Home ಜಿಲ್ಲೆ ಕಲಬುರಗಿ ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ

ಕಲಬುರಗಿ:ಮಾ.11:ಪ್ರಸ್ತುತ ವರ್ಷ ಹಿಂದೆಂದಿಗಿಂತ ಹೆಚ್ಚಿನಉಷ್ಣಾಂಶವಿದ್ದು, ಮಾರ್ಚ ತಿಂಗಳಿನ ಆರಂಭದಲ್ಲಿಯೇಬಿಸಿಲಿನ ತಾಪಹೆಚ್ಚಾಗಿದ್ದು, ಈಗಾಗಲೇ ಕಲಬುರಗಿಜಿಲ್ಲೆಯುರಾಜ್ಯದಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.ಬೇಸಿಗೆ ದಿನಗಳಲ್ಲಿ ವಾತಾವರಣದ ಬದಲಾವಣೆಯಪರಿಣಾಮವು ಮಾನವನದೇಹದ ಮೇಲೆ ನೇರವಾಗಿ ಬೀರುತ್ತದೆ.ಆದ್ದರಿಂದಆರೋಗ್ಯದಲ್ಲಿಏರು-ಪೇರುಗಳಾಗುವದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡು, ಬಿಸಿಲಿನಿಂದದೇಹದರಕ್ಷಣೆಯನ್ನು ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿಡಾ.ಅನುಪಮಾಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ’ನಗರ ಪ್ರಾಥಮಿಕಆರೋಗ್ಯಕೇಂದ’್ರದಲ್ಲಿ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಮಂಗಳವಾರ ಜರುಗಿದ’ಬೇಸಿಗೆ ಕಾಲದಆರೋಗ್ಯದ ಸಲಹೆಗಳು ಮತ್ತು ಮುಂಜಾಗ್ರತಾಕ್ರಮಗಳು’ಜಾಗೃತಿಕಾರ್ಯಕ್ರಮದಲ್ಲಿಅವರುಮಾತನಾಡುತ್ತಿದ್ದರು.
ಬೇಸಿಗೆ ದಿವಸಗಳಲ್ಲಿ ಉಷ್ಣಾಂಶದ ಹೆಚ್ಚಾಗಿರುವದರಿಂದ ಬೆವರಿನಉತ್ಪಾದನೆಯ ಪ್ರಮಾಣ ಜಾಸ್ತಿಯಾಗಿರುತ್ತದೆ.ಆಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೇಹ ಬಿಸಿಯಾಗುತ್ತದೆ.ಆದ್ದರಿಂದಆಗಾಗ್ಗೆ ಸ್ವಲ್ಪ-ಸ್ವಲ್ಪನೀರನ್ನುಕುಡಿಯುತ್ತಿರಬೇಕು.ಬಿಸಲಿನಲ್ಲಿ ಸುತ್ತಾಡಬಾರದು.ಅನಿವಾರ್ಯವಿದ್ದಾಗತಿರುಗಾಡುವ ಸಮಯದಲ್ಲಿತಲೆ,ಮೈ-ಕೈಯನ್ನು ಬಿಳಿ ವಸ್ತ್ರದಿಂದರಕ್ಷಿಸಬೇಕು.ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಾಮಾನ್ಯಸಮಸ್ಯೆಗಳು ಉಂಟಾಗುತ್ತವೆ.ಆಗ ಅದರ ಬಗ್ಗೆ ಭಯ ಪಡದೆ, ಸೂಕ್ತ ಔಷಧ ಪಡೆಯಬೇಕು.ಶುದ್ಧ, ಸ್ವಚ್ಚವಾದ ನೀರು,ಆಹಾರ ಸೇವಿಸಬೇಕು.ಎಣ್ಣೆಯಲ್ಲಿಕರಿದ-ಹುರಿದ, ಘನ ಆಹಾರ ಸೇವನೆ ಬೇಡ.ನಿಯಮಿತವಾಗ ವಿಶ್ರಾಂತಿ ಪಡೆಯಬೇಕು. ತಂಪು ಪಾನೀಯಗಳ ಬದಲಾಗಿ ಎಳೆ ನೀರು, ನಿಂಬೆ, ಮಜ್ಜಿಗೆ ಸೇರಿದಂತೆ ವಿವಿಧಹಣ್ಣಿನರಸ ಸ್ವೀಕರಿಸಬೇಕೆಂದು ಅನೇಕ ಸಲಹೆ-ಸೂಚನೆಗಳು, ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿಬಳಗದ ಅಧ್ಯಕ್ಷಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯಕೇಂದ್ರದ ಸಿಬ್ಬಂದಿಗಳಾದ ಜಗನಾಥಗುತ್ತೇದಾರ, ಗುರುರಾಜಕೈನೂರ್, ಗಂಗಾಜ್ಯೋತಿಗಂಜಿ, ರೇಶ್ಮಾ ನಕ್ಕುಂದಿ ಸಂಗಮ್ಮಅತನೂರ, ಮಂಗಲಾಚಂದಾಪುರೆ, ಚಂದ್ರಕಲಾ ಮಠಪತಿ, ನಾಗೇಶ್ವರಿ ಮುಗಳಿವಾಡಿ, ಲಕ್ಷ್ಮೀ ಮೈಲಾರಿ, ಸರೋಜಾದಂಡೋತಿಕರ್, ಪಲ್ಲವಿ ಅಂತಪ್ಪನಳ್, ಶ್ರೀದೇವಿ ಸಾಗರ, ಅರ್ಚನಾ ಸಿಂಗೆ, ನಾಗಮ್ಮ ಚಿಂಚೋಳಿ, ಸೇರಿದಂತೆಇನ್ನಿತರರಿದ್ದರು.