ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆ


ಲಕ್ಷೆ÷್ಮÃಶ್ವರ,ಜೂ.೮: ಪಟ್ಟಣದ ಟಿ.ಬಿ.ಮಾನ್ವಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗದಗ ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಶಿರಹಟ್ಟಿ ಪ್ರಾದೇಶಿಕ ಅರಣ್ಯ ವಲಯ ವಿಭಾಗ ಮತ್ತು ಕಾನೂನು ಸೇವೆಗಳ ಸಮಿತಿ ಟಿ.ಬಿ.ಮಾನ್ವಿ ಪ.ಪೂ. ಕಾಲೇಜಿನ ಸಯುಕ್ತಶ್ರಾಯದಲ್ಲಿ ವಿಶ್ವ ಪರಿಸರ ದಿನಾಚರಣೆವನ್ನು ಆಚರಿಸಲಾಯಿತು.


ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಿಮಿಸಿದ ನ್ಯಾಯಧೀüಶರಾದ ಸತೀಶ ಎಂ ಅವರು ಸಸಿ ನೆಟ್ಟು ನೀರು ಎರೆದು ಚಾಲನೆ ನೀಡಿದರು. ಬಳಿಕ ಮಾತನಾಡಿ
ದಿನದಿಂದ ದಿನಕ್ಕೆ ಪರಿಸರ ಸಮತೋಲನೆಯನ್ನು ಕಳೆದುಕೊಳ್ಳುತ್ತಿದ್ದು ಹೆಚ್ಚುತ್ತಿರುವ ಕಲುಷಿತ ವಾತವರಣದಿಂದಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಪರಿಸರದ ಉಳಿವಿಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕು ಎಂದು ಹೋರಾಟ ಮಾಡಬೇಕಿದೆ ಪರಿಸರ ನಾಶ ಮಾಡಿದರೆ ಮುಂದೊAದು ದಿನ ಇಡಿ ವಿಶ್ವವೇ ನಾಶವಾಗುವ ಕಾಲ ದೂರವಿಲ್ಲ ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಯುತ್ತದೆ ಎಂದು ಹೇಳಿ ಪ್ರತಿಯೊಬ್ಬರೂ ಪರಿಸರ ಪ್ರಜ್ಞೆಯನ್ನು ಹೊಂದಬೇಕು ಎಂದರು.


ಶಿರಹಟ್ಟಿ ಪ್ರದೇಶಿಕ ವಲಯ ಅರಣ್ಯಾಧಿಕಾರಿ ಮೇಘನಾ ಅವರು ಮಾತನಾಡಿ ಪ್ಲಾಸ್ಟಿಕ್ ಮುಕ್ತ ಭಾರತ ಸ್ವಚ್ಚ ಪರಿಸರಕ್ಕಾಗಿ ನಾವು ಎಲ್ಲರೂ ಪ್ರತಿಜ್ಞೆ ಮಾಡಬೇಕಿದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಸಸಿಯನ್ನು ನೆಟ್ಟು ಅದನ್ನು ಮರವನ್ನಾಗಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.


ಅಧ್ಯಕ್ಷತೆಯನ್ನು ಪ್ರಾಚಾರ್ಯರ ಮಂಜುನಾಥ ಕೊಕ್ಕರಗುಂದಿ ವಹಿಸಿದರು.ಅತಿಥಿಗಳಾಗಿ ನ್ಯಾಯವಾಧಿಗಳ ಸಂಘದ ಅಧ್ಯಕ್ಷರಾದ ಬಸವರಾಜ ಬಾಳೇಶ್ವರಮಠ ಎಂ.ಬಿ.ಪಾಟೀಲ್ ಪ್ರಭಾ ತೇಲಿ ಸೇರಿದಂತೆ ಅನೇಕರು ಇದ್ದರು ಮಂಜುನಾಥ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು.