
ಕಲಬುರಗಿ:ನ.27:ಜನರು ರಸ್ತೆ ಚರಂಡಿ ಮತ್ತು ಕುಡಿಯುವ ನೀರು ಇವುಗಳಿಗೆ ಮಾತ್ರ ಬೇಡಿಕೆ ಸಲ್ಲಿಸುತ್ತಾರೆ ಇವುಗಳನ್ನು ಸಹಾನುಭೂತಿಯಿಂದ ಸ್ಪಂಧಿಸಿ ಇವುಗಳನ್ನು ಒದಗಿಸಿಕೊಡುವುದು ನಮ್ಮ ಕರ್ತವ್ಯ ಎಂದು 47ನೇಯ ವಾರ್ಡಿನ ಬಂಜಾರ ಕಾಲೋನಿ ಮತ್ತು ಶಕ್ತಿನಗರ ರಾಜಾಪುರ ನ ನಿವಾಸಿಗಳಿಂದ ಅಲ್ಲಂಪ್ರಭು ಪಾಟೀಲ್ ಅವರಿಗೆ ಏರ್ಪಾಡು ಮಾಡಿರುವ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಶಾಸಕರ ಸಪುತ್ರರಾದ ಅಭಿಷೇಕ್ ಅಲ್ಲಂಪ್ರಭು ಪಾಟೀಲ ಮಾತನಾಡಿದರು. ಬಂಜಾರ ಕಾಲೋನಿ ಮತ್ತು ಶಕ್ತಿನಗರದಲ್ಲಿ 3 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಕೆಲವರು ಅಭಿವೃದ್ಧಿಯನ್ನು ಸಹಿಸದೆ ರಾಜಕೀಯ ದುರುದ್ದೇಶಗಳಿಂದ ಟೀಕೆ ಮಾಡಿದ್ದಾರೆ ತಾವು ಸಲ್ಲಿಸಿರುವ ಬಹುಮುಖ್ಯ ಮೂರೂ ಬೇಡಿಕೆಗಳಲ್ಲಿ ಚರಂಡಿ ನಿರ್ಮಾಣಕ್ಕಾಗಿ ಈಗಲೇ ಕಾಮಗಾರಿಯ ಪ್ರಾರಂಭಿಸುತ್ತೇವೆ. ಸೇವಾಲಾಲ್ ಮಂದಿರ ಮತ್ತು ಮರಿಯಮ್ಮ ದೇವಸ್ಥಾನಕ್ಕಾಗಿ ಅನುದಾನ ಬಿಡುಗಡೆ ಮಾಡಿ ಮುಂದೆ ಹಂತ ಹಂತದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತೇವೆ. ನಮ್ಮನ್ನು ಆಯ್ಕೆ ಮಾಡಿ ತಂದಿದ್ದೀರಿ ನಮ್ಮ ಕರ್ತವ್ಯ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದು ಎಂದು ಹೇಳಿದರು. ಮಾಜಿ ಮೇಯರ ರವೀಂದ್ರನಾಥ್ ಸಿ ಹೊನ್ನಳ್ಳಿ ಮಾತನಾಡಿ ಚುನಾವಣೆಯಲ್ಲಿ ಶಕ್ತಿನಗರ ಮತ್ತು ಬಂಜಾರ ಕಾಲೋನಿಯ ನಿವಾಸಿಗಳು ನಾವು ಮತ ಪ್ರಚಾರಕ್ಕೆ ಬಂದು ಮತವನ್ನು ಕೇಳಿ ನಿವಾಸಿಗಳ ಮತವನ್ನ ಕಾಂಗ್ರೆಸ್ ಪಕ್ಷಕ್ಕೆ ಪಡೆದು ಅಲ್ಲಂಪ್ರಭು ಪಾಟೀಲ್ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ತಂದಿದ್ದೇವೆ ಅವರಿಗೆ ನೀಡಿರುವ ಭರವಸೆಗಳಾದ ಚರಂಡಿ ನಿರ್ಮಾಣ ಸಿಸಿ ರಸ್ತೆ ಹಾಗೂ ಹಾಗೂ ಉದ್ಯಾನವನವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಒಪ್ಪಿಗೆ ನೀಡಿದ್ದಾರೆ. ಕೂಡಲೇ 50 ಲಕ್ಷ ರೂಪಾಯಿದಲ್ಲಿ ಚರಂಡಿ ಕಾಮಗಾರಿಯನ್ನ ಪ್ರಾರಂಭಿಸುತ್ತೇವೆ. ತಾವು ಇಟ್ಟಿರುವ ಬೇಡಿಕೆಗಳನ್ನ ಸರ್ಕಾರ ಮುಗಿದು ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸಿ ಮತ್ತೆ ಮತ ಕೇಳಲು ಬರುತ್ತೇವೆ. ತಾವೆಲ್ಲರೂ ನಮ್ಮ ಪರವಾಗಿ, ನಮ್ಮ ಪಕ್ಷಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ನಿಮ್ಮ ಕಷ್ಟ ಸುಖಗಳಿಗೆ ನಾವು ಭಾಗಿಯಾಗುತ್ತೇವೆ ಎಂದರು. ಸನ್ಮಾನ ಸಮಾರಂಭದಲ್ಲಿ ಅಲೆಮಾರಿ ಸಮುದಾಯಗಳ ಜಿಲ್ಲಾಧ್ಯಕ್ಷರಾದ ಕುಮಾರ್ ಯಾದವ್, ರಾಜು ಎಂ ಚವ್ಹಾಣ, ಬಿಬಿ ನಾಯಕ, ವಸಂತ್ ರಾವ್ ಚವ್ಹಾಣ, ಶಾಮರಾವ್ ಪವಾರ, ಸುಭಾಷ್ ಹೇರೂರ ,ಬಾಬು ಚವ್ಹಾಣ ,ರವಿಕುಮಾರ್ ಒಂಟಿ, ಸುಭಾಷ್ ಜಿ ರಾಠೋಡ ನರಸಪ್ಪ ರಂಗೋಲಿ, ಪಾಂಡು ಎಲ್ ರಾಠೋಡ, ಡಾ.ಕೃಷ್ಣ ನಾಯಕ್ ಪೆÇ್ರ. ಕುಪೇಂದ್ರ ರಾಠೋಡ್ ಲಿಂಬಾಜಿ ಚವ್ಹಾಣ, ಪ್ರೇಮಸಿಂಗ್ ಚವ್ಹಾಣ ರಾಜಕುಮಾರ್ ರಾಠೋಡ ಸುಧಾಕರ ರಾಠೋಡ್ ಪ್ರಕಾಶ ಪವಾರ, ರವಿದಾಸ ರಾಠೋಡ್ ನಾಮದೇವ್ ಪವಾರ ಶಾಮ ಪವಾರ ,ದಿಲೀಪ್ ರಾಠೋಡ, ಶಿವರಾಂ ರಾಠೋಡ್, ಚಂದ್ರಕಾಂತ ರಾಠೋಡ್,ಮಹೇಶ್ ಚವ್ಹಾಣ ಶ್ರೀಕಾಂತ್ ಪೆÇಲೀಸ್ ಮುಂತಾದವರು ಉಪಸ್ಥಿತರಿದ್ದರು.


























