್, ಕಾಫಿ ಪೇಸ್ಟ್ ,,,ಇಲ್ಲದೆ ವಿಭಿನ್ನ. ವಿಶಿಷ್ಟತೆಯನ್ನು ಹೊಂದಿರುವಂತ ಸುದ್ದಿಗಳನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆಯುವಂತೆ ಆದಾಗ ಮಾತ್ರ ಪತ್ರಕರ್ತರು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಲು ಸಾಧ್ಯವಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅಭಿಪ್ರಾಯ ಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ೨೦೨೪ನೇ ಸಾಲಿನಲ್ಲಿ ಸುಣ್ಣವಂಡ ಶ್ರೀನಿವಾಸ್ ಚಂಗಪ್ಪ ಪ್ರಶಸ್ತಿಗೆ ಭಜನರಾದ ಮುಳಬಾಗಿಲಿನ ಹಿರಿಯ ಪತ್ರಕರ್ತರಾದ ಎ.ಅಪ್ಪಾಜಿಗೌಡ ಮತ್ತು ಮಂಡ್ಯದ ಕೆ.ಪ್ರಹ್ಲಾದ ರಾವ್ ಪ್ರಶಸ್ತಿಗೆ ಭಜನರಾದ ಬಂಗಾರಪೇಟೆ ವರದಿಗಾರರಾದ ಕೆ.ರಮೇಶ್ ಅವರಿಗೆ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಸ್ವಲ್ಪ ತಡವಾಗಿಯಾದರೂ ಪ್ರಶಸ್ತಿ ಸಿಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತ ಪಡೆಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಖಜಾಂಜಿ ವಾಸುದೇವ ಹೊಳ್ಳ ಮಾತನಾಡಿ ಪ್ರಶಸ್ತಿಗೆ ಭಜನರಾದವರನ್ನು ಅಭಿನಂಧಿಸಿ ಗೌರವಿಸ ಬೇಕಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿಯಾಗಿದೆ. ಅಭಿನಂದಿಸಿ ಗೌರವಿಸುವುದು ಇತರೆ ಪತ್ರಕರ್ತರಿಗೆ ಪೇರಣೆಯಾಗಲಿದೆ ಎಂದರು.
ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ ತನ್ನದೆ ಆದಾ ನಿಯಮಗಳನ್ನು ಹೊಂದಿದ್ದು ಅವರ ಲೇಖನಗಳನ್ನು ತೊಗಿ ಅಳೆದು ಪರಿಶೀಲಿಸಿ ನಿರ್ದರಿಸಲಾಗುವುದು ಯಾವೂದೇ ರೀತಿ ಒತ್ತಡ, ಲಾಭಿಗಳಿಗೆ ಸಂಘವು ಮಣಿಯದು ಎಂದ ಅವರು ಪ್ರಶಸ್ತಿಗೆ ಕೋಲಾರ ಜಿಲ್ಲೆಯಿಂದ ಕೇವಲ ೨ ಮಾತ್ರ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ಪ್ರತಿಭೆಗಳಿದ್ದರೂ ಅರ್ಜಿಗಳನ್ನು ಹಾಕದೆ ನಿರ್ಲಕ್ಷಿಸಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು.
ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕರಾದ ವಿ.ಮುನಿರಾಜು ಮಾತನಾಡಿ ಪತ್ರಕರ್ತರಾದ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ ಅವರುಗಳನ್ನು ರಾಜ್ಯ ಪತ್ರಕರ್ತರ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣವಾಗಿದೆ. ಈ ಪ್ರಶಸ್ತಿಗೆ ಇಬ್ಬರು ಆರ್ಹರಾಗಿರುವ ಪತ್ರಕರ್ತರಾಗಿದ್ದಾರೆ.ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತೆ ಇಬ್ಬರು ಎಲೆಯ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಮಂಜಸವಾಗಿದೆ, ಇವರನ್ನು ಮಾದರಿಯಾಗಿಸಿ ಕೊಂಡು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತಗ ಬೇಕೆಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಪಾ,ಶ್ರೀ. ಆನಂತರಾಮ್ ಮಾತನಾಡಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ ಇಬ್ಬರೊಂದಿಗೆ ತಮ್ಮ ಒಡನಾಟವನ್ನು ನೆನಪಿಸಿದ ಅವರು ಜಿಲ್ಲಾ ಪತ್ರಕರ್ತರ ಸಂಘವು ಇವರನ್ನು ಅಭಿನಂದಿಸಿ ಗೌರವಿಸುತ್ತಿರುವುದು ಸಂಪ್ರಾದಯವಾಗಿದೆ. ಇಬ್ಬರಿಗೆ ಪತ್ರಿಕೋದ್ಯಮದಲ್ಲಿ ಬದ್ದತೆ, ಕಾಳಜಿ ಹೊಂದಿರುವಂತವರಿಗೆ ಪ್ರಸಸ್ತಿ ಲಭಿಸಿರುವುದು ಸಮಾಂಜಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಭಿನಂದನೆ ಸ್ವೀಕರಿಸಿದ ಅಪ್ಪಾಜಿ ಗೌಡ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೂ ಪತ್ರಿಕೋದ್ಯಮವನ್ನು ಹವ್ಯಾಸವಾಗಿ ರೊಡಿಸಿ ಕೊಂಡು ಬಂದೆ. ಪೊಲೀಸ್ ಹಾಗೂ ಕಂಡೆಕ್ಟರ್ ಹುದ್ದೆಗಳು ಅರಿಸಿ ಬಂದಿದ್ದರೂ ಹೋಗಲಿಲ್ಲ. ವಿವಿದ ಪತ್ರಿಕೆಗಳಲ್ಲಿ ಹಾಗೂ ಹಿರಿಯ ಪತ್ರಕರ್ತರೊಂದಿಗೆ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ಮೆಲುಕು ಹಾಕಿದರು.
ಬಂಗಾರಪೇಟೆಯ ಕೆ.ರಮೇಶ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಶಸ್ತಿಗಳು ಮಾರಾಟದ ವಸ್ತುವಲ್ಲ ಅದರ ಹಿಂದೆ ಶ್ರಮದ ಪ್ರತಿಫಲವೆಂದು ಗುರುತಿಸ ಬೇಕು. ಪ್ರಶಸ್ತಿಗಳನ್ನು ಪಡೆಯಲು ಆರ್ಹತೆ, ಯೋಗ್ಯತೆಗಳು ಇದ್ದರೆ ಮಾತ್ರ ಸಿಗಲು ಸಾಧ್ಯ ಎಂಬುವುದನ್ನು ಈಗಾಗಲೇ ಹಿರಿಯ ಪತ್ರಕರ್ತರ ವಿವರಿಸಿರುವುದರಲ್ಲಿ ಸತ್ಯಾಂಶವಿದೆ. ಕಲ್ಲನ್ನು ಶಿಲೆಯಾಗಿ ರೂಪಿಸ ಬೇಕಾದರೆ ಹಲವಾರು ಊಳಿ ಪೆಟ್ಟುಗಳು ಬಿದ್ದ ಮೇಲೆಯೆ ತನ್ನ ರೂಪ ಬದಲಿಸಲು ಸಾಧ್ಯ ಎಂಬಂತೆ ಪ್ರಶಸ್ತಿಯ ಹಿಂದೆ ಪತ್ರಕರ್ತನ ಶ್ರಮವಿರುತ್ತದೆ ಎಂದು ತಮ್ಮ ಅನುಭವವನ್ನು ಹಂಚಿ ಕೊಂಡರು.
ಹಿರಿಯ ಪತ್ರಕರ್ತ ಪಿ.ಟಿ.ಐ. ಸುರೇಶ್.ಬಿ. ಸಿ.ಜಿ.ಮುರಳಿ, ಮುಳಬಾಗಿಲಿನ ಪ್ರಕಾಶ್, ದೇವಾನಂದ್, ಬಂಗಾರಪೇಟೆ ನಾಗರಾಜ್, ಶ್ರೀನಿವಾಸಪುರ ಬಾಬು ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಪ್ರಸ್ತಾವಿಕ ನುಡಿಗಳಾಡಿದರು.























