
ಅಥಣಿ :ಜ.೨೧: ಬೀದಿ ಬದಿ ವ್ಯಾಪಾರಸ್ಥರಾದ
ನೀವೆಲ್ಲರೂ ದೇಶದ ಆಸ್ತಿ. ಸಮಾಜದಲ್ಲಿ ಗೌರವಯುತವಾಗಿ, ಸ್ವಾಭಿಮಾನದ ಬದುಕು, ಬದುಕಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಚಿದಾನಂದ ಸವದಿ ಭರವಸೆ ನೀಡಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆಯಲ್ಲಿ ಭಾಗವಹಿಸಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೀದಿ ಬದಿ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಬೀದಿ ಬದಿ ವ್ಯಾಪಾರ ಸಮಾಜದ ಮತ್ತು ವ್ಯವಸ್ಥೆಯ ಒಂದು ಭಾಗ. ಮಳೆ ಚಳಿ ಬಿಸಿಲು ಎನ್ನದೇ ದುಡಿದು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪ್ರಾಮಾಣಿಕವಾಗಿ ದುಡಿಯುವ ಇವರ ಹಿತರಕ್ಷಣೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಮಾನತೆಯ ಆಶಯ ಹಾಗೂ ಡಾ. ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಆರ್ಥಿಕ ನೀತಿಗಳು ಇಂದು ಸಾಮಾನ್ಯ ವ್ಯಾಪಾರಿಗಳಿಗೂ ಶಕ್ತಿ ತುಂಬಿವೆ.
ಬೀದಿಬದಿ ವ್ಯಾಪಾರಿಗಳ ಸಂಘಟಿತ ಹೋರಾಟದಿಂದ ದೇಶದಲ್ಲಿ ಕಾನೂನು ಮತ್ತು ನೀತಿ ಜಾರಿಗೆ ಬಂದಿರುವುದು. ಈ ಕಾನೂನು ಜಾರಿಗೆ ಬಂದಿರುವುದರಿAದ ಬೀದಿಬದಿ ವ್ಯಾಪಾರಿಗಳು ಘನತೆಯಿಂದ ಬದುಕುವಂತಾಗಿದೆ ಎಂದ ಅವರು ಅಥಣಿ ಪಟ್ಟಣದ ವ್ಯಾಪಾರಿಗಳ ಅಭಿವೃದ್ಧಿಗೆ ಹಾಗೂ ಅವರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಹೇಳಿದರು.
ಆನಂತರ ಬೀದಿ ಬದಿ ವ್ಯಾಪಾರಸ್ಥರ ತಾಲೂಕಾ ಅಧ್ಯಕ್ಷ ಮನ್ಸೂರ್ ಬಾಗವಾನ ಮಾತನಾಡಿ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಹಕ್ಕುಗಳ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಅಂದಿನ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಸ್ಮರಿಸಬೇಕಾಗುತ್ತದೆ. ನಮ್ಮೆಲ್ಲರ ಹಿತ ಕಾಪಾಡುವ ಮೂಲಕ ಶಾಸಕ ಲಕ್ಷ್ಮಣ ಸವದಿ ಅವರು ಸುಮಾರು ೫೦೦ ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲು ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಛತ್ರಿ ಕೊಡುವ ಮೂಲಕ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರದಿಂದ ಹಾಗೂ ಸ್ಥಳೀಯ ಪುರಸಭೆಯಿಂದ ಸಿಗುವ ಸವಲತ್ತುಗಳನ್ನು ನಮಗೆ ಒದಗಿಸಬೇಕು ಎಂದು ಮನವಿ ಮಾಡಿದರು.
ಆನಂತರ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ. ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್. ಉಪಾಧ್ಯಕ್ಷೆ ಭುವನೇಶ್ವರಿ ಯಂಕAಚ್ಚಿ ಮಾತನಾಡಿದರು.
ಇದೆ ವೇಳೆ ಬೀದಿಬದಿ ವ್ಯಾಪಾರಸ್ಥರಿಗೆ ಪುರಸಭೆಯಿಂದ ಮಾರಾಟದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಆನಂತರ ಬೀದಿ ಬದಿ ವ್ಯಾಪಾರಸ್ಥರಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಪುರಸಭೆ ಸದಸ್ಯರಾದ ರಾಜು ಗುಡೋಡಗಿ. ಮಲ್ಲೇಶ ಹುದ್ದಾರ್. ಮಲ್ಲಿಕಾರ್ಜುನ ಬುಟಾಳಿ. ರಮೇಶ ಪವಾರ. ಮುಖಂಡರಾದ ಆಸೀಫ್ ತಾಂಬೋಳಿ. ಬಸವರಾಜ ಹಳದಮಳ್ಳ. ಮಂಜು ಹೋಳಿಕಟ್ಟಿ. ಬೀರಪ್ಪ ಯಂಕAಚ್ಚಿ. ಇನ್ನೂಸ್ ಬಾಗವಾನ. ಗುಲಾಬ ಘಟಕಾಂಬಳೆ. ಹಜರತ್ ಜಮಾದಾರ. ಮಾನಿಂಗ ಭಜಂತ್ರಿ. ಶ್ರೀನಿವಾಸ ಶೆಟ್ಟಿ, ಬಸವಂತ ಮಾಂಗ. ಸೇರಿದಂತೆ ಸಂಘದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ನೂರಾರು ವ್ಯಾಪಾರಸ್ಥರು ಉಪಸ್ಥಿತರಿದ್ದರು


























