ಜಮಖಂಡಿ:ಅ.27: ಕುಂಬಾರ ಸಮಾಜ ಅತಿ ಸಣ್ಣ ಸಮಾಜ ಆದರು ಕೂಡ ಸರ್ಕಾರದಿಂದ ಒಂದು ರೂಪಾಯಿ ಅನುದಾನ ತೆಗೆದುಕೊಳ್ಳದೆ ತಮ್ಮ ಸ್ವಂತ ದುಡಿಮೆಯಿಂದ ಸಮಾಜದ ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಿದ್ದು ಶ್ಲಾಘನೀಯ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಕುಂಬಾರ ಗಲ್ಲಿಯಲ್ಲಿ ಶ್ರೀ ಲಕ್ಕಮ್ಮ ದೇವಿ ಹಾಗೂ ಶ್ರೀ ಚೌಡೆಶ್ವರಿ ದೇವಿಯ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿ ಇವತ್ತಿನ ದಿವಸ ಹಲವಾರು ಕಡೆ ದೊಡ್ಡ ದೂಡ್ಡ ಸಮಾಜದವರು ಸಮುದಾಯ ಭವನ ಕಟ್ಟುವದನ್ನು ನಾವು ನೋಡಿದ್ದೇವೆ ಇಂತಹ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಇದ್ದರು ಕೂಡ ಸಮಾಜದ ಪಟ್ಟಿ ಕೂಡಿಸುವ ಜೋತೆಗೆ ಸರ್ಕಾರದ ಅನುದಾನ ತೆಗೆದು ತಮ್ಮ ಸಮುದಾಯದ ಭವನಗಳನ್ನ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ ಕುಂಬಾರ ಸಮಾಜ ಅತಿ ಸನ್ನ ಸಮಾಜ ಇದ್ದರು ಕೂಡ ಸರ್ಕಾರದಿಂದ ಒಂದು ರೂಪಾಯಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ನಮ್ಮ ಸ್ವಂತ ದುಡಿಮೆಯಿಂದ ಸಮಾಜದ ಸಮುದಾಯ ಭವನ ಕಟ್ಟು ಬೇಕು ಅಂತ ಹೇಳಿ ಛಲವನ್ನು ತೊಟ್ಟು ಆ ಸಮುದಾಯ ಭವನವನ್ನ ಉದ್ಘಾಟನೆ ಮಾಡುತಿದ್ದಾರಲ್ಲ ಆ ಕುಂಬಾರ ಸಮಾಜಕ್ಕೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಬಹಳ ಒಳ್ಳೆಯ ಕಾರ್ಯ ನಿವೆಲ್ಲ ಸೇರಿ ಮಾಡಿದ್ದಿರಿ ಕುಂಬಾರ ಸಮಾಜದ ಹಾಗೂ ಗಾಣಿಗ ಸಮಾಜದ ಒಂದು ಅವಿನಾಭಾವ ಸಂಬಂಧ ಇದೆ ಯಾಕೆಂದರೆ ನಿವು ಮಣ್ಣಿನಿಂದ ಪನತಿ(ದ್ವೀಪ) ಮಾಡುತ್ತಿರಿ ನಾವು ಆ ಪನತಿಯಲ್ಲಿ(ದ್ವೀಪ) ಎಣ್ಣಿ ಹಾಕಿ ಜೋತಿ ಬೇಳಗಿಸುವ ಕಾರ್ಯ ಮಾಡುತ್ತೆವೆ ಇದೆ ಕುಂಬಾರ ಮತ್ತು ಗಾಣಿಗ ಸಮಾಜದ ಅವಿನಾಭಾವ ಸಂಭಂದ ಇದು ಬಹಳ ಪವಿತ್ರವಾದ ಸಂಭಂದ ಆದರಿಂದ ಇವತ್ತಿನ ದಿವಸ್ ನಮ್ಮಿಂದ ಸಣ್ಣ ಸಣ್ಣ ಸಮಾಜಗಳಿಗೆ ಶಕ್ತಿ ತುಂಬವ ಮತ್ತು ದ್ವನಿ ಕೊಡುವ ಕಾರ್ಯ ಆಗಬೇಕಾಗಿದೆ ನಾವು ನಿಮ್ಮ ಜೋತೆಗೆ ಸದಾ ಬೆನ್ನೆಲುಬಾಗಿ ಇರುತ್ತಿವಿ ಎಂದರು.
ಕಲ್ಯಾಣ ಮಠದ ಶ್ರೀ ಗೌರಿಶಂಕರ ಶಿವಾಚಾರ್ಯರು,ಓಲೆ ಮಠದ ಶ್ರೀ ಆನಂದ ದೇವರು ಆಶಿರ್ವಚನ ನೀಡಿ ಮಾತನಾಡಿದರು.
ಬಸವರಾಜ ಸಿಂಧೂರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು
ಬಸವರಾಜ ಹೋಳೆಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು
ನಗರಸಭೆ ಅದ್ಯಕ್ಷ ಈಶ್ವರ ವಾಳೆನ್ನವರ,ಮಾಜಿ ನಗರಸಭೆ ಸದಸ್ಯ ಪರಮಾನಂದ ಚಿಗರಿ,ಅಶ್ಪಾಕ ಪಕಾಲಿ,ಸಂಗಮೇಶ ಅರಕೇರಿ,
ರಾಮದುರ್ಗ ತಹಶಿಲ್ದಾರ ಪ್ರಕಾಶ ಹೋಳೆಪ್ಪಗೋಳ,ಪಿ.ಎಸ್.ಐ ಅನೀಲ ಕುಂಬಾರ,ಸುಮಿತ್ರಾ ತುಪ್ಪದ ಇನ್ನಿತರರು ಇದ್ದರು.
ಗುರುರಾಜ ಕುಂಬಾರ ಸ್ವಾಗತಿಸಿದರು
ಮಲ್ಲು ಹಂಚಿನಾಳ ನೀರುಪಿಸಿ
ವಂದಿಸಿದರು























