
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೫: ದಲಿತ ಸಮುದಾಯದ ವಿರೋಧಿ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಬಿಜೆಪಿ ಪಕ್ಷವು ಸಾಕ್ಷಿ ಆಧಾರವಿಲ್ಲದೆ ದಲಿತ ಸಮುದಾಯದ ಹಿರಿಯ ನಾಯಕರು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ವಿರುದ್ಧ ದ್ವೇಷ ಕಾರುತ್ತಿದೆ. ಇದು ಒಂದು ರಾಜಕೀಯ ಷಡ್ಯಂತ್ರವಾಗಿದೆ. ಪದೇ ಪದೇ ಸಚಿವ ಆರ್.ಬಿ. ತಿಮ್ಮಪೂರ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ಕರೆಕಲ್, ಕರ್ನಾಟಕ ಸಂಘರ್ಷ ದಲಿತ ಸಮಿತಿಯ ಜಿಲ್ಲಾಧ್ಯಕ್ಷ ಕಾರ್ಮಿಕ ಘಟಕ ಮಾರುತಿ ತಡಲಗಿ ಅವರು ಜಂಟಿಯಾಗಿ ಬಿಜೆಪಿ ವಿರುದ್ಧ ಪ್ರಕಟಣೆಯ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.























