
ಮಾಲೂರು,ನ.೫- ನಗರಸಭೆ ವ್ಯಾಪ್ತಿಯ ವಾರ್ಡುಗಳ ಅಭಿವೃದ್ಧಿಗೆ ಹಾಗೂ ಸರ್ಕಾರದ ಅನುದಾನಗಳು ಸಮರ್ಪಕವಾಗಿ ಬಳಸಲು ಪಕ್ಷಾತೀತವಾಗಿ ಸಹಕಾರ ನೀಡಿದ ಎಲ್ಲಾ ನಗರಸಭಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಕೆ ವೈ ನಂಜೇಗೌಡ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿಸಿ ಲಕ್ಷ್ಮೀ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದಿಂದ ಅನುದಾನಗಳು ತರುವುದು ನನ್ನ ಜವಾಬ್ದಾರಿ ಅದನ್ನು ಕಾರ್ಯರೂಪಕ್ಕೆ ತರುವುದು ನಗರಸಭೆ ಆಡಳಿತ ಸದಸ್ಯರು ಹಾಗೂ ಅಧಿಕಾರಿಗಳದ್ದಾಗಿರುತ್ತದೆ.
ಅದರಂತೆ ನಗರಸಭೆಗೆ ಸರ್ಕಾರದಿಂದ ತಂದ ಅನುದಾನಗಳನ್ನು ಸಮರ್ಪಕವಾಗಿ ವಾರ್ಡುಗಳ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ.
ಈಗಿರುವ ನಗರಸಭೆ ಕಚೇರಿ ಕಿರಿದಾಗಿದ್ದು ನಗರಸಭೆ ಕಚೇರಿಯನ್ನು ನಗರದ ರೈಲ್ವೆ ಸೇತುವೆ ಬಳಿ ಇರುವ ಲೋಕೋಪಯೋಗಿ ಇಲಾಖೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಸುಸಜ್ಜಿತವಾದ ನಗರಸಭೆ ಕಾರ್ಯಾಲಯ ನಿರ್ಮಿಸಲು ಆ ಜಮೀನು ಮಂಜೂರು ಮಾಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು ಪುರಸಭೆಯನ್ನು ನಗರಸಭೆಯನ್ನಾಗಿ ಮೇ ಲ್ದರ್ಜೆಗೆ ಏರಿಸಿರುವುದು ಇದೆ ಅವಧಿಯಲ್ಲಿ ಬಸ್ ನಿಲ್ದಾಣವನ್ನು ೨೦ ಕೋಟಿ ೫೦ ಲಕ್ಷ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ರಂಗಮಂದಿರವನ್ನು ಒಂದುವರೆ ಕೋಟಿ ರೂಗಳ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿ ಕಾಮಗಾರಿ ಕೈಗೆ ತ್ತಿಕೊಳ್ಳಲಾಗಿದೆ ಎಸ ಎಫ್ ಸಿ ವಿಶೇಷ ಅನುದಾನ ೨೦ ಕೋಟಿ ರೂಗಳ ವೆಚ್ಚದಲ್ಲಿ ಪಟ್ಟಣದ ಎಲ್ಲಾ ಮುಖ್ಯ ರಸ್ತೆಗಳ ೨೪ ಕಿಲೋಮೀಟರ್ ರಸ್ತೆಗಳನ್ನು ಡಾಂಬರೀಕರಣ ಮಾಡಿ ಅಭಿವೃದ್ಧಿಪಡಿಸಲಾಗುವುದು ಕಸವನ್ನು ವಿಲೇವಾರಿ ಮಾಡಲು ದೊಡ್ಡ ಇಗ್ಗಲೂರು ಬಳಿ ಕಸವಿಲೆವಾರಿ ಘಟಕ ಪಟ್ಟಣದ ಮುಖ್ಯ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಎರಗೋಳು ನೀರು ಪ್ರತಿ ಮನೆಗೆ ಸರಬರಾಜು ಮಾಡುವುದು ರೂ. ೩೭ ಕೋಟಿ ರೂಗಳ ವೆಚ್ಚದಲ್ಲಿ ಮೇಲ್ಮಟ್ಟದ ಎರಡು ಜಲಸಂಗ್ರಹಗಳು ನಾಲ್ಕು ವಿಭಾಗಗಳಿಗೆ ಎರಗೋಳು ನೀರು ಪ್ರತಿ ಮನೆಗೆ ಮೀಟರ್ ಸಮೇತ ನಳಸಂಪರ್ಕ ನೀಡಲು ಈ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಅಭಿವೃದ್ಧಿ ಕೆಲಸಗಳ ನಿರ್ವಹಣೆಗೆ ಅಧಿಕಾರಿಗಳು ಕೈಗೊಂಡಿರುವ ಕೆಲಸಗಳಿಗೆ ಎಲ್ಲಾ ಸದಸ್ಯರು ಸಹಕಾರ ನೀಡಿರುವುದು ತೃಪ್ತಿ ತಂದಿದೆ ಪಕ್ಷಾತೀತವಾಗಿ ನಗರಸಭೆಯ ಅಭಿವೃದ್ಧಿಗೆ ಸಹ ಕಾರ ನೀಡಿದ ಎಲ್ಲಾ ಸದಸ್ಯರಿಗೆ ನಗರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು
ಈಗಿರುವ ಮಟನ್ ಮಾರ್ಕೆಟ್ ಶಿಥಿಲಗೊಂಡಿದ್ದು ಅದನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಸುಸಜ್ಜಿತವಾದ ಮಟನ್ ಮಾರ್ಕೆಟ್ ನಿರ್ಮಿಸಲು ಡಿಪಿಆರ್ ಸಿದ್ದಪಡಿಸಲು ಸಭೆಯ ಅನುಮೋದನೆ ಪಡೆಯಲಾಯಿತು ೨೦೨೬ ೨೭ ನೇ ಸಾಲಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾ ಯೋಜನಾ ಸಮಿತಿಗೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಈಗಿನ ನಗರಸಭೆಗೆ ಕೊನೆಯ ಸಭೆ ಯಾಗಿರುವುದರಿಂದ ನಗರಸಭಾ ಆಡಳಿತ ಮಂಡಳಿ ವತಿಯಿಂದ ಶಾಸಕ ಕೆ ವೈ ನಂಜೇಗೌಡ ಅವರನ್ನು ಅಭಿನಂದಿಸಿ ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡರು
ಸಭೆಯಲ್ಲಿ ಉಪಾಧ್ಯಕ್ಷೆ ಲಕ್ಷ್ಮಿ ಸ್ಥಾಯಿ ಸಮಿತಿ ಅಧ್ಯಕ್ಷ ಎ ರಾಜಪ್ಪ ಪೌರಾಯುಕ್ತ ಎ ಬಿ ಪ್ರದೀಪ್ ಕಚೇರಿ ವ್ಯವಸ್ಥಾಪಕಿ ಮುಕ್ತಿಯರ್ ಬಾನು ಕಂದಾಯ ಅಧಿಕಾರಿ ಚಂದ್ರು ಕಂದಾಯ ನಿರೀಕ್ಷಕ ಅನಿಲ್ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ನಗರಸಭೆಯ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಿದ್ದರು.






























