
ಕಲಬುರಗಿ:ಜ.14:ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಹಾಗು ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಹಸಿರು ಆವರಣ ವನ್ನಾಗಿಸಲು ನಾವು ಹಲವು ಯೋಜನೆಗಳ ಮೂಲಕ ಪ್ರಯತ್ನಿಸುತ್ತಿದ್ದೇವೆ. ಕೇಂದ್ರೀಯ ವಿಶ್ವ ವಿದ್ಯಾನಿಲಯಯದ ಆವರಣದಲ್ಲಿ ಗಿಡ ಮರಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಗಮನ ಹರಿಸುತ್ತಿದ್ದೇವೆ ಎಂದು ಉಪಕುಲಪತಿಗಳಾದ ಪೆÇ್ರಫೆಸರ್ ಬಟ್ಟು ಸತ್ಯನಾರಾಯಣ ತಿಳಿಸಿದರು.
ಕುಮಾರಿ ಪ್ರಜ್ಞಾ ಜ್ಯೋತಿಯ 3ನೆ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 3 ಗಿಡಗಳನ್ನು ನೆಟ್ಟು 3ನೆ ಹುಟ್ಟು ಹಬ್ಬವನ್ನು ಆಯೋಜಿಸಿರುವ ರೆಮ್ಯಾ ವಿ. ಪಿ ಮತ್ತು ಎಂ. ಎಸ್. ಚಂದ್ರ ಕುಟುಂಬದ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಪೆÇ್ರ. ಚನ್ನವೀರ್ ಆರ್. ಎಂ, ಡಾ. ರೆಮ್ಯಾ ವಿ. ಪಿ, ಬೋಧಿ ವೃಕ್ಷ ಸೊಸೈಟಿ ಫಾರ್ ಡೆವಲಪ್ಮೆಂಟ್ ಅಧ್ಯಕ್ಷರಾದ ಎಂ. ಎಸ್. ಚಂದ್ರ, ಡಾ. ವಿಜಯ್ ಎಸ್, ಡಾ. ಅಬ್ದುಲ್ ಎಂ. ಡಾ. ಧನರಾಜ್, ಡಾ. ಸಫಿಯಾ ಪಿ, ಡಾ. ಸುಷ್ಮಾ, ಡಾ. ರೇಷ್ಮಾ ಏನ್, ಪ್ರಜ್ಞಾ ಜ್ಯೋತಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.






















