Home ಜಿಲ್ಲೆ ಕಲಬುರಗಿ 27 ವರ್ಷ ಕಳೆದರು ಗುರುಗಳಿಗೆ ಗೌರವಿಸುತ್ತಿರುವುದು ಶ್ಲಾಘನೀಯ : ವಿಶ್ವರಾಧ್ಯ ಶಿವಾಚಾರ್ಯರು

27 ವರ್ಷ ಕಳೆದರು ಗುರುಗಳಿಗೆ ಗೌರವಿಸುತ್ತಿರುವುದು ಶ್ಲಾಘನೀಯ : ವಿಶ್ವರಾಧ್ಯ ಶಿವಾಚಾರ್ಯರು

ಅಫಜಲಪುರ:ಜೂ.1: 27 ವರ್ಷಗಳ ಗತಿಸಿದರು ತಮ್ಮನ್ನು ತಿದ್ದಿ, ತೀಡಿ ಜೀವನದ ಸರಿ ದಾರಿಯಲ್ಲಿ ಮುನ್ನಡೆಸಿದ ಗುರುಗಳನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿರುವ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

ಅಫಜಲಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗುರು ಭವನದಲ್ಲಿ 1997-98ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಜೀವನದಲ್ಲಿ ಯಶಸ್ಸು ಗಳಿಸಿದ ನಂತರ ತಮ್ಮ ಬೇರುಗಳನ್ನು, ಕಲಿತ ಶಾಲೆಯನ್ನು ಹಾಗೂ ಪಾಠ ಹೇಳಿಕೊಟ್ಟ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದ್ಯೆ ನೀಡಿದ ಗುರುಗಳನ್ನು ಮರೆಯದಿರುವುದು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದೆ ಎಂದ ಅವರು ತಮ್ಮ ಬದುಕಿಗೆ ದಾರಿ ತೋರಿದ ಗುರುಗಳ ಋಣ ತೀರಿಸಲು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿರುವುದು ಅನುಕರಣೀಯ ಕಾರ್ಯವಾಗಿದೆ. ಇಂದಿನ ಸ್ವಾರ್ಥಮಯ ಯುಗದಲ್ಲಿ ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಾಮಾಚಾರ್ಯ, ಗುರುಸಿದ್ದಯ್ಯ ಹಿರೇಮಠ, ಎನ್.ಜಿ. ದೇಗಾಂವ, ಸಿದ್ರಾಮಯ್ಯ ಮಠ, ಎಸ್.ಎಂ. ಕಾಮಗೊಂಡ, ಎಸ್.ಎಸ್. ದೇವೂರ, ಮುನೀರ ಪಟೇಲ, ಆರ್.ಜಿ. ದೇಸಾಯಿ, ಶೇಖಪ್ಪ ಜೋಗುರ, ಮಲ್ಲಿಕಾರ್ಜುನ ಸಿಂದಗಿ, ಮಹಾಂತಪ್ಪ ಬಟವಾಲ, ಜಾಲಾಲ ಭಾಸ್ಕರ್ ಕುಂಬಾರ ಹಾಗೂ ಹಣಮಂತ ಅವಟೆ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ ಜೋಗೂರ, ರಾಘವೇಂದ್ರ ಚಿನಿವಾರ, ಗುಂಡು ಅಂಬೂರೆ, ಸಿದ್ಧರಾಮ ರಾಣಿ, ಭೀಮಾಶಂಕರ ಪತ್ತಾರ, ಅನೀಲ ಸಿಂಪಿ, ಚಂದ್ರಕಾಂತ ಸಿಂಗೆ, ಶಿವಾನಂದ ಅವಟೆ, ಬೋಗಪ್ಪ ಆಸಂಗಿಹಾಳ, ಗಾಯತ್ರಿ ಮಹಾಮನಿ, ವಿದ್ಯಾ ನಾಟೀಕಾರ, ಅನುರಾಧಾ ಪೆÇಟೋಡೆ, ಪ್ರೀತಿ ಆಲಮೇಲಕರ, ಗೀತಾ ಬಯಾಸ, ಸುಶೀಲ ಅಗ್ನಿಹೋತ್ರಿ, ಗಂಗಾ ಪಾಟೀಲ ಸೇರಿದಂತೆ 1997-98ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಗುರು ಶಿಷ್ಯರ ಸಂಬಂಧ ಹೇಗಿರಬೇಕೆನ್ನುವುದನ್ನು ನಮ್ಮ ಪುರಾಣ ಕಥೆಗಳನ್ನು ನೋಡಿ ಕಲಿಯಬೇಕು, ಹಾಗೆ ನಮ್ಮ ಹಿಂದಿನ ಗುರುಕುಲ ಪದ್ದತಿಯಲ್ಲಿ ಗುರು ಶೀಷ್ಯರ ಪವಿತ್ರ ಸಂಬಂಧ ಕುರಿತು ಕಾಣಬಹುದಾಗಿದೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದಿರುವ 1997-98ನೇ ಸಾಲಿನ ವಿದ್ಯಾರ್ಥಿಗಳು ಇಂದು ತಮ್ಮ ಬದುಕಿನಲ್ಲಿ ಸಾಕಷ್ಟು ಸಾಧನೆ ಪ್ರಗತಿ ಸಾಧಿಸಿದರೂ ಕೂಡ ತಮಗೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗೌರವಿಸುತ್ತಿರುವುದು ನೋಡಿದರೆ ಗುರು ಪರಂಪರೆಯ ಮಹತ್ವ ಎಂಥದ್ದು ಎನ್ನುವುದು ಗೊತ್ತಾಗುತ್ತದೆ ಎಂದರು.

  • ಶ್ರೀ ಜಯಗುರು ಶಾಂತಲಿಂಗರಾದ್ಯ ಶಿವಾಚಾರ್ಯರು