
ಕಲಬುರಗಿ:ಮಾ.೫: ಬೆಂಕಿ ಅವಘಡಗಳು, ಪ್ರವಾಹ, ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸುವುದು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕ ವರ್ಗಕ್ಕೆ ಸುರಕ್ಷತೆ ದೊರೆಯಬೇಕು. ಆಹಾರದಲ್ಲಿ ಯಾವುದೇ ರೀತಿಯ ಕಲಬೆರಕೆ ಇಲ್ಲದಂತೆ ಸುರಕ್ಷತೆ ಇರಬೇಕು. ವಾಹನ ಚಲಾವಣೆ ಮಾಡುವಾಗ ಸಾರಿಗೆ ನಿಯಮಗಳನ್ನು ಪಾಲಿಸಬೇಕು. ಆರೋಗ್ಯದ ಸುರಕ್ಷತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಕುಟುಂದ ವೈದ್ಯ ಡಾ.ವಿ.ಬಿ.ಮಠಪತಿ ಹೇಳಿದರು.
ನಗರದ ಹುಮನಾಬಾದ ರಿಂಗ್ ರಸ್ತೆಯಲ್ಲಿನ ನಿಜಾಮಪುರನಲ್ಲಿರುವ ‘ಮಠಪತಿ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟಿçÃಯ ಸುರಕ್ಷತಾ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಒತ್ತಡದ ಬದುಕಿನಲ್ಲಿ ಜೀವದ ಕಡೆ ಲಕ್ಷö್ಯ ವಹಿಸದಷ್ಟು ಬಿಡುವಿಲ್ಲದಾಗಿದೆ. ಯಾವುದೇ ಕೆಲಸ ಮಾಡಿದರೂ ಅದರಿಂದ ನಮಗೆ ಸುರಕ್ಷತೆ ಒದಗಿಸುವುದರ ಜೊತೆಗೆ ಸಮಾಜಕ್ಕೆ ಹಿತವಾಗಿರಬೇಕು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕಾರ್ಯದ ಜೊತೆಗೆ ಆರೋಗ್ಯದ ಕಡೆಗೆ ಸೂಕ್ತ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎಚ್.ಬಿ.ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಯುಸುಫ್, ರಿಜಾಯ್, ಇರ್ಫಾನ್, ಆಶೀಫ್ ಸೇರಿದಂತೆ ಇನ್ನಿತರರಿದ್ದರು.




















