
ವಿಜಯಪುರ.ಜೂ೨೨:ತಮ್ಮದಲ್ಲದ ಸಂಸ್ಕೃತಿ, ಜ್ಞಾನವನ್ನು ಪ್ರಪಂಚದ ೧೩೦ ದೇಶಗಳು ಅಳವಡಿಸಿ, ಆಚರಿಸಿಕೊಳ್ಳುತ್ತಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ನಮ್ಮದೇ ಆದ ವಿದ್ಯೆ, ಸಂಸ್ಕೃತಿ, ಸಂಸ್ಕಾರಗಳನ್ನು ಹೆಮ್ಮೆಯಿಂದ ಆಚರಿಸುವುದರೊಂದಿಗೆ ನಮ್ಮ ಯುವಪೀಳಿಗೆಗೂ ಪರಿಚಯಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಿಭಾಗೀಯ ಸಂಚಾಲಕಿ ದೀಪಾ ರಮೇಶ್ ತಿಳಿಸಿದರು.
ಅವರು ಇಲ್ಲಿನ ಸರಕಾರಿ ಹೆಣ್ಣು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಮನೋಹರ್, ಸಹಶಿಕ್ಷಕರುಗಳಾದ ಮಾಧವಿ, ದ್ರಾಕ್ಷಿ ಯಣಿ, ಸರಸ್ವತಿ, ನಿರ್ಮಲ, ರೋಹಿಣಿ, ಸೀಮಾ, ಮಮತಾ, ರಾಜ್ವೇಶ್ವರಿ, ಅನ್ನಪೂರ್ಣೇಶ್ವರಿ, ಶೋಭ, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ರಾಧಾ, ಸದಸ್ಯರಾದ ಮಾಲ ಹಾಗೂ ಮಕ್ಕಳು ಹಾಜರಿದ್ದರು.